ಐತಿಹಾಸಿಕ ಈವೆಂಟ್‌ಗೆ ಸಾಕ್ಷಿಯಾಗಿದ್ದು ನನ್ನ ಭಾಗ್ಯ, ರಾಮಲಲ್ಲಾ ಮೂರ್ತಿ ಸುಂದರವಾಗಿದೆ; ನಟ ರಜನಿಕಾಂತ್

Published : Jan 31, 2024, 11:04 PM ISTUpdated : Jan 31, 2024, 11:07 PM IST
ಐತಿಹಾಸಿಕ ಈವೆಂಟ್‌ಗೆ ಸಾಕ್ಷಿಯಾಗಿದ್ದು ನನ್ನ ಭಾಗ್ಯ, ರಾಮಲಲ್ಲಾ ಮೂರ್ತಿ ಸುಂದರವಾಗಿದೆ; ನಟ ರಜನಿಕಾಂತ್

ಸಾರಾಂಶ

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಭಾರತದಲ್ಲಿ ಕೆಲವು ಸಿನಿಮಾ ತಾರೆಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಅವರಲ್ಲಿ ನಟ ರಜನಿಕಾಂತ್ ಕೂಡ ಒಬ್ಬರು. 

ಭಾರತದ ಲೆಜೆಂಡ್‌ ನಟ ರಜನಿಕಾಂತ್ ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಾಗೂ ರಾಮಲಲ್ಲಾ ವಿಗ್ರಹದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟ ರಜನಿಕಾಂತ್ 'ಹೌದು, ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವು ಐತಿಹಾಸಿಕ ಈವೆಂಟ್‌ ಆಗಿದೆ. ಬಹಳ ದಿನಗಳ ಬಳಿಕ ಇಂಥದ್ದೊಂದು ಕಾರ್ಯಕ್ರಮ ನಡೆದಿದ್ದು, ಅದಕ್ಕೆ ನಾನು ಹೋಗಿದ್ದು ಖುಷಿ ತಂದಿದೆ' ಎಂದಿದ್ದಾರೆ. 

ಮುಂದುವರೆದು ಮಾಧ್ಯಮ ಪ್ರತಿನಿಧಿ 'ರಾಮಲಲ್ಲಾ ವಿಗ್ರಹ ಹೇಗಿದೆ, ಎಷ್ಟು ಚೆನ್ನಾಗಿದೆ' ಎಂದು ಕೇಳಲು ನಟ ರಜನಿಕಾಂತ್ 'ಬಹುತ್ ಕೂಬ್‌ಸೂರತ್, ತುಂಬಾ ಚೆನ್ನಾಗಿದೆ' ಎಂದಿದ್ದಾರೆ. ಅಲ್ಲಿಗೆ ನಟ ರಜನಿಕಾಂತ್ ಅವರಿಗೆ ಅಯೋದ್ಯೆ ರಾಮಮಂದಿರ, ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಹಾಗು ಸ್ವತಃ ತಾವು ಅದನ್ನು ನೋಡಿದ್ದು ಎಲ್ಲವೂ ಖುಷಿ ಕೊಟ್ಟಿದೆ ಎನ್ನಬಹುದು. 

ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಭಾರತದಲ್ಲಿ ಕೆಲವು ಸಿನಿಮಾ ತಾರೆಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಅವರಲ್ಲಿ ನಟ ರಜನಿಕಾಂತ್ ಕೂಡ ಒಬ್ಬರು. ಕನ್ನಡದ ನಟ ಯಶ್, ನಟ-ನಿರ್ದೇಶಕ ರಿಷಭ್ ಶೆಟ್ಟಿ, ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸೇರದಂತೆ ಅಮಿತಾಭ್ ಬಚ್ಚನ್, ಅನುಪಮ್ ಖೇರ್ ಹೀಗೆ ಕೆಲವೇ ಕೆಲವು ಮಂದಿಗೆ ಆಮಂತ್ರಣ ನೀಡಲಾಗಿತ್ತು.

ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್‌ ಭಟ್‌..!?

ಅಂದಹಾಗೆ, ನಟ ರಜನಿಕಾಂತ್ ಆಧ್ಯಾತ್ಮಿಕ ದಾರಿಯಲ್ಲಿ ಸಾಗುತ್ತಿರುವ ಹಿರಿಯ ನಟ. ವರ್ಷದಲ್ಲಿ ಒಮ್ಮೆ ಹಿಮಾಲಯಕ್ಕೆ ಭೆಟಿ ಕೊಟ್ಟು ಅಲ್ಲಿ ಕೆಲವು ದಿನಗಳನ್ನು ಧ್ಯಾನದಲ್ಲಿ ಕಳೆದು ಮರಳಿ ಬರುವಂತಹ ವ್ಯಕ್ತಿ. ಸಹಜವಾಗಿಯೇ ನಟ ರಜನಿಕಾಂತ್ ದೇಶಭಕ್ತರು ಕೂಡ. ದಾಳಿಗೆ ಒಳಗಾಗಿ ಬರೋಬ್ಬರಿ 500 ವರ್ಷಗಳ ಬಳಿಕ ಮತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರ ತಲೆ ಎತ್ತಿದ್ದು, ಅಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯಾಗಿದ್ದು, ಅದಕ್ಕೆ ಸ್ವತಃ ತಾವು ಹೋಗಿ ಅಂತಹ ಜಗದ್ವಿಖ್ಯಾತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಎಲ್ಲವೂ ನಟ ರಜನಿಕಾಂತ್ ಅವರಿಗೆ ಖುಷಿ ಕೊಟ್ಟಿದೆ ಎನ್ನಬಹುದು.

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?