ದಿವಾ ಯೋಗದ ಮಹತ್ವ ತಿಳಿಸಿದ ಮಲೈಕಾ, ನಗ್ನ ಯೋಗ ಬೆಸ್ಟ್ ಅನ್ನೋದಾ ನೆಟ್ಟಿಗರು?

By Suvarna News  |  First Published Mar 27, 2023, 1:12 PM IST

ಯೋಗ ಮತ್ತು ವ್ಯಾಯಾಮಗಳಿಂದ ಫಿಟ್​ನೆಟ್​ ಕಾಯ್ದುಕೊಂಡಿರುವ ನಟಿ ಮಲೈಕಾ ಅರೋರಾ ದಿವಾ ಯೋಗ ಹೇಳಿಕೊಟ್ಟರೆ ನೆಟ್ಟಿಗರು ಹೀಗೆ ಹೇಳೋದಾ? ಅವರು ಹೇಳಿದ್ದೇನು? 
 


ವಯಸ್ಸಾದರೂ  ದೇಹವನ್ನು ಫಿಟ್​ ಆಗಿಟ್ಟುಕೊಂಡು ಯುವತಿಯಂತೆಯೇ ಮಿಂಚುತ್ತಿರುವವರು ಹಲವರಿದ್ದಾರೆ. ಅದರಲ್ಲಿಯೂ ಸಿನಿ ತಾರೆಯರು ಸದಾ ವ್ಯಾಯಾಮ, ಯೋಗ, ಡಯೆಟ್​ (Diet) ಎನ್ನುತ್ತಾ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಂಡರೆ, ನಟಿಯರು ವಯಸ್ಸಾದರೂ ಬಳಕುವ ಬಳ್ಳಿಯಂತೆ ಕಾಣಿಸುತ್ತಾರೆ. ಮದುವೆಯಾಗಿ, ಮಕ್ಕಳಾದ ಮೇಲೂ ದೇಹಕ್ಕೆ ಅಗತ್ಯವಾಗಿ ಬೇಕಾದ ಯೋಗ, ವ್ಯಾಯಾಮ ಮಾಡುತ್ತಾ ಶರೀರವನ್ನು ಫಿಟ್​ ಆಗಿ ಇರಿಸಿಕೊಳ್ಳುವ ನಟಿಯರು ಕೆಲವರಿದ್ದಾರೆ. ಅವರ ಪೈಕಿ ಬಾಲಿವುಡ್​ ನಟಿ ಮಲೈಕಾ ಅರೋರಾ ಒಬ್ಬರು. ವಯಸ್ಸು 49 ಆದರೂ ಇವರು ಯುವತಿಯರಂತೆಯೇ ತಮ್ಮ ದೇಹವನ್ನು ಫಿಟ್​ ಆಗಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಡಯೆಟ್​ ಆಹಾರದ ಜೊತೆ ನಿಯಮಿತ ವ್ಯಾಯಾಮ ಮತ್ತು ಯೋಗ (Yoga). ಈಗ ಅಂಥದ್ದೇ ಒಂದು ಯೋಗದ ಆಸನವನ್ನು ತಮ್ಮ ಇನ್​ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಅವರು ಶೇರ್​ ಮಾಡಿಕೊಂಡಿದ್ದಾರೆ. ಮನಸ್ಸನ್ನು ಉಲ್ಲಾಸಗೊಳಿಸಲು ಹಾಗೂ ಮನಸ್ಸಿನಲ್ಲಿ ಇರುವ ಒತ್ತಡಗಳನ್ನು ಹೊರಕ್ಕೆ ತರಲು ಈ ಆಸನ ತುಂಬಾ ಒಳ್ಳೆಯದು ಎಂದು ಹೇಳಿರುವ ಅವರು, ಅದನ್ನು ಖುದ್ದು ಮಾಡಿ ತೋರಿಸಿದ್ದಾರೆ. ಈ ಹಿಂದೆ ಕೂಡ ಹಲವಾರು ಯೋಗಾಸನದ ಭಂಗಿಯನ್ನು ಮಾಡಿರುವ ಅವರು ಈ ಬಾರಿ ದಿವ ಯೋಗವನ್ನು ಮಾಡಿ ತೋರಿಸಿದ್ದಾರೆ.

ದಿವ ಯೋಗದಲ್ಲಿ (Diva Yoga) ಹಲವಾರು ಬಗೆಯನ್ನು ಅವರು ತೋರಿಸಿದ್ದು ಈ ವಿಡಿಯೋದಲ್ಲಿ ಹಿಪ್​ ಮೊಬಿಲಿಟಿ ವ್ಯಾಯಾಮವನ್ನು (Hip mobility Exercise) ಮಾಡಿ ತೋರಿಸಿದ್ದಾರೆ. ಅಷ್ಟಕ್ಕೂ ದಿವ ಯೋಗವು ಮಹಿಳೆಯರಿಗೆ ಅತ್ಯುತ್ತಮವಾದದ್ದು ಎಂದು ಯೋಗ ಶಾಸ್ತ್ರದಲ್ಲಿ ಹೇಳಲಾಗಿದೆ. ಹೆಣ್ತನದ ಆನಂದ ಮತ್ತು ಆವಿಷ್ಕಾರವನ್ನು ಪ್ರತಿ ಮಹಿಳೆಗೆ ತರುವುದು ದಿವಾ ಯೋಗದ ಧ್ಯೇಯವಾಗಿದೆ. ದಿವಾ ಯೋಗವು ದೈಹಿಕವಾಗಿ ಮಹಿಳೆಯರ ಪರಿವರ್ತನೆಗೆ ಬದ್ಧವಾಗಿರುವ ಒಂದು ರೀತಿಯ ಪ್ರಕ್ರಿಯೆಯಾಗಿದೆ.  ಒಬ್ಬ ಮಹಿಳೆ ಜೀವಿತಾವಧಿಯಲ್ಲಿ ಅನೇಕ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾಳೆ - ತಾಯಿ, ಸಹೋದರಿ, ಮಗಳು, ಸ್ನೇಹಿತ, ಪ್ರೇಮಿ ಇತ್ಯಾದಿ. ಪಾತ್ರಗಳು ವಿಭಿನ್ನವಾಗಿದ್ದರೂ ಅವಳು ಯಾವಾಗಲೂ  ಜೀವವನ್ನು ತರುವ ಶಕ್ತಿಯಿಂದ ಆಶೀರ್ವದಿಸಲ್ಪಟ್ಟ ದೇವತೆ, ಗ್ರಹವನ್ನು ಪೂರ್ಣಗೊಳಿಸುವ ದೇವತೆ, ತನ್ನ ಶಕ್ತಿ ಮತ್ತು ಮೃದುತ್ವ ಎರಡರಿಂದಲೂ ಶಕ್ತಿಯನ್ನು ಸಮತೋಲನಗೊಳಿಸುವ ದೇವತೆ ಎಂದೇ ಬಿಂಬಿತಳಾಗಿದ್ದಾಳೆ. ಇದನ್ನೇ ದಿವಾ ಎಂದು ಹೇಳಲಾಗಿದೆ.

Tap to resize

Latest Videos

Mental Health : ಜೀವನದ ಸುಖವನ್ನೇ ಕಸಿಯುತ್ತೆ ಈ ಮಾನಸಿಕ ಸಮಸ್ಯೆ

 ಅದೇ ರೀತಿ, ಹಿಪ್​ ಮೊಬಿಲಿಟಿ ವ್ಯಾಯಾಮದ ಭಾಗವನ್ನು ಮಲೈಕಾ (Malaika Arora) ತೋರಿಸಿದ್ದಾರೆ. ಇದು ಮಹಿಳೆಯರಿಗೆ ಅದರಲ್ಲಿಯೂ ವಿಶೇಷವಾಗಿ ಗರ್ಭಿಣಿಗೆ  ಪ್ರಯೋಜನಕಾರಿ ಎನ್ನಲಾಗಿದೆ. ಇದು ಮಗುವಿನ ಆರೋಗ್ಯ ಮತ್ತು ಸುಖ ಪ್ರಸವಕ್ಕೆ ಅನುಕೂಲ ಮಾಡಿಕೊಡುತ್ತದೆ. ಅಲ್ಲದೇ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದರ ಜೊತೆ ಬೆನ್ನು ನೋವು ಇರುವವರಿಗೂ ಇದು ಅನುಕೂಲಕರವಾಗಿದೆ. ನಟಿ ಮಲೈಕಾ ಮಾಡಿರುವ ಯೋಗದ ವಿಡಿಯೋದಲ್ಲಿ ತೋರಿಸಿರುವಂತೆ, ಮೊದಲಿಗೆ ಕಾಲು ಚಾಚಿಕೊಂಡು ಕೂರಬೇಕು. ಅಗತ್ಯವಿದ್ದರೆ ಬೆನ್ನಿಗೆ ದಿಂಬಿನ ಸಪೋರ್ಟ್ ತೆಗೆದುಕೊಳ್ಳಬಹುದು. ಬಳಿಕ ಎರಡು ಕೈಗಳನ್ನು ಹಿಂದಕ್ಕೆ ತಂದು ನೆಲದ ಮೇಲೆ ಇಡಬೇಕು. ಬಳಿಕ ಬಲಗಾಲನ್ನು ಕ್ಲಾಕ್ ವೈಸ್ ಮತ್ತು ಆ್ಯಂಟಿ ಕ್ಲಾಕ್ ವೈಸ್ ತಿರುಗಿಸಬೇಕು. ಬಲಗಾಲಿನ ಬಳಿಕ ಎಡಗಾಲನ್ನೂ ಇದೇ ರೀತಿ ತಿರುಗಿಸಬೇಕು. ಆರಂಭದಲ್ಲಿ 10 ಬಾರಿ ಕ್ಲಾಕ್ ವೈಸ್ ಮತ್ತು ಆ್ಯಂಟಿ ಕ್ಲಾಕ್ ವೈಸ್ ಮಾಡಬೇಕು. ಆನಂತರ ನಿಧಾನಕ್ಕೆ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಪೃಷ್ಠದ ಚಲನಶೀಲತೆ ಹೆಚ್ಚಾಗುತ್ತದೆ ಜೊತೆಗೆ ಬೆನ್ನು ನೋವು ಬರುವುದಿಲ್ಲ.

ಮಲೈಕಾ ಅವರು ಮಹಿಳೆಯರ ಹಿತದೃಷ್ಟಿಯಿಂದಲೇ ಈ ಯೋಗದ ವಿಡಿಯೋ ಮಾಡಿ ತೋರಿಸಿದ್ದಾರೆ. ಆದರೆ ಸದಾ ಟ್ರೋಲ್​ಗೆ  ಒಳಗಾಗುತ್ತಿರುವ ನಟಿ ಯೋಗ ಮಾಡಿದರೆ ನೆಟ್ಟಿಗರು ಬಿಟ್ಟಾರೆಯೇ? ಇದರಲ್ಲಿಯೂ ನಟಿಯ ಕಾಲೆಳೆದಿದ್ದಾರೆ. ಮೊದಲ ಪತಿಗೆ ಡಿವೋರ್ಸ್​ (Divorce) ಕೊಟ್ಟು, ತಮಗಿಂತ 12 ವರ್ಷ ಚಿಕ್ಕವರಾಗಿರುವ ನಟ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಡೇಟಿಂಗ್​ನಲ್ಲಿ ಮಲೈಕಾ ಅವರನ್ನು ಕಾಲೆಳೆದಿರುವ ನೆಟ್ಟಿಗರು, 'ಛೇ ಛೇ ನಟ ಅರ್ಜುನ್​ ಕಪೂರ್​ಗಾಗಿ (Arjun Kapoor) ಇಷ್ಟೆಲ್ಲಾ ಕಷ್ಟಪಡುತ್ತಿದ್ದೀರಾ' ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಇವೆಲ್ಲಾ ಪೋಸ್​ಗಳು ನಿನ್ನ ಬಾಯ್​ ಫ್ರೆಂಡ್​ಗಾ ಎಂದು ಛೇಡಿಸಿದ್ದಾರೆ.  ಇನ್ನು ಕೆಲವು ಬಳಕೆದಾರರು ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ಈ ದಿವಾ ಯೋಗ ಇಷ್ಟೆಲ್ಲಾ ಕಷ್ಟಪಟ್ಟು ಮಾಡುವ ಬದಲು ನಗ್ನ ಯೋಗ ಬೆಸ್ಟ್ ಅನ್ನೋದಾ? ಒಟ್ಟಿನಲ್ಲಿ ನಟಿ ಯೋಗ ಮಾಡಿದರೂ ಕಷ್ಟ ಎನ್ನುವ ಹಾಗಾಗಿದೆ. 

Summer Heat: ಬಿಸಿಲಲ್ಲಿ ಹೆಚ್ಚು ಹೊತ್ತು ಮೊಬೈಲ್ ಬಳಸೋದು ಡೇಂಜರ್

 

 
 
 
 
 
 
 
 
 
 
 
 
 
 
 

A post shared by DIVA YOGA (@thedivayoga)

click me!