
ನಟ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಮಾಜಿ ಪತ್ನಿ ಆರತಿ ಬಜಾಜ್ ಅವರ ಮಗಳು ಆಲಿಯಾ ಕಶ್ಯಪ್ ಇತ್ತೀಚೆಗೆ ಮದುವೆಯಾದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಈ ಜೋಡಿಯ ಮದುವೆಯಾಗಿದೆ. ಆಲಿಯಾ ಅವರು, ವಿದೇಶಿ ಯುವಕ ಶೇನ್ ಗ್ರೆಗೊಯಿರ್ ಅವರ ಜೊತೆ ದೀರ್ಘ ಕಾಲ ಡೇಟಿಂಗ್ನಲ್ಲಿದ್ದರು. ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 11ರಂದು ಇವರ ಮದುವೆ ಮುಂಬೈನ ಮಹಾಲಕ್ಷ್ಮೀ ರೇಸ್ ಕೋರ್ಸ್ನಲ್ಲಿರುವ ಬಾಂಬೆ ಕ್ಲಸ್ನಲ್ಲಿ ನಡೆದಿದೆ. ಆದರೆ ಇದೀಗ ಮದುವೆಗೂ ಮುನ್ನ ನಡೆದ ಅರಿಶಿಣ ಶಾಸ್ತ್ರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರಲ್ಲಿ ಜೋಡಿ ಮಂಚದ ಮೇಲೆ ಮುದ್ದು ಮಾಡುವುದನ್ನು ನೋಡಬಹುದು. ಮಂಚವನ್ನು ಮೊದಲ ರಾತ್ರಿಯ ಹಾಗೆ ಹೂವಿನಿಂದ ಶೃಂಗಾರ ಮಾಡಲಾಗಿದೆ. ಹಳದಿ ಹೂವುಗಳನ್ನು ಈ ಜೋಡಿಯ ಮೇಲೆ ಎಸೆಯಲಾಗುತ್ತಿದೆ. ಮಂಚದ ಮೇಲೆ ಜೋಡಿ ನೋಡಿ ಇದು ಅರಿಶಿಣ ಶಾಸ್ತ್ರವೋ, ಮೊದಲ ರಾತ್ರಿಯೋ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ಶೇನ್ ಗ್ರೆಗೊಯಿರ್ ರಾಕೆಟ್ ಪವರ್ಡ್ ಸೌಂಡ್ನ ಸಂಸ್ಥಾಪಕ. 23 ವರ್ಷದ ಈತ ಅಮೆರಿಕಾದ ಮೂಲದ ಉದ್ಯಮಿಯು ಹೌದು. ಆಲಿಯಾ ಮತ್ತು ಶೇನ್ ನಡುವೆ ಇಂಡೋನೇಷ್ಯಾದ ಬಾಲಿಯಲ್ಲಿ ಪ್ರೀತಿ ಚಿಗುರೊಡೆಯಿತು. ಬಳಿಕ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು.
ಪಾರದರ್ಶಕ ಡ್ರೆಸ್ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್: ನೆಟ್ಟಿಗರು ಸುಮ್ನೆ ಇರ್ತಾರಾ?
ಇನ್ನು ಇವರ ಮದುವೆಯ ದಿನದ ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ವಿಡಿಯೋದಲ್ಲಿ ಅನುರಾಗ್ ಕಶ್ಯಪ್ ಡಿಜೆ ಕನ್ಸೋಲ್ ಹಿಂದೆ ನಿಂತು ಕಾಕ್‌ಟೇಲ್ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಡಾನ್ಸ್ ಮಾಡಿದ್ದರು. ಅನುರಾಗ್ ಮತ್ತು ಗಣೇಶ್ ಅಗ್ನಿಪಥ್ ಅವರು ಚಿಕಿನಿ ಚಮೇಲಿ ಹಾಡಿ ಎಲ್ಲರನ್ನೂ ರಂಜಿಸಿದ್ದರು.
ಅನುರಾಗ್ ಸಿಂಗ್ ಕಶ್ಯಪ್ ಅವರು ಕುರಿತು ಹೇಳುವುದಾದರೆ, ಇವರು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಕಶ್ಯಪ್ ಅವರು ಪಾಂಚ್ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು. ಚಲನಚಿತ್ರ ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿರುವ ಅವರು, 1993 ರ ಮುಂಬೈ ಬಾಂಬ್ ದಾಳಿಯ ಬಗ್ಗೆ ವಿವಾದಾತ್ಮಕ ಮತ್ತು ಪ್ರಶಸ್ತಿ ವಿಜೇತ ಹಿಂದಿ ಚಿತ್ರ ಬ್ಲ್ಯಾಕ್ ಫ್ರೈಡೇ (2004)ಯಿಂದ ಫೇಮಸ್ ಆದವರು. ಬಳಿಕ ನೋ ಸ್ಮೋಕಿಂಗ್ (2007), ದೇವ್ ಡಿ (2009), ಗುಲಾಲ್ (2009), ದಟ್ ಗರ್ಲ್ ಇನ್ ಯೆಲ್ಲೊ ಬೂಟ್ಸ್ (2011) ಮತ್ತು ಗ್ಯಾಂಗ್ಸ್ ಆಫ್ ವಾಸ್ಸೇಪುರ್ (2012) ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಚಿತ್ರಕಥೆಗಾರರಾಗಿ, ಅವರು ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತ ಸತ್ಯ (1998) ಮತ್ತು ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶಿತ ಕೆನಡಾದ ಚಲನಚಿತ್ರ ವಾಟರ್ (2005) ಚಿತ್ರಕಥೆಗಳನ್ನು ಬರೆದಿದ್ದಾರೆ. ಅವರು 2009 ರಲ್ಲಿ ಅನುರಾಗ್ ಕಶ್ಯಪ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ತಮ್ಮ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು. ಇವರ ಪುತ್ರಿ ಆಲಿಯಾ ಸಿನಿ ಪ್ರಪಂಚದಿಂದ ದೂರ ಇದ್ದಾರೆ.
ನಾನೂ ರಾಮಭಕ್ತೆ, ಪ್ಲೀಸ್ ಕ್ಷಮಿಸಿಬಿಡಿ... ಅತಿಥಿಗಳನ್ನು ಹೊಗಳೋ ಭರದಲ್ಲಿ ಎಡವಟ್ಟು ಮಾಡಿ ಪೇಚಿನಲ್ಲಿ ಆ್ಯಂಕರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.