ನಿಮ್ಮ ಚಡ್ಡಿ, ಬನಿಯನ್ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್: ಈಗ ಏನಾಯ್ತು ಕೇಳ್ತಿದ್ದಾರೆ ಫ್ಯಾನ್ಸ್.
ಬೇಟಾ... ಚಡ್ಡಿ, ಬನಿಯನ್ ಮಾರಿದ್ರೂ ಮೂರು ಖಾನ್‌ರನ್ನು ಒಟ್ಟಿಗೇ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂಥ ತಾಕತ್ತು ಯಾರಿಗೂ ಇಲ್ಲ, ಅಷ್ಟು ಹಣವನ್ನು ಹೊಂದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದರು. ಆ ಮೂಲಕ ತಮ್ಮನ್ನು ಸೇರಿದಂತೆ ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರನ್ನು ಒಟ್ಟಿಗೇ ಸೇರಿಸಲು ಸಾಧ್ಯವೇ ಇಲ್ಲ ಎಂದಿದ್ದರು.
ಅಷ್ಟಕ್ಕೂ ಶಾರುಖ್ ಖಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಮೂವರು ಖಾನ್‌ಗಳು ಒಂದೇ ಚಿತ್ರದಲ್ಲಿ ಕಾಣಿಸಿರಲಿಲ್ಲ. ಆದ್ರೆ ಇದೀಗ ಆಗಿದ್ದೇನು? ಯಾವ ನಿರ್ಮಾಪಕರು, ನಿರ್ದೇಶಕರಿಗೂ ಸಾಧ್ಯವಾಗದ ಕೆಲಸವನ್ನು ಮುಕೇಶ್ ಅಂಬಾನಿ ಮಾಡಿ ತೋರಿಸಿದ್ದಾರೆ. ಈ ಮೂಲಕ ಶಾರುಖ್ ಖಾನ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಕಮೆಂಟ್‌ಗಳು ಬರುತ್ತಿದ್ದು, ಶಾರುಖ್ ಖಾನ್ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ! ಬಾಲಿವುಡ್ ಬಾದ್‌ಶಾಹ್‌ನ ಸೊಕ್ಕು ಈಗ ಹೇಗೆ ಕರಗಿತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಮದುವೆಯೇ ಜೀವನವಲ್ಲ ಎಂದಿದ್ದ 'ಮಾಣಿಕ್ಯ' ನಟಿ ಸದ್ದಿಲ್ಲದೇ ನಿಶ್ಚಿತಾರ್ಥ: 18 ವರ್ಷದ ಪ್ರೀತಿಗೆ ಮದುವೆಯ ಬಂಧ!
ಅಷ್ಟಕ್ಕೂ, ಬಾಲಿವುಡ್ ಆಳುತ್ತಿರುವ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಈ ಬಗ್ಗೆ 2013ರಲ್ಲೇ ಪ್ರಶ್ನೆ ಮಾಡಲಾಗಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಹೇಳಿದ್ದರು ಶಾರುಖ್ ಖಾನ್. ಅಂಥ ನಿರ್ಮಾಪಕರೇ ಇಲ್ಲ ಎಂದಿದ್ದರು. ಅದೂ ಸಾಲದು ಎಂಬುದಕ್ಕೆ ಆಮೀರ್ ಖಾನ್ ಪ್ರಶಸ್ತಿ ಸಮಾರಂಭಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಈ ಮೂವರನ್ನು ಒಟ್ಟಿಗೆ ನೋಡೋಕೆ ಸಾಧ್ಯವೇ ಆಗುತ್ತಿರಲಿಲ್ಲ. ಆದರೆ, ಆದರೆ ಮುಕೇಶ್ ಅಂಬಾನಿ ಅವರ ಪುತ್ರಿ ಅನಂತ್ ಅಂಬಾನಿಯವರ ಮದುವೆಯಲ್ಲಿ ಇದೀಗ ಸುಳ್ಳಾಗಿದೆ. ಇದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಮುಕೇಶ್ ಅಂಬಾನಿ.
ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ (SRK) ಪ್ರಸ್ತುತ ವಿಶ್ವದ ಅತ್ಯಂತ ಪ್ರಸಿದ್ಧ ನಟ ಎಂದು ಪರಿಗಣಿಸಲಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಅವರ ಅಭಿಮಾನಿಗಳ ಕೊರತೆ ಇಲ್ಲ. ಅಷ್ಟಕ್ಕೂ, ಶಾರುಖ್ ಖಾನ್ ಅಂಬಾನಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಂಬಾನಿ ಕುಟುಂಬದಲ್ಲಿ ಯಾವುದೇ ಸಮಾರಂಭ ನಡೆದರೂ ಶಾರುಖ್ ಖಂಡಿತಾ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅನಂತ್-ರಾಧಿಕಾ ಮದುವೆಯ ಪೂರ್ವದಲ್ಲಿ ಕಿಂಗ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಒಂದು ವಿಡಿಯೋದಲ್ಲಿ ಶಾರುಖ್ ಖಾನ್ ವೇದಿಕೆಗೆ ಬಂದ ಕೂಡಲೇ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ಆದಾಗ್ಯೂ, ಅವರು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ನಾಟು-ನಾಟು ಹಾಡಿಗೆ ಹುಕ್ ಸ್ಟೆಪ್ ಹಾಕುವ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅತ್ಯಂತ ಆಕರ್ಷಕ ಕ್ಷಣ ಬಂದಿತು. ಆದರೆ, ಈ ವಿಡಿಯೋದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
12 ಎಕರೆ ಜಾಗದಲ್ಲಿ ರಜನೀಕಾಂತ್ ಆಸ್ಪತ್ರೆ: ರಾಜಕೀಯದಿಂದ ದೂರವಿದ್ದು ಬಡವರಿಗೆ ಉಚಿತ ಚಿಕಿತ್ಸೆ ಗುರಿ