ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!

By Shriram Bhat  |  First Published Dec 25, 2023, 6:51 PM IST

ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ಹಂತವನ್ನು ತಲುಪಲು ಅವರ ಪಟ್ಟ ಪಾಡು ಅಂತಿಂಥದಲ್ಲ. ಕಳೆದ ದಿನವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.


ಬಾಲಿವುಡ್ ಜಗತ್ತಿನಲ್ಲಿ 80 ಹಾಗೂ 90ರ ದಶಕಗಳಲ್ಲಿ ಬಹುಬೇಡಿಕೆಯ ಸ್ಟಾರ್ ನಟರಾಗಿದ್ದವರ ಕಥೆಯಿದು. ಅವರಿನ್ನೂ ಆಗತಾನೇ ಇಂಡಸ್ಟ್ರಿಗೆ ಬಂದ ದಿನಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನೋಪಾಯಕ್ಕಾಗಿ ಭಾರಿ ಕಷ್ಟಪಡುತ್ತಿದ್ದರು. ಅದರೆ, ಇಂದು ಬಾಲಿವುಡ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅವರ ಹೆಸರೂ ಕೂಡ ಕಾಣಿಸುತ್ತಿದೆ. ಅವರು ಯಾರು ಬಲ್ಲಿರೇನು?

ಈ ಸ್ಟಾರ್ ನಟರ ಇಂದಿನ ಒಟ್ಟೂ ಅಸ್ತಿಯ ಮೌಲ್ಯ ಬರೋಬ್ಬರಿ 134 ಕೋಟಿ ರೂಪಾಯಿಗಳು. ಪ್ರತಿ ವರ್ಷ ಸಿನಿಮಾ ಹಾಗು ಬಿಸಿನೆಸ್‌ಗಳಿಂದ 12 ಕೋಟಿಗೂ ಹೆಚ್ಚು ಸಂಪಾದನೆ ಮಾಡುತ್ತಾರಂತೆ. ಒಂದು ಸಿನಿಮಾಗೆ ಈಗ 2-4 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುವ ಇವರು, ಸ್ಟಾರ್ ಆಗಿದ್ದ ಕಾಲದಲ್ಲಿ ಅಂದಿನ ಲೆಕ್ಕದಲ್ಲಿ ಚೆನ್ನಾಗಿಯೇ ಸಂಪಾದಿಸುತ್ತಿದ್ದರು. ಇವರು ಬ್ರಾಂಡ್ ಎಂಡಾರ್ಸ್‌ಮೆಂಟ್‌'ಗೆ 55 ಲಕ್ಷ ರೂ ಚಾರ್ಜ್ ಮಾಡುತ್ತಾರೆ. ಇನ್ನು ಮುಂಬೈನ ಜುಹುದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದು, ಇದರ ಮೌಲ್ಯ 30 ಕೋಟಿ ರೂಪಾಯಿಗಳು.

Tap to resize

Latest Videos

ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ಹಂತವನ್ನು ತಲುಪಲು ಅವರ ಪಟ್ಟ ಪಾಡು ಅಂತಿಂಥದಲ್ಲ. ಕಳೆದ ದಿನವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಈ ಬಾಲಿವುಡ್ ನಟ. ಹಾಗಿದ್ದರೆ ಇವರು ಯಾರು? ಅವರು ಬೇರಾರೂ ಅಲ್ಲ, ಬೇಟಾ (Beta)ಖ್ಯಾತಿಯ ಅನಿಲ್ ಕಪೂರ್. 

ಮುಂಬೈಗೆ ಬಂದ ಹೊಸದರಲ್ಲಿ ನಟ ಅನಿಲ್ ಕಪೂರ್ ಹಾಗೂ ಅವರ ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಕೂಡ ಇರಲಿಲ್ಲ. 'ಇ ಟೈಮ್ಸ್‌'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮುಂಬೈನ ಪೃಥ್ವಿರಾಜ್ ಕಪೂರ್ ಅವರ 'ಗ್ಯಾರೇಜ್‌'ನಲ್ಲಿ ಅನಿಲ್ ಕಪೂರ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ವೃತ್ತಿಜೀವನದ ಆರಂಭದಲ್ಲಿ ಮನೆಯ ಖರ್ಚುಗಳನ್ನು ನಿಭಾಯಿಸಲೆಂದು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅನಿಲ್, 1979 ರಲ್ಲಿ 'ಹಮಾರೆ ತುಮ್ಹಾರೆ' ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು. ಬಳಿಕ, 1980 ರಲ್ಲಿ ತೆಲುಗು ಚಿತ್ರ 'ವಂಶ ವೃಕ್ಷಂ'ನಲ್ಲಿ ಕೆಲಸ ಮಾಡಿದರು.

1983 ರಲ್ಲಿ ಅನಿಲ್ ಕಪೂರ್ ಅವರ 'ವೋ ಸಾತ್ ದಿನ್' ಚಿತ್ರ ಬಿಡುಗಡೆಯಾಯಿತು. ಇದರಲ್ಲಿ ಅವರು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಳಿಕ, ಅನಿಲ್ ಕಪೂರ್ ಹಿಂತಿರುಗಿ ನೋಡಲೇ ಇಲ್ಲ. ಬೇಟಾ, ಮಿಸ್ಟರ್ ಇಂಡಿಯಾ, ಮೇರಿ ಜಂಗ್, ಕರ್ಮ, ತೇಜಾಬ್, ಕಸಂ', ರಾಮ್ ಲಖನ್, ಹಮಾರಾ ದಿಲ್ ಆಪ್ಕೆ ಪಾಸ್ ಹೈ, ಲಾಡ್ಲಾ, ' ಮತ್ತು ನಾಯಕ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ, ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. 

ನಟ ಅನಿಲ್ ಕಪೂರ್ ಸಿನಿಮಾ ಪಟ್ಟಿಯಲ್ಲಿ 'ಸ್ಲಮ್‌ ಡಾಗ್ ಮಿಲಿಯನೇರ್' ಮತ್ತು 'ಮಿಷನ್ ಇಂಪಾಸಿಬಲ್' ಹಾಗೂ 'ಘೋಸ್ಟ್ ಪ್ರೋಟೋಕಾಲ್' ಸಹ ಸೇರಿವೆ. ಈ ಸಿನಿಮಾಗಳ ಮೂಲಕ ಅನಿಲ್ ಕಪೂರ್ ತಮ್ಮ ಹೆಸರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. 

ನಟ ಅನಿಲ್ ಕಪೂರ್ ದುಬೈನಲ್ಲಿ 2 ಬೆಡ್ ರೂಂ ಅಪಾರ್ಟ್ ಮೆಂಟ್ ಹೊಂದಿದ್ದು, ಲಂಡನ್‌ ನಲ್ಲಿಯೂ ಒಂದು ಮನೆಯನ್ನು ಹೊಂದಿದ್ದಾರೆ. ಕ್ಯಾಲಿಪೋರ್ನಿಯಾದಲ್ಲೂ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅನಿಲ್ ಕಪೂರ್ ಅವರು BMW, Bentley,Jaguar, Audi Mercedes Benz S Class ಮುಂತಾದ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಒಟ್ಟಿನಲ್ಲಿ, ಅಂದು ಜೀವನೋಪಾಯಕ್ಕೆ ಗ್ಯಾರೇಜ್ ಆಶ್ರಯಿಸಿದ್ದ ನಟ ಇಂದು ಕೋಟ್ಯಾಧಿಪತಿಯಾಗಿ ಬಾಳುತ್ತಿದ್ದಾರೆ. 

click me!