ನಾಲ್ಕು ಮಕ್ಕಳ ಜೊತೆ ಸೈಫ್​ ಅಲಿ ಫೋಟೋ ಶೇರ್​ ಮಾಡಿದ್ರೆ ಹೀಗೆಲ್ಲಾ ಕಮೆಂಟ್​ ಹಾಕೋದಾ?

By Suvarna News  |  First Published Aug 30, 2023, 6:33 PM IST

ಸೈಫ್​ ಅಲಿ ಖಾನ್​ ಅವರು ಹಾಲಿ ಪತ್ನಿ ಕರೀನಾ ಕಪೂರ್​ ಮತ್ತು ನಾಲ್ವರು ಮಕ್ಕಳ ಜೊತೆ ರಕ್ಷಾ ಬಂಧನಕ್ಕೆ ಕ್ಯೂಟ್​ ಫೋಟೋ ಶೇರ್​ ಮಾಡಿದ್ದಾರೆ. ಆದರೆ ಕಮೆಂಟಿಗರು ಇದನ್ನು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 
 


ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. 

Tap to resize

Latest Videos

ಅಮೃತಾ ಸಿಂಗ್​ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್​?

ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​. ತಮ್ಮ ಮೊದಲ ಪತ್ನಿಯ ಜೊತೆ ಸೈಫ್​ ಸಂಪರ್ಕದಲ್ಲಿ ಇಲ್ಲದಿದ್ದರೂ ಅವರ ಮಕ್ಕಳ ಜೊತೆ ಸಂಪರ್ಕದಲ್ಲಿ ಇದ್ದಾರೆ.  ಈ ಪೈಕಿ ಸಾರಾ ಅಲಿ ಖಾನ್​ ಇತ್ತೀಚಿಗೆ ತುಂಬಾ ಸುದ್ದಿಯಲ್ಲಿರುವ ನಟಿ. ಅಮ್ಮನಂತೆ ಅಪ್ಪಟ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾರಿ ಟೀಕೆ-ಗಲಾಟೆಗಳ ನಡುವೆಯೇ ಕೇದಾರನಾಥ, ಅಮರನಾಥ ಯಾತ್ರೆಯನ್ನೂ ಮುಗಿಸಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದೀಗ ಈ ಕ್ಯೂಟ್​ ಫ್ಯಾಮಿಲಿಯ ಫೋಟೋ ವೈರಲ್​ ಆಗಿದೆ.

ಫೋಟೋದಲ್ಲಿ ಸೈಫ್ ಅಲಿ, ಕರೀನಾ ಕಪೂರ್​, ನಾಲ್ವರು ಮಕ್ಕಳು ಹಾಗೂ ಸೈಫ್​ ಅಲಿಯ ಸಹೋದರರಿಯನ್ನು ನೋಡಬಹುದು. ರಕ್ಷಾ ಬಂಧನದ ನಿಮಿತ್ತ ಈ ಫೋಟೋ ಎಂದು ಹೇಳಲಾಗುತ್ತಿದೆ. ಆದರೆ ಯಾರ ಕೈಯಲ್ಲಿಯೂ ರಾಖಿ ಇಲ್ಲದೇ ಇರುವ ಕಾರಣ ಈ ಫೋಟೋ ಸಕತ್​ ಟ್ರೋಲ್​ಗೂ ಒಳಗಾಗುತ್ತಿವೆ. ಅಷ್ಟೇ ಅಲ್ಲದೇ, ಸುಂದರ ಫ್ಯಾಮಿಲಿ ಎಂದು ಹೇಳುವ ಬದಲು ಸೈಫ್​ ಅಲಿ ಹಾಗೂ ಕರೀನಾ (Kareena Kapoor Khan) ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ನಾಲ್ವರು ಖಾನ್​ ಮಕ್ಕಳು ಸಾಕಾಗಿದ್ಯೋ ಅಥವಾ ಇನ್ನೂ ಬರುವುದು ಇದೆಯೋ ಎಂದು ಒಬ್ಬಾತ ಪ್ರಶ್ನೆ ಮಾಡಿದರೆ, ಲವ್​ ಜಿಹಾದ್​ನ ಪ್ರತಿರೂಪ ಈ ಫೋಟೋ ಎನ್ನುತ್ತಿದ್ದಾರೆ. ಸಾರಾ ಅಲಿಯ ಅಮ್ಮ ಅಮೃತಾ ಸಿಂಗ್​ ಇದ್ದರೆ ಈ ಫೋಟೋ ಕಂಪ್ಲೀಟ್​ ಎನಿಸುತ್ತಿತ್ತು ಎಂದು ಇನ್ನೋರ್ವ ಕಮೆಂಟ್​ ಮಾಡಿದ್ದಾರೆ. ಈ ಫೋಟೋಗೆ ಡಿಸ್​ಲೈಕ್​ ಕೊಡಬೇಕು, ಬಟನ್​ ಯಾಕೆ ಇಲ್ಲ ಎಂದು ಕೆಲವರು ಕೇಳಿದ್ದಾರೆ. 

ಯಾ ಅಲ್ಹಾ... ಮಹಿಳೆಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸು... ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್​!

click me!