ಪ್ರೀತಿಯಿಂದ ಕನ್ನಡ ಮಾತನಾಡಿದ್ದೇನೆ, ಟೀಕಿಸಿದವರಿಗೆ ಬಾಲಿವುಡ್ ಸಿಂಗರ್ ಬಾದ್ ಶಾ ತಿರುಗೇಟು!

By Chethan Kumar  |  First Published Oct 10, 2024, 8:29 PM IST

ವೇದಿಕೆಯಲ್ಲಿ ಕನ್ನಡ ಮಾತನಾಡಿದ ಬಾಲಿವುಡ್ ಸಿಂಗರ್ ಬಾದ್ ಶಾರನ್ನು ಹಲವರು ಟೀಕಿಸಿದ್ದರು. ದುಡ್ಡು ಕೊಟ್ಟಿದ್ದಾರೆ, ಅದಕ್ಕೆ ಕನ್ನಡ ಮಾತನಾಡಿದ್ದಾರೆ ಎಂದು ಟೀಕಿಸಿದ್ದರು. ಈ ಟೀಕೆಗಳಿಗೆ ಬಾದ್ ಶಾ ಖಡಕ್ ಉತ್ತರ ನೀಡಿ ಮತ್ತೆ ಕನ್ನಡಿಗರ ಮನ ಗೆದ್ದಿದ್ದಾರೆ. 


ಬೆಂಗಳೂರು(ಅ.10)  ಮೈಸೂರು ದಸರಾ ಹಬ್ಬದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಬಾಲಿವುಡ್ ಸಿಂಗ್ ಬಾದ್‌ಶಾ ಪುನೀತ್ ರಾಜ್‌ಕುಮಾರ್ ಬೊಂಬೆ ಹೇಳುತೈತೆ ಹಾಡು ಹಾಡುತ್ತಿದ್ದಂತೆ ಭಾವುಕರಾಗಿದ್ದರು. ಇಷ್ಟೇ ಅಲ್ಲ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಗೆದಿದ್ದರು. ಆದರೆ ಕೆಲವರು ಬಾದ್‌ಶಾ ಟೀಕಿಸಿದ್ದರು. ದುಡ್ಡು ಕೊಟ್ಟಿದ್ದಾರೆ ಅದ್ಕೆ ಕನ್ನಡ ಮಾತನಾಡಿದ್ದಾರೆ ಎಂದು ಟೀಕಿಸಿದ್ದರು. ಈ ಟೀಕೆಗಳಿಗೆ ಖಡಕ್ ತಿರುಗೇಟು ನೀಡುವ ಮೂಲಕ ಮತ್ತೆ ಬಾದ್ ಶಾ ಕನ್ನಡಿಗರ ಮನ ಗೆದ್ದಿದ್ದಾರೆ. 

ಮೈಸೂರಿನ ಯುವ ದಸರಾ ಹಬ್ಬದ ಆಚರಣೆ ವೇಳೆ ಸಿಂಗರ್ ಬಾದ್‌ಶಾ ಕಾರ್ಯಕ್ರಮ ನೀಡಿದ್ದರು. ತಮ್ಮ ಅದ್ಭುತ ಕಂಠ, ಹಾಡುಗಳಿಂದ ಜನಪ್ರಿಯವಾಗಿರುವ ಬಾದ್‌ಶಾ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹಾಡುತ್ತಿದ್ದಂತೆ ಬಾದ್‌ಶಾ ಭಾವುಕರಾಗಿದ್ದರು. ಜನರತ್ತ ಕೈಮುಗಿದ್ದು ನಮಿಸಿದ್ದರು. 

Tap to resize

Latest Videos

undefined

ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕಳೆಗಟ್ಟಿದ ದಸರಾ ವೈಭವ!

ವೇದಿಕೆಯಲ್ಲಿ ತಮ್ಮ ಹಾಡಿನ ಮೂಲಕ ಮೋಡಿ ಮಾಡಿದ್ದ ಬಾದ್‌ಶಾ, ಕನ್ನಡದಲ್ಲೇ ಮಾತನಾಡಿದ್ದರು. ನಾನು ಕೂಡ ನಿಮ್ಮಂತೆ ಒಬ್ಬ. ಭಾವನೆಗಳನ್ನು ಬರೆಯುತ್ತೇನೆ, ನಾನು ಸೂಪರ್ ಸ್ಟಾರ್ ಅಲ್ಲ. ಭಾವನೆಗಳನ್ನು ಬರೆಯುತ್ತೇನೆ, ಹಾಡುತ್ತೇನೆ, ನಿಮ್ಮ ಆಶೀರ್ವಾದದಿಂದ ನಾನಿಲ್ಲಿದ್ದೇನೆ. ನಿಮ್ಮೆಲ್ಲರಿಗೂ ಸದಾ ಋಣಿಯಾಗಿದ್ದೇನೆ ಎಂದು ಕನ್ನಡದಲ್ಲಿ ಬಾದ್‌ಶಾ ಮಾತನಾಡಿದ್ದರು.

ಬಾದ್‌ಶಾ ಕನ್ನಡ ಮಾತನಾಡುತ್ತಿದ್ದಂತೆ ಭಾರಿ ಚಪ್ಪಾಳೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಬಾಲಿವುಡ್‌ನ ಖ್ಯಾತ ಸಿಂಗರ್ ಕನ್ನಡದಲ್ಲಿ ಮಾತನಾಡಿ ಎಲ್ಲರ ರೋಮಾಂಚನಗೊಳಿಸಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬಾದ್‌ಶಾ ಟೀಕಿಸಿದ್ದರು. ಕನ್ನಡದಲ್ಲಿ ಮಾತನಾಡಿದ್ದು ಯಾಕೆ? ಕನ್ನಡ ಮಾತನಾಡುವ ಅನಿವಾರ್ಯತೆ ಏನಿತ್ತು? ಎಂದೆಲ್ಲಾ ಕಮೆಂಟ್ ಮಾಡಿದ್ದರು. ಇದರ ನಡುವೆ ಒಬ್ಬ, ಕನ್ನಡಿಗರು ನನಗೆ ಪಾವತಿಸಿದರೆ, ಬಾದ್‌ಶಾಗಿಂತ ಉತ್ತಮ ಕನ್ನಡ ಮಾತನಾಡುತ್ತೇನೆ ಎಂದು ಟೀಕಿಸಿದ್ದ. ಈ ಮೂಲಕ ಈತ, ದುಡ್ಡಿಗಾಗಿ ಬಾದ್‌ಶಾ ಕನ್ನಡ ಮಾತನಾಡಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದ.

 

I was paid to do a show, i spoke kannada because of the love. 🙏🧿 spread love. https://t.co/ZNN0zkpKfw

— BADSHAH (@Its_Badshah)

 

ಇದಕ್ಕೆ ಬಾದ್‌ಶಾ ಖಡಕ್ ಉತ್ತರ ನೀಡಿದ್ದಾರೆ. ನನಗೆ ಕಾರ್ಯಕ್ರಮ ನಡೆಸಿಕೊಡಲು ಹಣ ಪಾವತಿಸಿದ್ದಾರೆ. ನಾನು ಕನ್ನಡ ಮಾತನಾಡಿದ್ದು ಪ್ರೀತಿಯಿಂದ, ಎಲ್ಲೆಡೆ ಪ್ರೀತಿ ಹಂಚಿ ಎಂದು ಬಾದ್‌ಶಾ ತಿರುಗೇಟು ನೀಡಿದ್ದಾರೆ. ಬಾದ್‌ಶಾ ನೀಡಿದ ಉತ್ತರ ಮತ್ತೆ ಕನ್ನಡಗರ ಮನಗೆದ್ದಿದೆ. ಪ್ರೀತಿಯಿಂದ ಕನ್ನಡ ಮಾತನಾಡಿದ್ದೇನೆ ಅನ್ನೋ ಮಾತು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 

ರಾಮಲೀಲಾ ಪ್ರದರ್ಶನದ ನಡುವೆ ಹೃದಯಾಘಾತಕ್ಕೆ ಬಲಿಯಾದ ಶ್ರೀರಾಮ ಪಾತ್ರಧಾರಿ!
 

click me!