ನಟಿ ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ, ನಟಿಯರು ಯಾವಾಗೆಲ್ಲಾ ಗರ್ಭಿಣಿ ಆಗ್ತಾರೆ ಎಂಬ ಸತ್ಯ ಬಿಚ್ಚಿಟ್ಟ ಈಕೆ ಹೇಳಿದ್ದೇನು?
ಸಾಮಾನ್ಯವಾಗಿ ನಟ-ನಟಿಯರ ಬಗ್ಗೆ ರೂಮರ್ಸ್ ಸದಾ ಹರಡುತ್ತಲೇ ಇರುತ್ತದೆ. ಅವರ ಸಂಬಂಧ, ರಿಲೇಷನ್, ಲಿವ್ ಇನ್ ರಿಲೇಷನ್, ಡೇಟಿಂಗ್ ಇವೆಲ್ಲವೂ ಸದಾ ಚಾಲ್ತಿಯಲ್ಲಿ ಇರುವ ವಿಷಯಗಳೇ. ಅದರಲ್ಲಿಯೂ ನಟ-ನಟಿಯರು ಯಾರದ್ದಾದರು ಜೊತೆ ಎಂಗೇಜ್ ಆಗಿದ್ದಾರೆ ಎಂದಾಗ ಅವರ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಮದುವೆಯಾಗಿ ಬಿಟ್ಟರೆ, ಅವರನ್ನೇ ಹಿಂಬಾಲಿಸುವ ಪಾಪರಾಜಿಗಳ ಸಂಖ್ಯೆ ಕಡಿಮೆ ಏನಿಲ್ಲ. ಅವರು ಯಾವಾಗ ಗರ್ಭಿಣಿಯಾಗುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತದೆ. ಇದು ಕೇವಲ ನಟ-ನಟಿಯರ ವಿಷಯವಲ್ಲದೇ ಮದುವೆಯಾದ ಮೇಲೆ ಬಹುತೇಕ ಮಹಿಳೆಯರಿಗೆ ಇದೇ ಪ್ರಶ್ನೆ ಕೇಳುವುದು ಸಹಜವಾದರೂ ನಟಿಯರ ಮೇಲೆ ದೊಡ್ಡ ಕಣ್ಣು ಇರುವ ಕಾರಣ, ಇವರು ಯಾವಾಗ ಗರ್ಭ ಧರಿಸುತ್ತಾರೆ, ಅದರ ಬಗ್ಗೆ ತಾವೇ ಮೊದಲು ವಿಷಯ ತಿಳಿಸಬೇಕು ಎಂದು ಬಹುತೇಕ ಮಂದಿ ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಮದುವೆಯಾದ ಕೆಲವೇ ತಿಂಗಳಿನಲ್ಲಿಯೇ ಮಗುವಾಗುವ ಸಂಪ್ರದಾಯವೂ ಇರುವ ಕಾರಣ, ನಟಿಯರ ಮೇಲೆ ವಿಶೇಷ ದೃಷ್ಟಿ ಇಡಲಾಗುತ್ತದೆ.
ಅದೇ ರೀತಿ ಇದೀಗ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರಿಗೂ ಆಗಿದೆ. ಪರಿಣಿತಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಮದುವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಇದೀಗ ವಿಶೇಷ ವರದಿಯೊಂದು ಸದ್ದು ಮಾಡುತ್ತಿದೆ. ಅದೇನೆಂದರೆ ನಟಿ ಪರಿಣಿತಿ ಮದುವೆಯಾದ ಐದು ತಿಂಗಳಿಗೆ ಗುಡ್ ನ್ಯೂಸ್ ಕೊಡುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ನಟಿ ಈ ರೀತಿ ಸುದ್ದಿಯಾಗಲು ಕಾರಣ, ವಿಮಾನ ನಿಲ್ದಾಣದಿಂದ ಅವರು ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಪರಿಣಿತಿ ಗರ್ಭಿಣಿಯಂತೆ ಕಾಣುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಮತ. ಈ ಹಿಂದೆ ಡಿಸೆಂಬರ್ನಲ್ಲಿ ಕೂಡ ಪರಿಣಿತಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಆ ಸುದ್ದಿಯನ್ನು ನಟಿ ತಳ್ಳಿಹಾಕಿದ್ದರು. ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಪರಿಣಿತಿಯ ಬಗ್ಗೆ ಅವರ ಫ್ಯಾನ್ಸ್ ತಲೆಕೆಡಿಸಿಕೊಳ್ಳುತ್ತಿದ್ದು, ಇದರ ನಡುವೆ ಈ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.
ಕೆಲ ತಿಂಗಳ ಹಿಂದೆ ನಟಿ ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. ಇದೇ ಕಾರಣಕ್ಕೆ ನಟಿ ಗರ್ಭಿಣಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗಿದೆ.
ಈ ವಿಷಯದ ಬಗ್ಗೆ ಪರಿಣಿತಿ ಸ್ವಲ್ಪ ಗರಂ ಆಗಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ತಾವು ಧರಿಸಿರುವ ಸಡಿಲವಾಗಿರುವ ಬಟ್ಟೆ ಎನ್ನುವ ಹಿನ್ನೆಲೆಯಲ್ಲಿ ನಟಿಯರು ಜನರ ಬಾಯಲ್ಲಿ ಗರ್ಭಿಣಿ ಯಾವಾಗ ಆಗುತ್ತಾರೆ ಎಂಬ ಬಗ್ಗೆ ಮಾರ್ಮಿಕವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಚಮ್ಕಿಲಾ ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ಸಡಿಲ ಉಡುಪು ಧರಿಸಿ ಬಂದ ಕಾರಣ, ತಾವು ಗರ್ಭಿಣಿ ಎಂಬ ಸುದ್ದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಗರ್ಭಿಣಿ ಸುದ್ದಿ ಹರಡುವವರಿಗೆ ಪರೋಕ್ಷವಾಗಿ ಈ ಮೂಲಕ ಚುಚ್ಚಿದ್ದಾರೆ ಕೂಡ. ಅಷ್ಟಕ್ಕೂ ನಟಿ ಹೇಳಿರುವುದು ಏನೆಂದರೆ, ಗರ್ಭಿಣಿ ಯಾವಾಗ ಆಗುತ್ತಾರೆ ಎಂದರೆ, ಕಫ್ತಾನ್ ಉಡುಗೆ ತೊಟ್ಟಾಗ, ಸಡಿಲವಾಗಿರುವ ಷರ್ಟ್ ತೊಟ್ಟಾಗ ಮತ್ತು ಕಂಫಿ ಇಂಡಿಯನ್ ಕುರ್ತಾ ಧರಿಸಿದಾಗ ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಈ ಮೂಲಕ ತಮ್ಮ ಗರ್ಭಧಾರಣೆಯ ವದಂತಿಯನ್ನು ತಳ್ಳಿ ಹಾಕಿದ್ದು, ಇಂಥ ಬಟ್ಟೆಗಳಿಂದ ಜನರು ಹೇಗೆಲ್ಲಾ ಸುದ್ದಿ ಮಾಡುತ್ತಾರೆ ಎಂದು ಬರೆದಿದ್ದಾರೆ.
ಲಂಕೆಗೆ ಹಾರಿದ ಡಾ.ಬ್ರೋ: ವಿಶ್ವದ ಎಂಟನೇ ಅದ್ಭುತ ಎನಿಸಿರುವ ರಾವಣನ ಚಿನ್ನದ ಅರಮನೆ ದರುಶನ...