Vinayakan: 10 ಜನರ ಜೊತೆ ಮಲಗಿರುವೆ ಎಂದ ಖ್ಯಾತ ನಟ ಎಫ್​ಬಿ ಲೈವಲ್ಲಿ ಕೊಟ್ರು ಡಿವೋರ್ಸ್​!

Published : Mar 27, 2023, 01:37 PM ISTUpdated : Mar 27, 2023, 02:45 PM IST
Vinayakan: 10 ಜನರ ಜೊತೆ ಮಲಗಿರುವೆ ಎಂದ ಖ್ಯಾತ ನಟ ಎಫ್​ಬಿ ಲೈವಲ್ಲಿ ಕೊಟ್ರು ಡಿವೋರ್ಸ್​!

ಸಾರಾಂಶ

10 ಜನರ ಜೊತೆ ಮಲಗಿದ್ದೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಮಲಯಾಳ ನಟ ವಿನಾಯಕನ್​ ಅವರು ಫೇಸ್​ಬುಕ್​ ಲೈವ್​ನಲ್ಲಿ ಬಂದು ಡಿವೋರ್ಸ್​ ನೀಡಿದ್ದಾರೆ.  

ಮಾಲಿವುಡ್​ನ  ಜನಪ್ರಿಯ ನಟರಲ್ಲಿ ವಿನಾಯಕನ್ (Vinayakan) ಒಬ್ಬರು. ಮಲಯಾಳ ಚಿತ್ರದ  ಸೂಪರ್ ಸ್ಟಾರ್​ಗಳಾದ ಮಮ್ಮುಟ್ಟಿ, ಮೋಹನ್ ಲಾಲ್​ ಸೇರಿದಂತೆ ಅನೇಕ ಯುವ ನಟರುಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದರಲ್ಲೂ ದುಲ್ಖರ್ ಸಲ್ಮಾನ್ ಜೊತೆಗಿನ 'ಕಮ್ಮಟ್ಟಿಪಾಡಂ' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಒಲಿದಿದೆ.  'ಕಲಿ' ಚಿತ್ರದಲ್ಲಿ ವಿಲನ್ ರೋಲ್​ನಲ್ಲಿ ಅಬ್ಬರಿಸಿದ್ದರು. ತಮಿಳು ಚಿತ್ರರಂಗದಲ್ಲೂ​ ತೊಡಗಿಸಿಕೊಂಡಿರುವ ವಿನಾಯಕನ್ ಚಿಯಾನ್ ವಿಕ್ರಂ ಅಭಿನಯದ 'ಧ್ರುವ ನಚಿತ್ರಂ' ಚಿತ್ರದಲ್ಲಿ ಖಳನಾಗಿ ನಟಿಸಿದ್ದರು. ತಮಿಳಿನಲ್ಲಿ 'ತಿಮಿರು', 'ಸಿರುತೈ', 'ಮರಿಯಾನ್' ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ವಿನಾಯಕನ್​ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.  

ಇಷ್ಟೆಲ್ಲಾ ಸೂಪರ್​ಹಿಟ್​ ಚಿತ್ರಗಳನ್ನು ನೀಡಿರುವ ವಿನಾಯಕನ್​ ಮೀ ಟೂ (Me Too) ಚಳವಳಿ ಜೋರಾಗಿದ್ದ ವೇಳೆ ನಿಜ ಜೀವನದಲ್ಲಿಯೂ ವಿಲನ್​ ಆಗಿಬಿಟ್ಟಿದ್ದರು. 2019ರಲ್ಲಿ ಇವರ ವಿರುದ್ಧ ಕೇಸ್​ಗಳು ದಾಖಲಾಗಿದ್ದವು. ಲೈಂಗಿಕ ಸಂಬಂಧದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದರು. 'ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ' ಎಂದು ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ವಿನಾಯಕನ್​ ಗುರಿಯಾಗಿದ್ದರು.   'ಮೀ ಟೂ ಎಂದರೇನು? ನನಗೆ ಗೊತ್ತಿಲ್ಲ, ಇದು ಹುಡುಗಿಗೆ ಸಂಬಂಧಿಸಿದೆಯೇ, ಹಾಗಿದ್ದಲ್ಲಿ ನಾನು ಮಹಿಳೆಯೊಂದಿಗೆ ಸಂಭೋಗಿಸಲು ಬಯಸಿದರೆ ಏನು? ನನ್ನ ಜೀವನದಲ್ಲಿ, ದೈಹಿಕವಾಗಿ 10 ಹೆಂಗಸರ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ" ಎಂದು ಅವರು ಹೇಳಿದ್ದರು.  ವಿ.ಕೆ ಪ್ರಕಾಶ್ ನಿರ್ದೇಶನದ ಒರುಥಿ ಚಿತ್ರದ ಪ್ರಚಾರದ ವೇಳೆ ಈ ಘಟನೆ ನಡೆದಿತ್ತು. ಅದೇ ವೇಳೆ ಅಲ್ಲೇ ಇದ್ದ ಮಹಿಳಾ ಪತ್ರಕರ್ತೆಯನ್ನು ತೋರಿಸಿ ಅವರೊಂದಿಗೆ ಲೈಂಗಿಕ (Sexual) ಸಂಬಂಧ ಹೊಂದಲು ಬಯಸಿದರೆ ಅವರ ಒಪ್ಪಿಗೆಯನ್ನು ಕೇಳುತ್ತೇನೆ. ಆದರೆ ಒಪ್ಪಿಗೆ ಸೂಚಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟಿದ್ದು' ಎನ್ನುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದರು.

ಮಾಜಿ ಪತ್ನಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ನವಾಜುದ್ದೀನ್ ಸಿದ್ದಿಕಿ!

ಇಷ್ಟೆಲ್ಲಾ ಹೇಳಿರುವ ನಟ ವಿನಾಯಕನ್​ ಅವರ ದಾಂಪತ್ಯ ಜೀವನ ಈಗ ಛಿದ್ರವಾಗಿದೆ. ಅವರು  ತಮ್ಮ ಪತ್ನಿ ಬಬಿತಾ ಅವರಿಂದ ಬೇರ್ಪಟ್ಟಿದ್ದಾರೆ. ಅದೂ ಫೇಸ್‌ಬುಕ್‌ನಲ್ಲಿ ಲೈವ್​ನಲ್ಲಿ ಬಂದು  ಪತ್ನಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಅದರ ವಿಡಿಯೋ  ಹಂಚಿಕೊಂಡಿದ್ದಾರೆ. ಈ ವಿಡಿಯೋದ ಪ್ರಕಾರ, ವಿನಾಯಕನ್ ತನ್ನ ಪತ್ನಿಯೊಂದಿಗಿನ ಎಲ್ಲಾ ವೈವಾಹಿಕ ಮತ್ತು ಕಾನೂನು ಸಂಬಂಧಗಳನ್ನು ಕಡಿದುಕೊಂಡಿದ್ದಾರೆ ಮತ್ತು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ತಾವು 10 ಮಂದಿಯ ಜೊತೆ ಮಲಗಿದ್ದುದ್ದಾಗಿ ಬಹಿರಂಗವಾಗಿ ಹೇಳಿದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು. ಇದಾದ ಬಳಿಕ ದಂಪತಿ ನಡುವೆ ಸಂಬಂಧಚೆನ್ನಾಗಿರಲಿಲ್ಲ ಎನ್ನಲಾಗಿದೆ.  ಮೀಟೂ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಪತ್ನಿಯ ಮನಸ್ಸು ಒಡೆದುಹೋಗಿತ್ತು. ಇದೀಗ ದೊಡ್ಡದಾಗಿ ಬೆಳೆದು ವಿಚ್ಛೇದನದವರೆಗೆ (Divorce) ಬಂದಿದೆ. ಆದರೆ ವಿನಾಯಕನ್​ ಅವರು ಫೇಸ್​ಬುಕ್​ ಲೈವ್​ನಲ್ಲಿ ಬಂದು ಡಿವೋರ್ಸ್​ ಘೋಷಣೆ ಮಾಡಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

Vivian Dsena: ಈ ನಟನ ಮದುವೆನೂ ಸೀಕ್ರೇಟ್​, ಮಗುನೂ ಸೀಕ್ರೇಟ್​, ಅಭಿಮಾನಿಗಳಿಗೆ ಡಬಲ್​ ಶಾಕ್​!
 
ಇನ್ನು ಇವರ ಚಿತ್ರದ ಕುರಿತು ಮಾತನಾಡುವುದಾದರೆ, ವಿನಾಯಕನ್ ಅವರು 1995 ರ ಮಲಯಾಳಂ ಚಲನಚಿತ್ರ ಮಾಂತ್ರಿಕಂ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ.  ವಿನಾಯಕನ್ ನಂತರ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ಪಾದಾರ್ಪಣೆ ಮಾಡಿದರು, ಆದರೆ ಮಲಯಾಳಂ ಹೊರತಾಗಿ ಅವರು ತಮಿಳು ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಸದ್ಯ  ಅವರು ರಜನಿಕಾಂತ್ ಜೊತೆಗೆ ಜೈಲರ್ (Shooting) ಕೊನೆಯ ಹಂತದಲ್ಲಿದೆ. ಅವರು ಮಲಯಾಳಂ ಚಿತ್ರ ಕರಿಂತಂದನ್‌ನ ಭಾಗವಾಗಿದ್ದಾರೆ ಮತ್ತು ಅದರ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದೆ. ವಿನಾಯಕನ್ ಅಭಿನಯದ ಬಹುಕಾಲ ಬಾಕಿ ಉಳಿದಿರುವ ತಮಿಳು ಚಿತ್ರ ಧ್ರುವ ನಚ್ಚತಿರಂ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಅದೇ ಸಮಯದಲ್ಲಿ, ಚಿಯಾನ್ ವಿಕ್ರಮ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರವು ಈ ವರ್ಷದ ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿನಾಯಕನ್ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯನಟನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?