ತಿಂಗಳಿಗೆ 35 ಲಕ್ಷ ತರುತ್ತಿದ್ದ ಟಿವಿ ಉದ್ಯೋಗ ಬಿಟ್ಟು ಸಿನಿಮಾಗೆ ಹಾರಿದ ವಿಕ್ರಾಂತ್ ಮಾಸ್ಸೆ; ಈಗ ಪಡೆವ ಸಂಭಾವನೆ ಎಷ್ಟು?

By Suvarna NewsFirst Published Mar 4, 2024, 12:51 PM IST
Highlights

12th ಫೇಲ್ ನಟ ವಿಕ್ರಾಂತ್ ಮಾಸ್ಸೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗ ತಿಂಗಳಿಗೆ 35 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದರು. ಆದರೆ, ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಇಷ್ಟೊಂದು ಆದಾಯದ ಕೆಲಸ ಬಿಟ್ಟರು. ಈಗ ಅವರು ಚಿತ್ರವೊಂದಕ್ಕೆ ಪಡೆವ ಸಂಭಾವನೆ ಎಷ್ಟು?

ಇತ್ತೀಚಿನ ತಿಂಗಳುಗಳಲ್ಲಿ, ವಿಕ್ರಾಂತ್ ಮಾಸ್ಸೆ ಜನಪ್ರಿಯತೆಯ ಗಮನಾರ್ಹ ಏರಿಕೆಯನ್ನು ಅನುಭವಿಸಿದ್ದಾರೆ. 12th fail ಚಿತ್ರದ  IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅಭಿನಯದಿಂದಾಗಿ ಎಲ್ಲರು ಗುರುತಿಸುವಂತಾಗಿದ್ದಾರೆ. ಇಷ್ಟಕ್ಕೂ ಈ ನಟ ಟಿವಿ ಧಾರಾವಾಹಿಗಳಲ್ಲಿ ಮುಂಚೆಯೂ ಜನಪ್ರಿಯರೇ ಆಗಿದ್ದರು. ತಿಂಗಳಿಗೆ 35 ಲಕ್ಷ ರೂ.ಗಳಷ್ಟು ಸಂಪಾದಿಸುತ್ತಿದ್ದರು. ಕಡೆಗೆ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ವ್ಯಾಮೋಹಕ್ಕೆ ಇಷ್ಟೊಂದು ಸಂಪಾದನೆಯಿದ್ದ ಕೆಲಸ ತೊರೆದು ಪತ್ನಿಯಿಂದ ಪಾಕೆಟ್ ಮನಿ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಆದರೆ, 12th failನ ಗೆಲುವು ನಟನಿಗೆ ಕಳೆದುಕೊಂಡದ್ದನ್ನೆಲ್ಲ ಮರಳಿಸಿದೆ. ಈಗ ಚಿತ್ರವೊಂದಕ್ಕೆ ವಿಕ್ರಾಂತ್ ಪಡೆವ ಸಂಭಾವನೆ ಎಷ್ಟು ಗೊತ್ತಾ?

ಇತ್ತೀಚೆಗೆ ಗಂಡು ಮಗುವಿನ ಆಗಮನದಿಂದ ಸಂಭ್ರಮದಲ್ಲಿರುವ ವಿಕ್ರಾಂತ್ ಮಾಸ್ಸೆಯದು ಮನರಂಜನಾ ಉದ್ಯಮದಲ್ಲಿ ನಾಟಕೀಯ ಜೀವನಗಾಥೆ. ವಿಕ್ರಾಂತ್ ಚಲನಚಿತ್ರಗಳಿಗೆ ಕಾಲಿಡುವ ಮುನ್ನ ಹಿಂದಿ ಧಾರಾವಾಹಿ ಲೋಕದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. 'ಬಾಲಿಕಾ ವಧು,' 'ಧರಮ್ ವೀರ್', 'ಕುಬೂಲ್ ಹೈ'ನಂಥ ಯಶಸ್ವಿ ದೂರದರ್ಶನ ಧಾರಾವಾಹಿಗಳಲ್ಲಿ ಉತ್ತಮ ಪಾತ್ರದಿಂದ ಖ್ಯಾತಿ ಪಡೆದಿದ್ದರು. ಆಗ, ತಾವು ತಿಂಗಳಿಗೆ 35 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದುದ್ದಾಗಿ ಅನ್‌ಫಿಲ್ಟರ್ಡ್ ಬೈ ಸಮ್ದೀಶ್‌ನಲ್ಲಿನ ಕ್ಯಾಂಡಿಡ್ ಸಂದರ್ಶನದ ಸಮಯದಲ್ಲಿ ನಟ ಬಹಿರಂಗಪಡಿಸಿದ್ದರು. 


 

24ನೇ ವಯಸ್ಸಲ್ಲೇ 35 ಲಕ್ಷ ರೂ.
24ನೇ ವಯಸ್ಸಿನಲ್ಲಿ ಅವರು ತಿಂಗಳಿಗೆ 35 ಲಕ್ಷ ರೂಪಾಯಿ ಗಳಿಸುತ್ತಿದ್ದರೂ ಅದು ಅವರಿಗೆ ಶಾಂತಿ ನೀಡುತ್ತಿರಲಿಲ್ಲವಂತೆ. ಸಿನಿಮಾದಲ್ಲಿ ಪಾತ್ರ ಮಾಡುವ ಬಗ್ಗೆ ಸದಾ ಯೋಚನೆಗಳು ಹರಿದು ಬರುತ್ತಲೇ ಇದ್ದವಂತೆ. ಹೀಗಾಗಿ ಕಡೆಗೂ ಧೈರ್ಯ ಮಾಡಿ, ಅದು ಒದಗಿಸುವ ಗಣನೀಯ ಆರ್ಥಿಕ ಅಲ್ಲೋಲಕಲ್ಲೋಲತೆಯ ಹೊರತಾಗಿಯೂ, ಧಾರಾವಾಹಿ ಲೋಕ ತೊರೆವ ನಿರ್ಧಾರ ಮಾಡಿದರು. 

ಪತ್ನಿಯಿಂದ ಪಾಕೆಟ್ ಮನಿ
ಆರ್ಥಿಕ ಯಶಸ್ಸು ಆಂತರಿಕ ಶಾಂತಿಗೆ ಸಮನಾಗಿರುವುದಿಲ್ಲ ಎಂದು ಒತ್ತಿ ಹೇಳುವ ನಟ, ಸಿನಿಮಾದಲ್ಲಿ ಅದೃಷ್ಟವನ್ನು ಪ್ರಯತ್ನಿಸುತ್ತಿರುವಾಗ ಗಳಿಸಿದುದನ್ನೆಲ್ಲ ಕಳೆದುಕೊಂಡು ಕಡೆಗೆ ಆಡಿಶನ್ ಹೋಗಲೂ ಪತ್ನಿ ಶೀತಲ್ ಠಾಕೂರ್ ಅವರಿಂದ ಪಾಕೆಟ್ ಮನಿ ಪಡೆಯುತ್ತಿದ್ದರಂತೆ. 

ಅಂತೂ ಹೇರ್‌ಸ್ಟೈಲ್ ಬದಲಿಸಿದ ಐಶ್ ಮಗಳು; ಆರಾಧ್ಯ ಹೊಸ ಲುಕ್‌‌ ನೋಡಿ ನೆಟಿಜನ್ಸ್ ಶಾಕ್
 

ಕಡೆಗೂ ಅವರಿಗೆ ಚಲನಚಿತ್ರ ಕ್ಷೇತ್ರ ಕೈ ಹಿಡಿಯಿತು. ವಿಕ್ರಾಂತ್ ಮಾಸ್ಸೆ ಅವರು ಚಲನಚಿತ್ರಗಳ ಜಗತ್ತಿನಲ್ಲಿ ಯಶಸ್ಸನ್ನು ಕಂಡುಕೊಂಡಂತೆ, ಅವರ ಶುಲ್ಕಗಳು ಸಹ ಗಮನಾರ್ಹ ಏರಿಕೆಯನ್ನು ಅನುಭವಿಸಿದವು. 2021ರಲ್ಲಿ, ಹಿಂದೂಸ್ತಾನ್ ಟೈಮ್ಸ್‌ನ ವರದಿಗಳು ಮಾಸ್ಸೆ ಪ್ರತಿ ಚಿತ್ರಕ್ಕೆ ರೂ 75 ಲಕ್ಷದಿಂದ ರೂ 1 ಕೋಟಿವರೆಗೆ ಶುಲ್ಕ ವಿಧಿಸಿದ್ದಾರೆ ಎಂದು ಬಹಿರಂಗಪಡಿಸಿತು. ತರುವಾಯ, ನೇರ ಒಟಿಟಿಯಲ್ಲಿ ಬಿಡುಗಡೆ ಎಂದರೆ ಅವರ ಶುಲ್ಕವು ರೂ. 1.5 ಕೋಟಿಗೆ ಏರಿತು. 12th ಫೇಲ್‌ಗಾಗಿ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಇದೀಗ 2024ರಲ್ಲಿ ಮಾಸ್ಸಿಯ ಫಿರ್ ಆಯಿ ಹಸೀನ್ ದಿಲ್ರುಬಾ ಚಿತ್ರ ಬಿಡುಗಡೆಯಾಗಲಿದೆ. ಟ್ವೆಲ್ತ್ ಫೇಲ್ ಬಳಿಕ ಅವರಿಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿವೆ. 

click me!