ಹತಾಶೆ ತೀರಿಸಿಕೊಳ್ಳಲು ಕಾರು ಖರೀದಿ, ಪ್ರತಿ ವಾಹನ ಹಿಂದಿನ ಕುತೂಹಲ ಕತೆ ಬಿಚ್ಚಿಟ್ಟ ನಟ ಕಾರ್ತಿಕ್!

By Chethan KumarFirst Published Oct 10, 2024, 9:02 PM IST
Highlights

ಬಹುತೇಕರು ತಮ್ಮ ಕನಸು ನನಸು ಮಾಡಿಕೊಳ್ಳಲು ಖುಷಿ ಖುಷಿಯಿಂದ ಕಾರು ಖರೀದಿಸುತ್ತಾರೆ. ಆದರೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮಾತ್ರ ಹೊಸ ಕಾರು ಖರೀದಿಸುವುದು ತಮ್ಮ ಹತಾಶೆ ತೀರಿಸಿಕೊಳ್ಳಲು. ಇದು ಸ್ವತಃ ಕಾರ್ತಿಕ್ ಆರ್ಯನ್ ಹೇಳಿದ ಮಾತು. ಆರ್ಯನ್ ಕಾರಣ ಕೇಳಿದರೆ ನಿಮಗೂ ಹತಾಶೆ ಬಂದರೆ ಒಳ್ಳೆಯದು.

ಮುಂಬೈ(ಅ.10) ಸೆಲೆಬ್ರೆಟಿಗಳು ಹೊಸ ಹೊಸ ಕಾರು, ದುಬಾರಿ ಕಾರು ಖರೀದಿಸುವುದು ಹೊಸ ವಿಚಾರವೇನಲ್ಲ. ತಮ್ಮ ಅಗತ್ಯಕ್ಕೆ ತಕ್ಕಂತೆ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಹೀಗೆ ಸೆಲೆಬ್ರೆಟಿಗಳ ಬಳಿ ಅತೀ ದೊಡ್ಡ ಕಾರು, ಬೈಕ್ ಕಲೆಕ್ಷನ್ ಇದ್ದೇ ಇರುತ್ತೆ. ಹೀಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬಳಿಯೂ ಮೆಕ್ಲರೆನ್, ರೇಂಜ್ ರೋವರ್ ಸೇರಿದಂತೆ ಕೋಟಿ ಕೋಟಿ ಬೆಲೆಯ ಕಾರುಗಳಿವೆ. ಆದರೆ ಕಾರ್ತಿಕ್ ಆಱ್ಯನ್ ಖುಷಿ ಖುಷಿಯಿಂದ ಕಾರು ಖರೀದಿಸುವುದಿಲ್ಲ. ಕಾರ್ತಿಕ್ ಕಾರು ಖರೀದಿಸುವುದು ತಮ್ಮ ಹತಾಶೆ ನಿಯಂತ್ರಿಸಿಕೊಳ್ಳಲು, ಸಿಟ್ಟು ತೀರಿಸಿಕೊಳ್ಳಲು ಅನ್ನೋದು ಸ್ವತ ಕಾರ್ತಿಕ್ ಹೇಳಿದ್ದಾರೆ. 

ನಟ ಕಾರ್ತಿಕ್ ಆರ್ಯನ್ ಬಾಲಿವುಡ್ ಹಂಗಾಮ ಸಂದರ್ಶನದಲ್ಲಿ ತಮ್ಮ ಕಾರು ಖರೀದಿ ಹಿಂದಿನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ತಮ್ಮ ಕಾರುಗಳ ಕುರಿತು ಮಾತನಾಡುತ್ತಾ ಕಾರ್ತಿಕ್ ಆರ್ಯನ್ ಭಾವುಕರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ನನ್ನ ಬಳಿ ಕಾರು ಇರಲಿಲ್ಲ. ಖರೀದಿಸುವ ಶಕ್ತಿ ಕೂಡ ಇರಲಿಲ್ಲ. ಕಾರು ಬೇಕು ಅನ್ನೋದು ನನ್ನ ಕನಸಾಗಿತ್ತು. ಆದರೆ ಖರೀದಿ ಮಾತ್ರ ಸಾಧ್ಯವಿಲ್ಲದ ಮಾತಾಗಿತ್ತು.  ಹೇಗೋ ಕಷ್ಟಪಟ್ಟು, ಒಂದಷ್ಟ ಹಣ ಹೊಂದಿಸಿಕೊಂಡು ಸೆಕೆಂಡ್ ಹ್ಯಾಂಡ್ ಅಲ್ಲ, 3ನೇ ಓನರ್ ಕಾರು ಖರೀದಿಸಿದ್ದೆ. 30 ರಿಂದ 35 ಸಾವಿರ ರೂಪಾಯಿ ನೀಡಿ ಹಳೇ ಕಾರು ಖರೀದಿಸಿದ್ದೆ.  

Latest Videos

ಇಲಿಯಿಂದ ಕಾರ್ತಿಕ್ ಆರ್ಯನ್‌ಗೆ ಲಕ್ಷ ರೂ ನಷ್ಟ, ಗ್ಯಾರೇಜ್ ಸೇರಿದ 4.7 ಕೋಟಿ ರೂ ಮೆಕ್ಲರೆನ್ ಕಾರು!

ಇದೇ ವೇಳೆ ದುಬಾರಿ, ಐಷಾರಾಮಿ ಕಾರು ಖರೀದಿಸಬೇಕು ಅನ್ನೋದು ನನ್ನ ಕನಸಾಗಿತ್ತು. ಆದರೆ ಪರಿಶ್ರಮ, ಅದೃಷ್ಛ ಎಲ್ಲವೂ ಕೈಗೂಡಿ ಬಂದಿತ್ತು. 3ನೇ ಓನರ್ ಕಾರಿನಿಂದ ಬಳಿಕ ನಾನು ಖರೀದಿಸಿದ್ದು ನೇರವಾಗಿ ಲ್ಯಾಂಬೋರ್ಗಿನಿ ಉರುಸ್ ಕಾರು. ಬಳಿಕ ರೇಂಜ್ ರೋವರ್, ಮಿನಿ ಕೂಪರ್, ಮೆಕ್ಲರೆನ್ ಸೇರಿದಂತೆ ಕೆಲ ಕಾರುಗಳಿವೆ. ಕಾರು ಖರೀದಿಸುವ ಶಕ್ತಿ ನನಗಿರಲಿಲ್ಲ ಅನ್ನೋ ಹತಾಶೆಯಿಂದ ನೋಂದಿದ್ದೇನೆ. ಈ ಹತಾಶೆ ಸಿಟ್ಟು ತೀರಿಸಿಕೊಳ್ಳಲು ಈಗ ಕಾರು ಖರೀದಿಸುತ್ತೇನೆ ಎಂದು ಎಂದು ನಟ ಕಾರ್ತಿಕ್ ಆರ್ಯನ್ ಹೇಳಿದ್ದಾರೆ.

ನನ್ನ ಕನಸಿನ ಎಲ್ಲಾ ಕಾರು ಖರೀದಿಸಲು ನಾನು ನಿರ್ಧರಿಸಿದ್ದೇನೆ. ಈಗಲೇ ಕಾರು ಪಾರ್ಕಿಂಗ್ ಸ್ಥಳವಕಾಶ ಕೊರತೆ ಆಗುತ್ತಿದೆ. ಆದರೆ ಭವಿಷ್ಯದಲ್ಲಿ ಕಾರು ಖರೀದಿಸುತ್ತೇನೆ, ಯಾವೆಲ್ಲಾ ಕಾರು ಖರೀದಿಸುತ್ತೇನೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ನಟ ಕಾರ್ತಿಕ್ ಆರ್ಯನ್ ಕಠಿಣ ಪರಿಶ್ರಮ ಮೂಲಕ ಇದೀಗ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ.

ಈ ವರ್ಷದ ಆರಂಭದಲ್ಲಿ ಕಾರ್ತಿಕ್ ಆರ್ಯನ್, ಕಪಿಲ್ ಶರ್ಮಾ ಶೋದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದರು. 30 ಸಾವಿರ ರೂಪಾಯಿ ಹಳೇ ಕಾರು ಖರೀದಿಸುವ ಮೊದಲು ನನ್ನ ಬಳಿ ಯಾವುದೇ ಕಾರು ಇರಲಿಲ್ಲ. ನಾನು ಆಟೋ ಮೂಲಕ ಅವಾರ್ಡ್ ಶೋ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ತೆರಳುತ್ತಿದ್ದೆ ಎಂದು ಕಾರ್ತಿಕ್ ಆರ್ಯನ್ ಹೇಳಿದ್ದರು.

ಕ್ಲಾಸ್‌ ಬಂಕ್‌ ಮಾಡಿ, ಚಪ್ಪಲಿ ಏಟು ತಿಂದವನಿಂದು ಬಾಲಿವುಡ್‌ನ ಸ್ಟಾರ್‌ ನಟ!
 

click me!