ದುಬೈ ಮೇಡಮ್ ಟುಸ್ಸಾಡ್ಸ್‌ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ; ರೀಲ್ ಜೊತೆ ರಿಯಲ್!

Published : Mar 29, 2024, 05:54 PM ISTUpdated : Mar 31, 2024, 12:18 PM IST
ದುಬೈ ಮೇಡಮ್ ಟುಸ್ಸಾಡ್ಸ್‌ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ; ರೀಲ್ ಜೊತೆ ರಿಯಲ್!

ಸಾರಾಂಶ

ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ದುಬೈನಲ್ಲಿ ಮೇಣದ ಪ್ರತಿಭೆಗೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ..

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷ ಕಳೆದಿದೆ. 2003 ಮಾರ್ಚ್ 28ರಂದು 'ಗಂಗೋತ್ರಿ' ಸಿನಿಮಾ ಮೂಲಕ ಬನ್ನಿ ಖ್ಯಾತಿಯ ನಟ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲು ಅರ್ಜುನ್ ಸಿನಿಪಯಣಕ್ಕೆ 21 ವರ್ಷ ಪೂರೈಸಿದೆ. ಈ ಖುಷಿ ಕ್ಷಣ ನಡುವೆಯೇ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ (Dubai Madame Tussauds) ಅನಾವರಣಗೊಂಡಿದೆ.

ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ'ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ (Wax Statue) ಲೋಕಾರ್ಪಣೆಗೊಂಡಿದೆ. 'ಅಲವೈಕುಂಠಪುರಂಲೋ' ಚಿತ್ರದ ಅಲ್ಲು ಅರ್ಜುನ್ ಲುಕ್ ನ ಮೇಣದ ಪ್ರತಿಮೆಯನ್ನು ಮಾರ್ಚ್ 28 ರ ರಾತ್ರಿ ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಲುಕ್ ನಲ್ಲಿ ಕೆಂಪು ಬಣ್ಣದ ಸೂಟ್ ಧರಿಸಿ ಬನ್ನಿ ಕಾಣಿಸಿಕೊಂಡಿದ್ದಾರೆ.  ಡೂಡ್ಲಿಕೇಟ್ ಪಕ್ಕ ನಿಂತು ತಗ್ಗೋದೇ ಇಲ್ಲ ಅಂತಾ 'ಪುಷ್ಪ ಸ್ಟೈಲ್'ನಲ್ಲಿ ಪೋಸ್ ಕೊಟ್ಟಿದ್ದಾರೆ.

ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!

ಮೇಣದ ಪ್ರತಿಮೆ ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಸಂಭ್ರಮ ಮುಗಿಲು ಮುಟ್ಟಿತ್ತು. ಅಪ್ಪನ ಪ್ರತಿಮೆಯ ಪಕ್ಕದಲ್ಲಿ ನಿಂತು ಅರ್ಹಾ ತಗ್ಗೊದೇ ಇಲ್ಲ ಎಂದು ಪೋಸ್ ಕೊಟ್ಟಿದ್ದಾಳೆ. ಇನ್ನು ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಗ್ಗೊದೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬನ್ನಿಗೆ ಫ್ಯಾನ್ಸ್ ವಿಷ್ ಮಾಡುತ್ತಿದ್ದಾರೆ.

ಹಿಂದಿ ಭಾಷಿಗರಿಗೆ ಯಾಕೆ 'ಥ್ಯಾಂಕ್ಸ್‌' ಹೇಳಿದ್ರು ತೆಲುಗು ನಟ ರಾಮ್‌ ಚರಣ್; ಸೌತ್ ಸಿನಿಮಂದಿ ಏನಂದ್ರು?

ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ದುಬೈನಲ್ಲಿ ಮೇಣದ ಪ್ರತಿಭೆಗೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೇ ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು, ಹಾಗೂ ಕಾಜಲ್ ಮೇಣದ ಪ್ರತಿಮೆಗಳಿವೆ.

ಕ್ರೇಜಿಸ್ಟಾರ್ ಪುತ್ರನಿಗೆ ಸಲಗ ಸುಂದರಿ ನಾಯಕಿ, ವಿಕ್ರಮ್ 'ಮುಧೋಳ್' ಬಳಗ ಸೇರಿದ ಸಂಜನಾ ಆನಂದ್!

'ಪುಷ್ಪ: ದಿ ರೈಸ್'ನಲ್ಲಿ ಮೂಲಕ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಈಗ 'ಪುಷ್ಪಾ 2: ದಿ ರೂಲ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಸ್ಟ್ 15 ರಿಂದ ಚಿತ್ರ ತೆರೆಗೆ ಬರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?