KKR vs MI: ಇಶಾನ್ ಕಿಶನ್ ಔಟ್ ಆದಾಗ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ, ವಿಡಿಯೋ ವೈರಲ್

Published : Apr 17, 2023, 05:23 PM ISTUpdated : Apr 17, 2023, 06:24 PM IST
KKR vs MI: ಇಶಾನ್ ಕಿಶನ್ ಔಟ್ ಆದಾಗ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ, ವಿಡಿಯೋ ವೈರಲ್

ಸಾರಾಂಶ

KKR vs MI: ಇಶಾನ್ ಕಿಶನ್ ಔಟ್ ಆದಾಗ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ ಅವರ ವಿಡಿಯೋ ವೈರಲ್ ಆಗಿದೆ.  

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಸುಹಾನಾ ಇದೀಗ ಐಪಿಎಲ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸುಹಾನಾ ಆಗಾಗ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ನಡುವಿನ ಪಂದ್ಯದ ವೇಳೆ ಸುಹಾನಾ ಖಾನ್‌ ಕೆಟ್ಟ ಪದ ಬಳಸಿದ್ದಾರೆ. ಸುಹಾನಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.  

ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ವೀಕ್ಷಣೆಗೆ ಸ್ನೇಹಿತರು ಮತ್ತು ಕಿರಿಯ ಸಹೋದರ ಅಬ್ರಾಮ್ ಜೊತೆ ಸುಹಾನಾ ಮೈದಾನಕ್ಕೆ ಆಗಮಿಸಿದ್ದರು. ತಮ್ಮ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಹುರಿದುಂಬಿಸಿದರು. ಮುಂಬೈ ಇಂಡಿಯನ್ಸ್ ಆರಂಭಿಕ ಇಶಾನ್‌ ಕಿಶನ್‌ ಔಟ್ ಆದ ಬಳಿಕ ಸುಹಾನಾ ಖಾನ್ ಅವರು ಎಫ್‌ ಪದದಿಂದ ಆರಂಭವಾಗುವ ಅಸಹ್ಯ ಪದ ಬಳಿಸಿದರು. ಸುಹಾನಾ ಬಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಹಾನಾ ವಿಡಿಯೋಗೆ ನೆಟ್ಟಿಗರ ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಒಂದಲ್ಲೊಂದು ವಿಚಾರಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗುವ ಸುಹಾನಾ ಈ ಬಾರಿ ಕೆಟ್ಟ ಪದ ಬಳಿಸಿ ತಗಲಾಕ್ಕೊಂಡಿದ್ದಾರೆ. 

ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು ಆದರೂ 185 ರನ್‌ ದಾಖಲಿಸಿತ್ತು. ಕೆಕೆಆರ್ ತಂಡದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 17.4 ಓವರ್‌ಗಳಿಗೆ 186 ರನ್‌ ಗಳಿಸಿ 5 ವಿಕೆಟ್‌‌ಗಳ ಗೆಲುವು ದಾಖಲಿಸಿತು.

Suhana Khan: ದೀಪಿಕಾ ಪಡುಕೋಣೆ ಸ್ಥಾನ ಗಿಟ್ಟಿಸಿಕೊಂಡ ಶಾರುಖ್​ ಪುತ್ರಿ, ಏನಿದು ಗುಟ್ಟು?

ಸುಹಾನಾ ಕ್ರೀಡೆ ಜೊತೆಗೆ ನಟನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ನೆಟ್‌ಫ್ಲಿಕ್ಸ್‌ನ  ದಿ ಆರ್ಚೀಸ್‌ ಸಿನಿಮಾದಲ್ಲಿ ಸುಹಾನಾ ನಟಿಸಿದ್ದಾರೆ. ಈ ಚಿತ್ರಕ್ಕೆ ಜೋಯಾ ಅಖ್ತರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅಮೆರಿಕಾದ ಜನಪ್ರಿಯ ಕಾಮಿಕ್ ಪುಸ್ತಕ ಸರಣಿಯೆ ಭಾರತೀಯ ರೂಪಾಂತರವಾಗಿದೆ. ಈ ಸಿನಿಮಾದಲ್ಲಿ ಸುಹಾನಾ ಜೊತೆಗೆ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಖುಷಿ ಕಪೂರ್ ಮಿಹಿರಿ ಅಹುಜಾ ಸೇರಿದಂತೆ ಅನೇಕರು ನಟಿಸಿದ್ದಾರೆ. 

ಈ ವಿಷಯಕ್ಕೆ ಶಾರುಖ್​ರನ್ನ ಗೇಲಿ ಮಾಡ್ತಿದ್ರಂತೆ ಮಗಳು ಸುಹಾನಾ ಖಾನ್​!

ಈ ಸಿನಿಮಾ ಸುಹಾನಾ ಜೊತೆಗೆ ಶ್ರೀದೇವಿ ಪುತ್ರಿ ಖುಷಿ, ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದ  ಅವರ ಚೊಚ್ಚಲ ಸಿನಿಮಾವಾಗಿದೆ. ಸುಹಾನಾ ಖಾನ್ ಮೊದಲ ಸಿನಿಮಾ ಹೇಗಿರಲಿದೆ ಎಂದು ನೋಡು ಅಭಿಮಾನಿಗಳು ಕಾತರರಾಗಿದ್ದಾರೆ. ನೇರವಾಗಿ ಒಟಿಟಿಗೆ ಎಂಟ್ರಿ ಕೊಟ್ಟಿರುವ ಸುಹಾನಾ ಈ ಸಿನಿಮಾ ಬಳಿಕ ಮತ್ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ ಸುಹಾನಾ ಸಿನಿಮಾರಂಗದಲ್ಲೇ ಮುಂದುವರೆಯುತ್ತಾರಾ ಅಥವಾ ತಂದೆಯ ಬ್ಯುಸಿನೆಸ್ ಕಡೆ ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!