ಸಮಂತಾ ಅಂಗಗಳ ಬಗ್ಗೆ ನಟಿ ಶ್ರೀರೆಡ್ಡಿ ಇಂಥ ಕಮೆಂಟ್​ ಮಾಡೋದಾ? ಫ್ಯಾನ್ಸ್ ಗರಂ

By Suvarna NewsFirst Published Aug 31, 2023, 12:02 PM IST
Highlights

 ಟಾಲಿವುಡ್​ ನಟಿ ಶ್ರೀರೆಡ್ಡಿ ಅವರು ನಟಿ ಸಮಂತಾ ರುತ್​ ಪ್ರಭು ಅವರ ಅಂಗಗಳ ಬಗ್ಗೆ ಅತ್ಯಂತ ಕೀಳುಮಟ್ಟದ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

 ಟಾಲಿವುಡ್​ ನಟಿ ಶ್ರೀರೆಡ್ಡಿ (Sri Reddy) ಹೆಸರು ಚಲನಚಿತ್ರಗಳಿಗಿಂತಲೂ ಹೆಚ್ಚಾಗಿ ಕೇಳಿಬರುವುದು ಕಾಂಟ್ರವರ್ಸಿಗಳ ಮೂಲಕ. ಅದರಲ್ಲಿಯೂ ಎರಡು ವರ್ಷಗಳ ಹಿಂದೆ ಮೀ ಟೂ ಸಕತ್​ ಸುದ್ದಿ ಮಾಡಿದ್ದ ಸಂದರ್ಭದಲ್ಲಿ ಈಕೆ ಹಲವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಿದೆ. ಕೆಲವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದೂ ಇದೆ. ನಂತರ ಡ್ರಗ್​ ಮಾಫಿಯಾದ ಬಗ್ಗೆ ತಮಗೆಲ್ಲಾ ಗೊತ್ತು ಎನ್ನುವ ಮೂಲಕ ಸುದ್ದಿ ಮಾಡಿದ್ದ ಶ್ರೀರೆಡ್ಡಿ ತಮಗೆ ರಕ್ಷಣೆ ಕೊಟ್ಟರೆ ಎಲ್ಲರ ಹೆಸರನ್ನೂ ಬಹಿರಂಗಪಡಿಸುವುದಾಗಿ ಹೇಳಿದ್ದರು. ಟಾಲಿವುಡ್‌ನಲ್ಲೂ ನಡೆಯುತ್ತಿದೆ ಡ್ರಗ್ಸ್, ವ್ಯಭಿಚಾರ ಹೀಗೆ ಅನೇಕ ಅಕ್ರಮ ಚಟುವಟಿಕೆಗಳು ದಯವಿಟ್ಟು ತನಿಖೆ ಮಾಡಿ ಎಂದು ನಟಿ ಒತ್ತಾಯಿಸಿದ್ದರು. ಇಂತಿಪ್ಪ ನಟಿ ಇದೀಗ ಸಮಂತಾ ರುತ್​ ಪ್ರಭು ಅವರ ವಿರುದ್ಧ  ಅಸಹ್ಯಕರ ಎನ್ನುವಂಥ ಕಮೆಂಟ್​ ಮಾಡಿದ್ದಾರೆ. ಅವರ ದೇಹ, ಅಂಗಗಳ ಬಗ್ಗೆ ಶ್ರೀರೆಡ್ಡಿ ಅತ್ಯಂತ ಕೆಟ್ಟ ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ.


ಬಾಡಿ ಷೇಮಿಂಗ್​ (Body Shaming) ಕುರಿತು ಸಾಕಷ್ಟು ಮಂದಿ ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವ ನಡುವೆಯೇ ಸಮಂತಾ ಅವರ ಬಗ್ಗೆ ಶ್ರೀರೆಡ್ಡಿ ಆಡಿರುವ ಮಾತುಗಳಿಂದ ಸಮಂತಾ ಫ್ಯಾನ್ಸ್​ ಸಕತ್​ ಗರಂ ಆಗಿದ್ದಾರೆ. ಶ್ರೀರೆಡ್ಡಿಯವರ ಜನ್ಮ ಜಾಲಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ದೊಡ್ಡ ಆಂದೋಲನವನ್ನೇ ಎಬ್ಬಿಸಿ ನಾಟಕವಾಡಿದ್ದೀರಿ, ಈಗ ನಟಿಯ ವಿರುದ್ಧವೇ ಇಂಥ ಅಸಹ್ಯ ಕಮೆಂಟಾ ಎಂದು ಸಮಂತಾ ಅಭಿಮಾನಿಗಳು ಶ್ರೀರೆಡ್ಡಿ ಅವರನ್ನು ಜರಿಯುತ್ತಿದ್ದಾರೆ.  ಕೊರೋನಾ ಸಂದರ್ಭದಲ್ಲಿ ಆಡಿದ ಅಸಭ್ಯ ಮಾತುಗಳಿಂದ ಮಾನ ಹೋದದ್ದು ಸಾಕಾಗಲಿಲ್ಲವೆ, ಈಗ ಬೇರೊಬ್ಬ ನಟಿಯ ಬಗ್ಗೆ ಹೀಗೆಲ್ಲಾ ಮಾತನಾಡುತ್ತಿದ್ದೀರಲ್ಲ ಎನ್ನುತ್ತಿದ್ದಾರೆ. ಅಷ್ಟಕ್ಕೂ  ಕೊರೋನಾ ಸಮಯದಲ್ಲಿ ಶ್ರೀ ರೆಡ್ಡಿ ಅವರು,  ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ 'Constant sex kills corona virus, its proved' ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಸತತವಾಗಿ ಸೆಕ್ಸ್‌ ಮಾಡುವುದರಿಂದ ಕೊರೋನಾ ವೈರಸ್‌ ದೂರ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಬರೆದಿದ್ದರು. ಯಾವುದೇ ಆಧಾರವಿಲ್ಲದ ಇಂಥ ಹೇಳಿಕೆಯನ್ನು ನೀಡಿರುವ ಶ್ರೀ ರೆಡ್ಡಿ ವಿರುದ್ಧ ಪೊಲೀಸರು  ದೂರು ದಾಖಲಿಸಿದ್ದರು.  ಆಕೆಯ ಪೋಸ್ಟ್‌ಗೆ ನೆಟ್ಟಿಗರು ಫುಲ್ ಕ್ಲಾಸ್‌ ತೆಗೆದುಕೊಂಡಿದ್ದರು. 'ಸೆಕ್ಸ್‌ ಸರಿ ಮಾಡುತ್ತದೆ, ಅಂದ್ರೆ ನೀವೇ ರೋಗಿಗಳೊಂದಿಗೆ ಸೆಕ್ಸ್‌ಗೆ ಇಳಿಯಬಾರದಾ? ಎಂದೆಲ್ಲಾ ಕೇಳಿದ್ದರು. ಇದಕ್ಕೂ ಸುಮ್ಮನಿರದಿದ್ದ ನಟಿ,  'ಜೀವನವನ್ನು ಬೇಕಾದರೆ ಮದುವೆಯಾಗದ ಹುಡುಗನೊಂದಿಗೆ ಸೆಕ್ಸ್‌ ಮಾಡಿ ಹಾಳು ಮಾಡಿಕೊಳ್ಳಬಹುದು. ಆದರೆ ಈ ಲಿವರ್, ಶ್ವಾಸಕೋಶ ಹಾಳು ಮಾಡಿಕೊಂಡಿರುವ ವೃದ್ಧರು ಅಥವಾ ಅಂಕಲ್ಸ್‌ನಿಂದ ಬೇಡ. ಅವರ ದೇಹಕ್ಕೆ ಬಗ್ಗಲೂ ಆಗುವುದಿಲ್ಲ' ಎಂದು ಬರೆದುಕೊಂಡು ಮತ್ತಷ್ಟು ವಿವಾದಕ್ಕೆ ಗುರಿಯಾಗಿದ್ದರು.

ನಾಲ್ಕು ಮಕ್ಕಳ ಜೊತೆ ಸೈಫ್​ ಅಲಿ ಫೋಟೋ ಶೇರ್​ ಮಾಡಿದ್ರೆ ಹೀಗೆಲ್ಲಾ ಕಮೆಂಟ್​ ಹಾಕೋದಾ?

ಇಂಥ ಅಸಭ್ಯ ಮಾತುಗಳಿಂದಲೇ ಹೆಚ್ಚು ಜನಪ್ರಿಯವಾಗಿರೋ ಶ್ರೀರೆಡ್ಡಿ, ಸಮಂತಾ (Samantha) ಅವರ ದೇಹದ ಬಗ್ಗೆ ಹೇಳಿದ್ದೇನೆಂದರೆ, ಸಮಂತಾ ಅವರ ದೇಹದ ಭಾಗಗಳು 'ವಾವ್' ಅನ್ನಿಸುವಂತೆ ಇಲ್ಲವಂತೆ. ಅವರ ದೇಹದ ಭಾಗಗಳು ಟೆಂಪ್ಟ್​ ಮಾಡುವುದಿಲ್ಲ ಎಂದಿದ್ದಾರೆ. ನಟಿಯರ ದೇಹದ ಭಾಗಗಳು ಟೆಂಪ್ಟ್​ ಮಾಡುವಂತೆ ಇದ್ದರೆ ಮಾತ್ರ ಅವರಿಗೆ ಸಿನಿ ರಂಗದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯ ಎನ್ನುವ ಮಾತಿದೆ. ಇದೇ  ಕಾರಣಕ್ಕೆ ಎಷ್ಟೋ ನಟಿಯರು ತಮ್ಮ ಅಂಗಾಂಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೂ ಆಗಿದೆ. ಬಳಕುವ ಬಳ್ಳಿಯಂತೆ ದೇಹವಿದ್ದರೂ ಸ್ತನಗಳು ಮಾತ್ರ ಟೆಂಪ್ಟ್​ ಆಗುವಂತಿರಬೇಕು, ದೇಹದಲ್ಲಿ ಅದೇ ಎದ್ದು ಕಾಣಬೇಕು ಎನ್ನುವುದು ಸಿನಿ ಕ್ಷೇತ್ರದಲ್ಲಿ ಅದರಲ್ಲಿಯೂ ಬಾಲಿವುಡ್​ನಲ್ಲಿ ಜನಜನಿತ ಮಾತಾಗಿದೆ. ಅದನ್ನೇ ಈಗ ಈ ರೀತಿಯಾಗಿ ಶ್ರೀರೆಡ್ಡಿ ಹೇಳಿದ್ದಾರೆ.

ಸಮಂತಾ ಸದ್ಯ ಖುಷಿ ಚಿತ್ರದ ಖುಷಿಯಲ್ಲಿ ಇರುವ ನಡುವೆಯೇ, ಶ್ರೀರೆಡ್ಡಿ ನೀಡಿರುವ ಇಂಥ ಅಸಹ್ಯ ಮಾತುಗಳಿಂದ ಪುನಃ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಕೆಲವು ಚಿತ್ರ ತಾರೆಯರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ಹೀಗೆಲ್ಲಾ ಮಾತನಾಡುವ ಮೂಲಕ ಜನಪ್ರಿಯರಾಗುವ ಹುಚ್ಚು ಹಂಬಲವಿರುತ್ತದೆ. ಅದೇ ರೀತಿ ಶ್ರೀರೆಡ್ಡಿ ಕೂಡ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದಾಗಿ ನೆಟ್ಟಿಗರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಈಗ ಚೆನ್ನೈನಲ್ಲಿ ನೆಲೆಸಿರುವ  ಶ್ರೀರೆಡ್ಡಿ ಆಗಾಗ ತಮ್ಮ ಹತಾಶೆಯನ್ನು ಹೊರಹಾಕುತ್ತಾ ಇಂಡಸ್ಟ್ರಿಯ ಬಗ್ಗೆ ಶಾಕಿಂಗ್ ಕಮೆಂಟ್ಸ್ ಮಾಡುತ್ತಲೇ ಇದ್ದಾರೆ. ಶ್ರೀರೆಡ್ಡಿ ಒಂದಲ್ಲ ಒಂದು ರೂಪದಲ್ಲಿ ಸುದ್ದಿಯಲ್ಲಿದ್ದಾರೆ.

ಶೀಘ್ರವೇ ಗುಡ್​ ನ್ಯೂಸ್​ ಎಂದ ವಿಜಯ್​ ದೇವಕೊಂಡ: ಇದು ರಶ್ಮಿಕಾ ಕೈ ಅಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್!
 

click me!