ಸೂರ್ಯೋದಯ ಮಿಸ್ಸೇ ಇಲ್ಲ, 6.30ಕ್ಕೆ ಊಟ ಸ್ಟಾಪ್, 9.30ಕ್ಕೆ ನಿದ್ದೆ​! ಅಕ್ಷಯ್​ ಫಿಟ್​ನೆಸ್​ ಮಂತ್ರ ಕೇಳಿ...

By Suvarna News  |  First Published Aug 30, 2023, 6:09 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಫಿಟ್​ನೆಸ್​ ಮಂತ್ರದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?
 


ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸದ್ಯ ಬಹಳ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಅವರ ಅಭಿನಯದ ಓ ಮೈ ಗಾಡ್​-2 ಸೃಷ್ಟಿಸಿದ ವಿವಾದ. ನಟ ಅಕ್ಷಯ್​ ಕುಮಾರ್​ (Akshay Kumar)  ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಸೋಲು ಕಾಣುತ್ತಿರುವ ಹೊತ್ತಿನಲ್ಲಿಯೇ ಭರವಸೆ ಹೆಚ್ಚಿಸಲು ಬಂದಿದ್ದ  ಓ ಮೈ ಗಾಡ್‌-2 (OMG 2) ಕೂಡ ವಿವಾದದಲ್ಲಿ ಸಿಲುಕಿತ್ತು.    ಶಿವನ ಪಾತ್ರಕ್ಕೆ ಕತ್ತರಿ ಹಾಕುವುದು ಸೇರಿದಂತೆ ಹಲವು ದೃಶ್ಯಗಳನ್ನು ಕಟ್​ ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ  ಆದೇಶಿಸಿತ್ತು.  ಇವೆಲ್ಲಾ ಬದಲಾವಣೆ ಮಾಡಿ ಚಿತ್ರ ಬಿಡುಗಡೆಯಾದರೂ ಅದು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇಂದಿಗೂ ಇದರ ವಿರುದ್ಧ ವಿರೋಧ ವ್ಯಕ್ತವಾಗುತ್ತಲೇ ಅದೆ. 

ಈ ಮೂಲಕ ಸತತ ಸೋಲಿನಿಂದ ಅಕ್ಷಯ್‌ಗೆ ಹೊರಬರಲು ಈ ವರ್ಷವೂ ಸಾಧ್ಯವಾಗಿಲ್ಲ. ಕಳೆದ ವರ್ಷ ರಿಲೀಸ್ ಆಗಿದ್ದ ಅಕ್ಷಯ್ 5 ಸಿನಿಮಾಗಳು ಹೀನಾಯ ಸೋಲು ಕಂಡಿತ್ತು. ಈ ವರ್ಷದ ಪ್ರಾರಂಭದಲ್ಲಿ ಬಂದ ಸೆಲ್ಫಿ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.  ಈ ಕುರಿತು ಮಾತನಾಡಿದ್ದ ಅಕ್ಷಯ್​ ಕುಮಾರ್​, ನನ್ನ ವೃತ್ತಿ ಜೀವನದಲ್ಲಿ ನಾನು ಒಂದೇ ಬಾರಿಗೆ 16 ಸತತ ಫ್ಲಾಪ್‌ಗಳನ್ನು ಕಂಡಿದ್ದೆ. ಒಂದು ಸಮಯವಿತ್ತು. ಸತತ ಎಂಟು ಚಿತ್ರಗಳು ಸೋತಿತ್ತು. ಈಗ ನಾನು ಸತತವಾಗಿ ಮೂರು-ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ ಅವು ಕೆಲಸ ಮಾಡಲಿಲ್ಲ. ಅದು ನಮ್ಮ ಸ್ವಂತ ತಪ್ಪಿನಿಂದ ನಡೆಯುತ್ತದೆ. ಪ್ರೇಕ್ಷಕರು ಬದಲಾಗಿದ್ದಾರೆ, ನಾವು ಬದಲಾಗಬೇಕು ಎಂದಿದ್ದಾರೆ.
 

Tap to resize

Latest Videos

ಸಲಿಂಗ ಕಾಮದ 'ಓ ಮೈ ಗಾಡ್​-2' ವಿವಾದಿತ ಚಿತ್ರ ವೀಕ್ಷಿಸಿದ ಸದ್ಗುರು, ಚಿತ್ರದ ಬಗ್ಗೆ ಹೇಳಿದ್ದೇನು?

ಅದೇನೇ ಇದ್ದರೂ, ಚಿತ್ರರಂಗದಲ್ಲಿ ಏರಿಳಿತ ಜೀವನದ ಏರಿಳಿತದಷ್ಟೇ ಸಹಜ. ಎಷ್ಟೋ ಬಾರಿ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿರುವ ಚಿತ್ರಗಳು ಫ್ಲಾಪ್​ ಆದರೆ ಹತ್ತಾರು ಕೋಟಿಯ ಚಿತ್ರಗಳು ಬ್ಲಾಕ್​ಬಸ್ಟರ್​ ಆಗುವುದು ಉಂಟು. ಕೆಲವರಿಗೆ ಕೆಲವು ವರ್ಷ ಯಾವುದೇ ಚಿತ್ರಗಳು ಕೈ ಹಿಡಿಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಸದ್ಯ ಅಕ್ಷಯ್​ ಕುಮಾರ್​ ಅವರ ಸ್ಥಿತಿಯೂ ಹಾಗೆಯೇ ಇದೆ. ಅದೇನೇ ಇದ್ದರೂ, 55 ವರ್ಷ ವಯಸ್ಸಿನ ಅಕ್ಷಯ್​ ಕುಮಾರ್​ ಅವರ ಫಿಟ್​ನೆಸ್​ ಬಗ್ಗೆ ಮಾತ್ರ ಯಾರೂ ಎರಡು ಮಾತನಾಡುವಂತಿಲ್ಲ. ಇವರ ಫಿಟ್​ನೆಸ್​ ಕುರಿತು ಸದಾ ಎಲ್ಲರಿಗೂ ಒಂದು ಕಣ್ಣು ಇದ್ದೇ ಇದೆ. ಇದೀಗ ತಮ್ಮ ಫಿಟ್​ನೆಸ್​ ಗುಟ್ಟನ್ನು ನಟ ರಿವೀಲ್​ ಮಾಡಿದ್ದಾರೆ.

ಅವರ ಬಾಯಲ್ಲೇ ಕೇಳುವುದಾದರೆ: ನಾನು ಪ್ರತಿ ರಾತ್ರಿ 9.30ಕ್ಕೆ ಮಲಗುತ್ತೇನೆ. ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ಹುಟ್ಟಿದಾಗಿನಿಂದಲೂ ಇಲ್ಲಿಯವರೆಗೂ ಒಂದೇ ಒಂದು ದಿನವೂ ನಾನು ಸೂರ್ಯೋದಯವನ್ನು ಮಿಸ್​ ಮಾಡಿಕೊಂಡಿಲ್ಲ. ನನಗೆ ಪಾರ್ಟಿ, ಕುಡಿತ ಇಷ್ಟವಿಲ್ಲ. ಹಾಗಂತ ಅದು ಕೆಟ್ಟದ್ದು ಎಂದು ನಾನು ಹೇಳುತ್ತಿಲ್ಲ. ಆದರೆ ನನ್ನ ವಿಷಯಕ್ಕೆ ಬಂದರೆ ಅವು ನನಗೆ ಇಷ್ಟವಾಗದ ಕಾರಣ, ದಿನವೂ 9.30 ಗಂಟೆಯ ಒಳಗೆ ಮಲಗಿಬಿಡುತ್ತೇನೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ.  ಇಂದು  ಹೊಟ್ಟೆ ಸಮಸ್ಯೆ, ಆ ಸಮಸ್ಯೆ, ಈ ಸಮಸ್ಯೆಯಿಂದ ಜನ ಬಳಲ್ತಾ ಇರುವುದಕ್ಕೆ ಕಾರಣ, ನಮ್ಮ ಹ್ಯಾಬಿಟ್​. ಇದನ್ನು ಬದಲಿಸಿಕೊಳ್ಳಿ. 24 ಗಂಟೆಯಲ್ಲಿ ಒಂದು ಗಂಟೆ ನಿಮಗೋಸ್ಕರ ನೀಡಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ ನಟ ಅಕ್ಷಯ್ ಕುಮಾರ್​​. ಇನ್ನು ತಿನ್ನುವ ಹ್ಯಾಬಿಟ್​ ಕುರಿತು ಹೇಳಿರುವ ನಟ, ರಾತ್ರಿ 6.30ಯ ಬಳಿಕ ತಿನ್ನುವುದನ್ನು ನಿಲ್ಲಿಸಿ. ನಿಜಕ್ಕೂ ನಿಮ್ಮ ಶರೀರಕ್ಕೆ ಇಷ್ಟು ಆಹಾರ ಬೇಡವೇ ಬೇಡ. ಹುಚ್ಚರ ಹಾಗೆ ತಿನ್ನುತ್ತಲೇ ಇರುತ್ತೀರಿ, ದೇಹಕ್ಕೆ ಅದು ಬೇಡವಾದರೂ ಒತ್ತಾಯಪೂರ್ವಕವಾಗಿ ನೀಡುತ್ತಿದ್ದೀರಿ. ಆದ್ದರಿಂದ ಸಂಜೆ ಸೂರ್ಯ ಮುಳುಗಿದ ಮೇಲೆ ಆಹಾರ ಸ್ಟಾಪ್​ ಮಾಡಿ ಎಂದಿದ್ದಾರೆ. ಇವರ ಈ ಮಾತಿಗೆ ಚಪ್ಪಾಳೆಗಳ ಸುರಿಮಳೆಯೇ ಆಗಿದೆ. 

click me!