
ನಟ ರಾಮ್ ಚರಣ್ ಹಿಂದಿ ಭಾಷಿಗರಿಗೆ ಥ್ಯಾಂಕ್ಸ್ ಎಂದಿದ್ದಾರೆ. ಅರೆ, ತೆಲುಗು ಸ್ಟಾರ್ ನಟ, ಮೆಗಾ ಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ಅದ್ಯಾಕೆ ಬಾಲಿವುಡ್ ಮಂದಿಗೆ ಜೈ ಎಂದಿದ್ದಾರೆ ಎಂಬ ಪ್ರಶ್ನೆ ಎಲ್ಲರಿಗೂ ಬರುವುದು ಸಹಜ. ಆದರೆ, ಯಾಕೆ ಥ್ಯಾಂಕ್ಸ್ ಹೇಳಿದ್ದು, ಯಾಕೆ ಬಾಲಿವುಡ್ ಪ್ರೇಕ್ಷಕರು ಗ್ರೇಟ್ ಎಂದಿದ್ದಾರೆ ಎಂಬುದಕ್ಕೆ ಸ್ವತಃ ನಟ ರಾಮ್ ಚರಣ್ ವಿವರಣೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ರಾಮ್ ಚರಣ್ ಅವರಿಗೆ ನಿರೂಪಕಿ 'ನೀವು ದೇಶವನ್ನು ಅಡ್ರೆಸ್ ಮಾಡುವ ಸಮಯ ಬಂದಾಗ, ಹಿಂದಿಯನ್ನು ಆಯ್ಕೆ ಮಾಡಿಕೊಂಡಿದ್ದೀರಾ. ಯಾಕೆ ಎಂದು ಕೇಳಬಹುದೇ? ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ರಾಮ್ ಚರಣ್ 'ಹೌದು, ಮೊದಲಿಗೆ ನಾನು ಹಿಂದಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಏಕೆಂದರೆ, ನಾನೊಬ್ಬ ತೆಲುಗು ನಟ. ನಮ್ಮ ತೆಲುಗು ಸಿನಿಮಾ ಬಾಹುಬಲಿ ರಿಲೀಸ್ ಆದಾಗ ಹಿಂದಿ ಪ್ರೇಕ್ಷಕರು ಬೌಂಡರಿ ದಾಟಿ ಬಂದು ನಮ್ಮ ಸೌತ್ ಸಿನಿಮಾವನ್ಜು ಒಪ್ಪಿದ್ದಾರೆ.
ನಾನು ಕೊಡಲು ಬಯಸುವ ವ್ಯಕ್ತಿ ಎಂದ್ರು ದೀಪಿಕಾ ಪಡುಕೋಣೆ; ಅರೆ, ಏನು ಕೊಡ್ತಾರಂತೆ ಅಂತಿದೀರಾ?
ಬಾಹುಬಲಿ ಸಿನಿಮಾ ಹಿಂದಿ ಭಾಷಿಗರ ನೆಲದಲ್ಲಿ ಸೂಪರ್ ಹಿಟ್ ದಾಖಲಿಸಿದ್ದು ಸಾಮಾನ್ಯ ಸಂಗತಿಯೇನೂ ಅಲ್ಲ. ಬಾಹುಬಲಿ ಬಳಿಕ ಬಂದ ಕೆಜಿಎಫ್, ಪುಷ್ಪಾ ಹಾಗೂ ಆರ್‌ಆರ್‌ಆರ್ ಸಿನಿಮಾಗಳು ಕೂಡ ಬಾಲಿವುಡ್ ಅಂಗಳದಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದವು, ಹಣ ಗಳಿಸಿದವರು. ಈ ಕಾರಣಕ್ಕೆ ನಾನು ಹಿಂದಿ ಪ್ರೇಕ್ಷಕರ ಹೃದಯ ವೈಶಾಲ್ಯತೆಯನ್ನು ಕೊಂಡಾಡುತ್ತೇನೆ. ಬೌಂಡರಿ ದಾಟಿ ಬಂದು ಸೌತ್ ಸಿನಿಮಾವನ್ನು ತಮ್ಮ ನೆಲದಲ್ಲಿ ಗೆಲ್ಲಿಸಿ ಹೊಸ ಅಧ್ಯಾಯ ಬರೆದವರು ಅವರು. ಅದಕ್ಕಾಗಿ ನಾನು ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ' ಎಂದಿದ್ದಾರೆ ನಟ ರಾಮ್ ಚರಣ್.
ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ಪವರ್ ಪ್ಯಾಕ್ಡ್ 'ಬಡೆ ಮಿಯಾನ್ ಚೋಟೆ ಮಿಯಾನ್' ಟ್ರೇಲರ್ ರಿಲೀಸ್
ಅಂದಹಾಗೆ, ನಟ ರಾಮ್ ಚರಣ್ ಸದ್ಯ 'RC 16'ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಕುಮಾರ್ ಹಾಗು ಬುಚ್ಚಿಬಾಬು ಸಂಗಮದಲ್ಲಿ ಮೂಡಿ ಬರಲಿರುವ ಆರ್‌ಸಿ 16 ಸಿನಿಮಾಗೆ ಆರ್‌ಆರ್‌ಆರ್ ಖ್ಯಾತಿಯ ನಟ ರಾಮ್ ಚರಣ್ ಹೀರೋ. ಈ ಚಿತ್ರಕ್ಕೆ ಬಾಲಿವುಡ್ ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ನಾಯಕಿ. ಸದ್ಯ ಶೂಟಿಂಗ್ ಶುರುವಾಗಿದ್ದು, 'RC 16' ಬಿಗ್ ಬಜೆಟ್ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆ ಕಾಣಲಿದೆ. ಆರ್‌ಆರ್‌ಆರ್ (RRR) ಸಿನಿಮಾ ಬಳಿಕ ನಟ ರಾಮ್ ಚರಣ್ ಕೇವಲ ತೆಲುಗು ನಟರಾಗಿ ಉಳಿದಿಲ್ಲ, ಈಗವರು ಅಂತಾರಾಷ್ಟ್ರೀಯ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.