ಸಲಾರ್ ಸಿನಿಮಾ ಅನಾಯಾಸವಾಗಿ 1,000 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಸಲಾರ್ ಪಾರ್ಟ್-2 ಕೂಡ ಬರಲಿದೆ ಎನ್ನಲಾಗುತ್ತಿದೆ.
ಸಲಾರ್ ಸಿನಿಮಾ ಬಿಡುಗಡೆಯಾಗಿ ಮೂರೇ ದಿನಕ್ಕೆ 400 ಕೋಟಿ ಗಳಿಸಿದೆ ಎಂಬ ಸುದ್ದಿ ಹಬ್ಬಿದೆ. ಸಿನಿಮಾ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಲಾರ್ ಮೂಲಕ ಕಮಾಲ್ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಪ್ರಭಾಸ್ ಜತೆ ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಜ ಹೇಳಬೇಕೆಂದರೆ ಸಲಾರ್ ಸಿನಿಮಾದಲ್ಲಿ ಪ್ರಭಾಸ್-ಪ್ರಥ್ವಿರಾಜ್ ಇಬ್ಬರೂ ಹೀರೋಗಳು ಎನ್ನಬಹುದು.
ಸಲಾರ್ ಚಿತ್ರದಲ್ಲಿ ಏನೋ ಒಂದು ಮಿಸ್ ಆಗಿದೆ ಎಂದು ಚರ್ಚೆ ಆಗುತ್ತಿದೆ. ಅದು ಬೇರೇನೂ ಅಲ್ಲ, ಒಂದು ಐಟಂ ಸಾಂಗ್. ಹೀಗೆ ಸೋಷಿಯಲ್ ಮೀಡಿಯಾ ಸೆರಿದಂತೆ ಎಲ್ಲಾ ಕಡೆ ಸುದ್ದಿಯಾಗಲು ಕಾರಣವಿದೆ. ಏಕೆಂದರೆ, ಸಲಾರ್ ಶೂಟಿಂಗ್ ಹಂತದಲ್ಲಿರುವಾಗ ವಿಶೇಷ ಸಾಂಗ್ ಎಂದರೆ ಐಟಂ ಸಾಂಗ್ ಒಂದು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ. ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲವಾದರೂ ಅಂದು ಶೂಟಿಂಗ್ ನಡೆಸುತ್ತಿದ್ದಾಗ ಅದು ಭಾರೀ ಸುದ್ದಿಯಾಗಿತ್ತು. ಆದರೆ, ಈಗ ತೆರೆಗೆ ಬಂದಾಗ ಅದು ಮಿಸ್ ಆಗಿದೆ.
undefined
ಕಾರಣ ಏನೋ ಇರಬಹುದು. ಆದರೆ ಅದನ್ನು ನಿರೀಕ್ಷಿಸಿ ಹೋಗಿದ್ದವರಿಗೆ ಮಾತ್ರ ಖಂಡಿತ ನಿರಾಸೆ ಆಗಿದೆ. ಸಿಮ್ರಾತ್ ಕೌರ್ ಅವರು ಐಟಂ ಸಾಂಗ್ನಲ್ಲಿ ಇದ್ದರು, ಅದನ್ನು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿತ್ತು ಎನ್ನಲಾಗಿತ್ತು. ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಸಲಾರ್ (Salaar Movie)ಸಿನಿಮಾ ಈಗ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಕೇವಲ ಮೂರು ದಿನಕ್ಕೆ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!
ಸಲಾರ್ ಸಿನಿಮಾ ಅನಾಯಾಸವಾಗಿ 1,000 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಸಲಾರ್ ಪಾರ್ಟ್-2 ಕೂಡ ಬರಲಿದೆ ಎನ್ನಲಾಗುತ್ತಿದೆ. ಅದಕ್ಕೆ 'ಶೌರ್ಯಂಗ ಪರ್ವಮ್' ಎಂದು ಹೆಸರು ಇಡಲಾಗಿದೆ. ಅದರಲ್ಲಿ ಶೂಟ್ ಆಗಿರುವ ಐಟಂ ಸಾಂಗ್ ಇರಲಿದೆ ಎನ್ನಲಾಗುತ್ತಿದೆ. ಆದರೆ, ಈ ಸಿನಿಮಾ ಶೂಟಿಂಗ್ ಸದ್ಯಕ್ಕಂತೂ ಆರಂಭ ಆಗುವುದಿಲ್ಲ ಎನ್ನಬಹುದು. ಕಾರಣ, ಪ್ರಶಾಂತ್ ನೀಲ್ ಸಲಾರ್ ಬಳಿಕ ಜ್ಯೂನಿಯರ್ ಎಂಟಿಆರ್ ಸಿನಿಮಾ ನಿರ್ದೇಶನಕ್ಕೆ ತೊಡಗಿಸಿಕೊಳ್ಳಲಿದ್ದಾರೆ.
ಮುಂಬೈ 'ಗ್ಯಾರೇಜ್'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!
22 ಡಿಸೆಂಬರ್ 2023ರಂದು 'ಸಲಾರ್' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಮೊದಲ ದಿನ ಈ ಚಿತ್ರ ಭಾರತದಲ್ಲಿ 98 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 178 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಎರಡನೇ ದಿನ 65 ಕೋಟಿ ರೂಪಾಯಿ ಹಾಗೂ ಮೂರನೇ ದಿನ 72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಭಾರತದ ಗಳಿಕೆ 220 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 416 ಕೋಟಿ ರೂಪಾಯಿ ಆಗಿದೆ ಎನ್ನಲಾಗುತ್ತಿದೆ. ಮೂರೇ ದಿನಕ್ಕೆ ಆಗಿರುವ ಕಲೆಕ್ಷನ್ ಎಲ್ಲರ ಕಣ್ಣು ಕುಕ್ಕುತ್ತಿದೆ.
ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?