ನಗ್ನತೆಗೆ ಪ್ರಚೋದಿಸುತ್ತೆ OTT ಫ್ಲ್ಯಾಟ್​ಫಾರ್ಮ್​: ನಟಿ ಜರೀನಾ ವಾಹಬ್​ ಬೇಸರ

By Suvarna NewsFirst Published Apr 17, 2023, 4:19 PM IST
Highlights

ಓಟಿಟಿ ಫ್ಲ್ಯಾಟ್​ಫಾರ್ಮ್​ ಅಶ್ಲೀಲತೆಯ ಕೂಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟಿ ಜರೀನಾ ವಾಹಬ್​. ಅವರು ಹೇಳಿದ್ದೇನು? 
 

ಪ್ರತಿಕೂಲ ಪರಿಣಾಮ ಬೀರುವ ಕಂಟೆಂಟ್‌ ಪ್ರದರ್ಶಿಸುವ ಒಟಿಟಿ ವೇದಿಕೆಗಳು, ನ್ಯೂಸ್‌ ಪೋರ್ಟಲ್‌ಗಳು, ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧನೆ ಒಳಪಡಿಸುವ ಉದ್ದೇಶದಿಂದ ಕೆಲ ತಿಂಗಳ ಹಿಂದೆ  ಸುಪ್ರೀಂ ಕೋರ್ಟ್‌ ಇವುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಸೇರಿಸಿ ಮಹತ್ವದ ಆದೇಶ ಹೊರಡಿಸಿದ್ದು ನೆನಪಿದೆಯೆ?  ಸುಪ್ರೀಂಕೋರ್ಟ್​ ಆದೇಶದ ಅನ್ವಯ ಕೇಂದ್ರ ಸರಕಾರವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌, ಹಾಟ್‌ಸ್ಟಾರ್‌ ಮುಂತಾದ ಒಟಿಟಿ (ಓವರ್‌ ದಿ ಟಾಪ್‌-OTT) ಪ್ಲಾಟ್‌ಫಾರಂಗಳನ್ನು ಕೂಡ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಸೇರಿಸಿದೆ. ಇನ್ನು ಮುಂದೆ ಕೇಂದ್ರ ಸರಕಾರದ ನಿಯಮಗಳನ್ನು ಮೀರಿ ಚಲನಚಿತ್ರಗಳು, ವೆಬ್‌ಸಿರೀಸ್‌ಗಳನ್ನು ಒಟಿಟಿಯಲ್ಲಿ ಪ್ರಸಾರ ಮಾಡುವಂತಿಲ್ಲ; ಪೋರ್ಟಲ್‌ಗಳಲ್ಲಿ (Web Portal) ಬೇಕಾಬಿಟ್ಟಿಯಾಗಿ ಸುದ್ದಿ ಪ್ರಸಾರ ಮಾಡುವಂತೆಯೂ ಇಲ್ಲ.  ಅಶ್ಲೀಲ ಕಂಟೆಂಟ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. 

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಿತಿಮೀರಿದ ಸ್ವಾತಂತ್ರ್ಯವನ್ನು ಅನುಭವಿಸಿದು ತಪ್ಪು. ಈ ವಿಷಯದಲ್ಲಿ ಒಟಿಟಿ ವೇದಿಕೆಗಳಿಗೆ ಯಾವುದೇ ಲಂಗುಲಗಾಮ ಇರಲಿಲ್ಲ. ಎಲ್ಲರಿಗೂ ಸಹ್ಯವಾಗುವ, ಎಲ್ಲರಿಗೂ ಒಪ್ಪಿಗೆಯಾಗುವ ಕಂಟೆಂಟ್‌ ಅನ್ನು ನೀವು ನಿರೀಕ್ಷಿಸುವಂತೆ ಇರಲಿಲ್ಲ. ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಬಹಳಷ್ಟು ವೆಬ್‌ಸಿರೀಸ್‌ಗಳು - ಸಿನಿಮಾಗಳು ಮಹಿಳೆಯರು, ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ, ಹಿಂಸೆಯನ್ನು ವಿಜೃಂಭಿಸುವ, ಸಂಸ್ಕೃತಿಗೆ ಧಕ್ಕೆ ತರುವ, ದೇಶದ ಸಾರ್ವಭೌಮತ್ವ ಪ್ರಶ್ನಿಸುವ, ರೌಡಿಸಮ್‌ಗೆ ಪ್ರೇರೇಪಿಸುವಂಥ ಕಥಾವಸ್ತುಗಳನ್ನು ಹೊಂದಿವೆ ಎನ್ನುವುದು ಇದರ ಉದ್ದೇಶವಾಗಿತ್ತು. ಸುಪ್ರೀಂಕೋರ್ಟ್​ನ (Supreme Court) ಈ ಕ್ರಮಕ್ಕೆ ಒಟಿಟಿ ಪ್ಲಾಟ್‌ಫಾರಂಗಳ ಕಂಟೆಂಟ್‌ ಸೃಷ್ಟಿಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವ ನಗ್ನತೆ ಮತ್ತು ಅಶ್ಲೀಲತೆಯ ಕುರಿತು ಇದೇ ಮೊದಲ ಬಾರಿಗೆ ನಟಿಯೊಬ್ಬರು ಬಹಿರಂಗವಾಗಿ ಮಾತನಾಡಿದ್ದಾರೆ. ಆದಿತ್ಯ ಪಾಂಚೋಲಿ ಅವರ ಪತ್ನಿ, ನಟಿ ಜರೀನಾ ವಾಹಬ್ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನಗ್ನತೆ ಮತ್ತು ಅಶ್ಲೀಲತೆಯ ಕೀಳುಮಟ್ಟದ ಪ್ರಭಾವದ ಕುರಿತು ಮಾತನಾಡಿದ್ದಾರೆ. 

Latest Videos

Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

ನ್ಯೂಸ್ ಪೋರ್ಟಲ್‌ನೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಅವರು ಈ ಕೆಟ್ಟ ಸಂಪ್ರದಾಯದ ಕುರಿತು ಮಾತನಾಡಿದ್ದಾರೆ.  ವೆಬ್ ಸರಣಿ 'ಶೋಸ್ಟಾಪರ್'ನಲ್ಲಿ (Show Stopper) ಪಾತ್ರದಲ್ಲಿ ಇವರಿಗೆ ಆಹ್ವಾನಿಸಲಾಗಿತ್ತು. ಆದರೆ ಅದನ್ನು ರಿಜಿಕ್ಟ್​ ಮಾಡಿದ ನಟಿ ಓಟಿಟಿ ಫ್ಲ್ಯಾಟ್​ಫಾರ್ಮ್​ ಇಂದು ಯಾವ ಮಟ್ಟಕ್ಕೆ ಇಳಿದಿದೆ ಎಂಬ ಬಗ್ಗೆ ತಿಳಿಸಿದ್ದಾರೆ.  ಆದ್ದರಿಂದ ತಾವು ವೆಬ್‌ಸಿರೀಸ್​ನಲ್ಲಿ ನಟಿಸುವುದಕ್ಕೆ ಹಿಂದೇಟು ಹಾಕಿರುವುದಾಗಿ ಹೇಳಿದರು.
 
OTT ಶೋಗಳಲ್ಲಿ ಸಾಕಷ್ಟು ಇಂಟಿಮೇಟ್ (Intimate) ದೃಶ್ಯಗಳಿರುತ್ತವೆ. ಎಲ್ಲವೂ  'ಅಗತ್ಯವಿದೆ' ಎಂದು ನಾನು ಭಾವಿಸುವುದಿಲ್ಲ. ಅನಗತ್ಯವಾಗಿ ಇವುಗಳನ್ನು ತುರುಕಿಸಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಇಂಥ ದೃಶ್ಯಗಳನ್ನುಮಾಡಲು ನಟ-ನಟಿಯರಿಗೇ ಮುಜುಗುರ ಇಲ್ಲದಿದ್ದರೆ ಏನೂ ಮಾಡಲು ಆಗುವುದಿಲ್ಲ. ಹೊಸ ಪೀಳಿಗೆ ಇದೇ ಬೆಸ್ಟ್​ ಎನಿಸಿಕೊಂಡರೆ ಅದು ಅಂತಿಮವಾಗಿ ಅವರಿಗೆ ಬಿಟ್ಟ ವಿಷಯ ಎಂದಿರುವ ನಟಿ ಜರೀನಾ, ಈ ಬಗ್ಗೆ ಹೆಚ್ಚಿನ ಕಾಂಟ್ರವರ್ಸಿ ಮಾಡಲು ಇಷ್ಟಪಡಲಿಲ್ಲ. ಇಂಥ ದೃಶ್ಯಗಳನ್ನು ನೋಡಬೇಕೋ, ಬೇಡವೋ ಎಂದು ನಿರ್ಧರಿಸುವವರು ಅಂತಿಮವಾಗಿ ಜನರೇ ತಾನೆ. ಈ ಬಗ್ಗೆ ಹೆಚ್ಚಿಗೆ ಹೇಳಿ ಪ್ರಯೋಜನವಿಲ್ಲ ಎಂದಿದ್ದಾರೆ.

 ಧೂಮಪಾನ, ಮದ್ಯಪಾನ ಅಮಿತಾಭ್​ ಬಿಟ್ಟಿದ್ದು ಹೇಗೆ? ನಟ ನೀಡಿದ್ರು ಅದ್ಭುತ ಟಿಪ್ಸ್​

ಪ್ರಸ್ತುತ ದೇಶದಲ್ಲಿ ಮುದ್ರಣ ಮಾಧ್ಯಮಗಳನ್ನು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ, ನ್ಯೂಸ್‌ ಚಾನೆಲ್‌ಗಳನ್ನು ನ್ಯೂಸ್‌ ಬ್ರಾಡ್‌ಕಾಸ್ಟರ್‌ ಅಸೋಸಿಯೇಷನ್‌ ನಿಯಂತ್ರಿಸುತ್ತಿವೆ. ಅಡ್ವರ್‌ಟೈಸಿಂಗ್‌ ಸ್ಟ್ಯಾಂಡರ್ಡ್‌ ಕೌನ್ಸಿಲ್‌ ಜಾಹೀರಾತುಗಳಿಗೆ ಮೂಗುದಾರ ಹಾಕುತ್ತದೆ. ಸಿಬಿಎಫ್‌ಸಿ (CBFC) ಚಲನಚಿತ್ರಗಳ ಸೆನ್ಸಾರ್‌ ಮಾಡುತ್ತದೆ. ಆದರೆ, ಡಿಜಿಟಲ್‌ ಕಂಟೆಂಟ್‌ ನಿಯಂತ್ರಕ್ಕೆ ಯಾವುದೇ ಪ್ರಾಧಿಕಾರ ಅಥವಾ ಮಂಡಳಿ ಇರಲಿಲ್ಲ. ಯಾರ ಅನುಮತಿಯೂ ಇಲ್ಲದೆ ನ್ಯೂಸ್‌ ವೆಬ್‌ಸೈಟ್‌ ನಡೆಸಬಹುದಾಗಿತ್ತು.
 

click me!