ಶಾರುಕ್, ಸಲ್ಮಾನ್, ಸನ್ನಿ ಲಿಯೋನ್ ವಿಚಿತ್ರ ಖಯಾಲಿಗಳು ನಿಮಗೆ ಗೊತ್ತಾ?

Suvarna News   | Asianet News
Published : Dec 16, 2020, 05:11 PM IST
ಶಾರುಕ್, ಸಲ್ಮಾನ್, ಸನ್ನಿ ಲಿಯೋನ್ ವಿಚಿತ್ರ ಖಯಾಲಿಗಳು ನಿಮಗೆ ಗೊತ್ತಾ?

ಸಾರಾಂಶ

ಬಾಲಿವುಡ್ ನಟ ನಟಿಯರ ಖಯಾಲಿಗಳು ವಿಚಿತ್ರವಾಗಿರುತ್ತವೆ. ಹತ್ತಿರದಿಂದ ನೋಡಿದವರು ಕೇಳಿದವರು ಕೇಳಿಸಿಕೊಂಡವರು ಹೇಳಿದಂತೆ ಈ ಸೆಲೆಬ್ರಿಟಿಗಳ ಹುಚ್ಚು ಹವ್ಯಾಸಗಳು ಇಲ್ಲಿವೆ.

ಶಾರುಕ್ ಖಾನ್‌

ಶಾರುಕ್ ಖಾನ್‌ಗೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್‌ಗಳ ಬಗ್ಗೆ ವಿಶೇಷ ಖಯಾಲಿ. ಈತನ ಮನೆಯಲ್ಲಿ ಈತ ಅಸೆಯಿಂದ ಕೊಮಡುಕೊಂಡ ೧೫೦೦ಕ್ಕೂ ಹೆಚ್ಚು ಜೀನ್ಸ್‌ಗಳಿವೆಯಂತೆ. ಡೆನಿಮ್ ಅಂದರೆ ಶಾರುಕ್‌ಗೆ ತುಂಬಾ ಇಷ್ಟ. ಹಾಗೇ ಶಾರುಕ್‌ನ ಇನ್ನೊಂದು ಹವ್ಯಾಸ ವಿಡಿಯೋ ಗೇಮ್‌ಗಳದ್ದು. ಖಾನ್ ಮನೆಯಲ್ಲಿ ಒಂದು ಫ್ಲೋರ್ ತುಂಬಾ ವಿಡಿಯೋ ಗೇಮ್‌ಗಳು ಹಾಗೂ ಅದನ್ನಾಡುವ ಗ್ಯಾಜೆಟ್‌ಗಳೇ ಇವೆ ಎಂದು ಹೇಳುತ್ತಾರೆ. ತನಗೆ ಬೋರ್ ಆದಾಗ ಅಥವಾ ಡಿಪ್ರೆಸ್ ಆದಾಗಲೆಲ್ಲ ವಿಡಿಯೋ ಗೇಮ್ ಆಡುತ್ತಾನೆ ಖಾನ್.

 

ಜಾನ್ ಅಬ್ರಾಹಂ
 


ಜಾನ್‌ಗೆ ಸೂಪರ್ ಬೈಕ್‌ಗಳು ಎಂದರೆ ವಿಶೇಷ ಆಸಕ್ತಿ. ಇವನ ಮನೆಯಲ್ಲಿ ನೂರಾರು ಬೈಕ್‌ಗಳಿವೆ. ಒಂದೂ ಚಿಲ್ಲರೆ ಬೈಕಲ್ಲ, ಎಲ್ಲವೂ ಕೋಟಿಗಟ್ಟಲೆ, ಲಕ್ಷಗಟ್ಟಲೆ ಬೆಲೆಯವು. ವಿಶೇಷವಾಗಿ ತನಗೆಂದೇ ಡಿಸೈನ್ ಮಾಡಲಾದ ರಜಪುಟಾನಾ ಲೈಮ್‌ಲೈಟ್ ಬೈಕ್ ಇದೆ. ಇದರಲ್ಲಿ ಆತ ರಾತ್ರಿಯ ಹೊತ್ತಿನಲ್ಲಿ ಮುಂಬಯಿಯ ಬೀದಿಗಳಲ್ಲಿ ಫಾಸ್ಟಾಗಿ ರೈಡ್ ಹೋಗುತ್ತಾನೆ.

ಬಿಪಾಶಾ ಬಸು

ಬಿಪಾಶಾ ಬಸುವಿನ ಬಳಿ ಜಗತ್ತಿನ ಅತ್ಯುತ್ತಮ ಬ್ರಾಂಡ್‌ನ ವಾಚ್‌ಗಳೆಲ್ಲ ಇವೆ. ವಾಚ್‌ಗಳೆಂದರೆ ಈಕೆಗೆ ತುಂಬಾ ಮೋಹ. ಹಾಗೇ ವಾಚ್‌ನಂಥ ರಿಸ್ಟ್‌ಬ್ಯಾಂಡ್‌ಗಳನ್ನು ಧರಿಸುವುದೂ ಮಾಡುತ್ತಾಳೆ.

ಪ್ರಿಯಾಂಕ ಚೋಪ್ರಾ
 

ಪ್ರಿಯಾಂಕಗೆ ಫೂಟ್‌ವೇರ್‌ಗಳ ಬಗ್ಗೆ ತುಂಬಾ ಮೋಹ. ಪ್ರತಿಸಲ ಈಕೆ ಹೊಸ ಹೊಸ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಾಗಲೂ ಬ್ರಾಂಡ್‌ ನ್ಯೂ ಶೂಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಅದೂ ಲಕ್ಷಾಂತರ ರೂಪಾಯಿ ಬೆಲೆಯ ಜಾಗತಿಕ ಬ್ರಾಂಡ್‌ಗಳು. ನೂರಕ್ಕೂ ಅಧಿಕ ದುಬಾರಿ ಬ್ರಾಂಡ್‌ಗಳಿವೆ ಈಕೆ ಬಳಿ.

 

ಸೋನಾಕ್ಷಿ ಸಿನ್ಹಾ

ಈಕೆಗೆ ಹೊಸ ಹೊಸ ಡಿಸೈನರ್ ಡ್ರೆಸ್‌ಗಳು ಎಂದರೆ ತುಂಬಾ ಇಷ್ಟ. ಬಾಲಿವುಡ್ ಪಾರ್ಟಿಗಳಲ್ಲಿ ಈಕೆ ನವನವೀನ ಉಡುಪುಗಳನ್ನು ಧರಿಸಿ ಮಿಂಚುವುದನ್ನು ನೀವು ಗಮನಿಸಿರಬಹುದು.

ಆಮಿಷಾ ಪಟೇಲ್

ಆಮಿಷಾ ಪಟೇಲ್‌ಗೆ ಬ್ಯಾಗ್‌ಗಳ ಬಗ್ಗೆ ತುಂಬಾ ಆಸೆ. ಪ್ರತಿಸಲ ಹೊರಗೆ ಹೊರಟಾಗಲೂ ಒಮ್ಮೆ ಬಳಸಿಕ ಬ್ಯಾಗ್ ಇನ್ನೊಮ್ಮೆ ಬಳಸುವುದಿಲ್ಲ. ಇವೆಲ್ಲಾ ದುಬಾರಿ ಡಿಸೈನರ್ ಬ್ಯಾಗ್‌ಗಳು ಬೇರೆ .

ಬಾದ್‌ ಶಾ ಜೊತೆ ರಶ್ಮಿಕಾ ಬಾಲಿವುಡ್ ಎಂಟ್ರಿ..! ...

ಅಜಯ್ ದೇವಗನ್

ಅಜಯ್‌ಗೆ ಕ್ಲೀನ್ಲಿನೆಸ್‌ ಗೀಳು. ಪದೇ ಪದೇ ತನ್ನ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುತ್ತಾನೆ. ಕೈಗಳಲ್ಲಿ ಯಾವುದೇ ಪರಿಮಳ, ವಾಸನೆ ಇರುವುದನ್ನು ಆತ ಇಷ್ಟಪಡುವುದಿಲ್ಲ. ಹೀಗಾಗಿ ಆತ ಊಟವನ್ನೂ ಕೈಗಳಲ್ಲಿ ಮಾಡುವುದಿಲ್ಲ. ಬದಲು ಚಮಚ, ಫೋರ್ಕ್ ಬಳಸುತ್ತಾನೆ. ಹೀಗಾಗಿ ಈತ ಇನ್ನೊಬ್ಬರು ಎದುರಿಗೆ ಬಂದಾಗ ಶೇಕ್‌ಹ್ಯಾಂಡ್‌ ಕೊಡುವುದೂ ಇಲ್ಲವಂತೆ.

ರಣವೀರ್ ಸಿಂಗ್

ಈತನ ವಿಚಿತ್ರ ಹವ್ಯಾಸದ ಬಗ್ಗೆ ಒಮ್ಮೆ ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿದ್ದಳು ರಣವೀರ್‌ಗೆ ಡಿಆಡರೆಂಟ್, ಸ್ಯಾನಿಟೈಸರ್, ಕೊಲೊನೆಗಳನ್ನು ವಿಪರೀತ ಬಳಸುವ ಹುಚ್ಚು. ಒಮ್ಮೆ ಹೊರಗೆ ಹೊರಟಾಗ ಅರ್ಧ ಬಾಟಲಿಯಷ್ಟು ಡಿಆಡರೆಂಟನ್ನಾದರೂ ಖಾಲಿ ಮಾಡುತ್ತಾನಂತೆ!

ಫ್ಯಾನ್ಸ್‌ನಿಂದ ತಲೈವಾಗೆ ಸಿಕ್ತು ಡಿಫರೆಂಟ್ ಗಿಫ್ಟ್: ವಿಡಿಯೋ ವೈರಲ್ ...

ಸನ್ನಿ ಲಿಯೋನ್

ಈಕೆಗೆ ತನ್ನ ಕಾಲುಗಳ ಬಗ್ಗೆ ಒಬ್ಸೆಷನ್. ಶೂಟಿಂಗ್ ಸ್ಪಾಟ್‌ನಲ್ಲಿದ್ದಾಗ ಕನಿಷ್ಠ ಹದಿನೈದು ನಿಮಿಷಕ್ಕೆ ಒಮ್ಮೆಯಾದರೂ ಕಾಲುಗಳನ್ನು ಚೆನ್ನಾಗಿ ವಾಷ್ ಮಾಡಿಕೊಂಡು, ಉಜ್ಜಿಕೊಂಡು ಬರುತ್ತಾಳೆ. ಇನ್ನು ಮನೆಯಲ್ಲಿ ಏನು ಮಾಡುತ್ತಾಳೋ ಆಕೆಗೇ ಗೊತ್ತು.

ಸಲ್ಮಾನ್ ಖಾನ್

ಸಲ್ಮಾನ್‌ ಬಾಲಿವುಡ್‌ನ ಬಹು ಬೇಡಿಕೆಯ ಹಾಗೂ ಬಲು ದುಬಾರಿ ಸ್ಟಾರ್. ಆದರೂ ಈತನ ಖಯಾಲಿ ಜಾನ್‌ ಅಬ್ರಾಹಂನಷ್ಟು ದುಬಾರಿಯದ್ದಲ್ಲ. ಇವನಿಗಿರುವ ಹುಚ್ಚು ಎಂದರೆ ಸೋಪ್ ಹಾಗೂ ಪರ್‌ಫ್ಯೂಮ್‌ಗಳದು. ಅದರಲ್ಲೂ ಹರ್ಬಲ್ ಸೋಪ್‌ಗಳನ್ನು ಹುಡುಕಿ ಹುಡುಕಿ ಬಳಸುತ್ತಾನಂತೆ.

ಐಶ್ವರ್ಯಾ ರೈ ಬಗ್ಗೆ ಈ ಸತ್ಯ ರಿವೀಲ್‌ ಮಾಡಿದ ನಿರ್ದೇಶಕ ಸುಭಾಷ್ ಘಾಯ್! ...

ವಿದ್ಯಾ ಬಾಲನ್‌

ಸೀರೆಗಳ ಬಗ್ಗೆ ಈಕೆಗೆ ಇರುವ ಒಬ್ಸೆಷನ್ ಅಡಗಿಸಿ ಇಡಲಾಗದ್ದು. ಈಕೆಯ ಬಳಿ 800ಕ್ಕೂ ಹೆಚ್ಚು ಸೀರೆಗಳಿವೆ ಎನ್ನಲಾಗುತ್ತದೆ.

ದೀಪಿಕಾ ಪಡುಕೋಣೆ
 


ದೀಪಿಕಾ ಪಡುಕೋಣೆ'ಈಕೆಗೆ ತನ್ನ ಸುತ್ತಮುತ್ತಲನ್ನು ಸಿಕ್ಕಾಪಟ್ಟೆ ಕ್ಲೀನಾಗಿಡುವ ಹುಚ್ಚು. ಸ್ವಲ್ಪವಾದರೂ ಕಸ ಇದ್ದರೆ ಆಕೆಗೆ ಮೂಡ್ ಕೆಡುತ್ತದಂತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!