ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತೆ ಎಂದು ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿದ ನಟ ಸೋನು ಸೂದ್

By Shruiti G Krishna  |  First Published May 11, 2022, 12:03 PM IST

ದಿ ಮ್ಯಾನ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ನಟ ಸೋನು ಸೂದ್ ಆದಾಯದ ಮೂಲದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಜನರಿಗೆ ಯಾವ ರೀತಿ ಸಹಾಯ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜಾಹೀರಾತಿನಿಂದ ಗಳಿಸಿದ ಎಲ್ಲಾ ಹಣವನ್ನು ಸಹಾಯ ಮಾಡಲು ಬಳಸಿದ್ದೇನೆ ಎಂದು ಸೋನು ಬಹಿರಂಗ ಪಡಿಸಿದರು.


ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್(Sonu Sood) ತಮ್ಮ ಸಾಮಾಜಿಕ ಕೆಲಸಗಳನ್ನು ಈಗಲೂ ಮುಂದುವರೆಸಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿಯಿಂದ ಹೊರಬಂದ ಮೇಲು ಸೂನು ಸೂದ್ ತಮ್ಮ ಸಮಾಜಮುಖಿ ಕೆಲಸವನ್ನು ನಿಲ್ಲಿಸಿಲ್ಲ. ಕಷ್ಟ ಎಂದವರ ಪಾಲಿಗೆ ನೆರವಾಗುತ್ತಿರುವ ಸೋನು ಸೂದ್ ಸಾಕಷ್ಟು ಜನರ ಪಾಲಿಗೆ ದೇವರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸೋನು ಸೂದ್ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಜನರ ಕಷ್ಟಕಗಳಿಗೆ ಸ್ಪಂದಿಸುತ್ತಿರುತ್ತಾರೆ. ಸೋನು ಸೂದ್ ಅವರಿಗೆ ಈಗಲೂ ಅನೇಕ ಮಂದಿ ಸಹಾಯಕೇಳಿ ಫೋನ್ ಮಾಡುತ್ತಿರುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಇಷ್ಟೆಲ್ಲ ಸಹಾಯ ಮಾಡುತ್ತಿರುವ ನಟ ಸೋನ್ ಸೂದ್ ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಇದೆ. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ನಟ ಸೂದ್ ಸಂಪೂರ್ಣ ವಿವರ ನೀಡಿದ್ದಾರೆ.

ದಿ ಮ್ಯಾನ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ನಟ ಸೋನು ಸೂದ್ ಆದಾಯದ ಮೂಲದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಜನರಿಗೆ ಯಾವ ರೀತಿ ಸಹಾಯ ಮಾಡುತ್ತಿರುವುದಾಗಿ ಹೇಳಿದ್ದಾರೆ. 'ಜಾಹೀರಾತಿನಿಂದ ಗಳಿಸಿದ ಎಲ್ಲಾ ಹಣವನ್ನು ಸಹಾಯ ಮಾಡಲು ಬಳಸಿದ್ದೇನೆ. ಕೆಲವೊಮ್ಮೆ ಅದನ್ನು ನೇರವಾಗಿ ಶಾಲೆ ಅಥವಾ ಆಸ್ಪತ್ರೆಗೆ ನೀಡುವಂತೆ ಹೇಳುತ್ತೇನೆ. ಇನ್ನು ಕೆಲವೊಮ್ಮೆ ಅದನ್ನು ನಮ್ಮ ಚಾರಿಟಿ ಮೂಲಕ ಕಳುಹಿಸುತ್ತಾರೆ. ನಾವು ಎಲ್ಲದಕ್ಕೂ ಮುಕ್ತವಾಗಿದ್ದೇೆವೆ' ಎಂದು ಹೇಳಿದರು.

Tap to resize

Latest Videos

ಸಹಾಯ ಮಾಡಲು ಬ್ರಾಂಡ್ ಗಳನ್ನು ಹೇಗೆ ಮನವರಿಕೆ ಮಾಡುತ್ತಾರೆ ಎಂದು ವಿವರಿಸಿದ ಸೂದ್, 'ನಾನು ನಿಮಗೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ದುಬೈ ಪ್ರವಾಸಕ್ಕೆ ಹೋಗಿದ್ದಾಗ ಆಸ್ಟರ್ ಆಸ್ಪತ್ರೆಯ ವಿಲ್ಸನ್ ಎನ್ನುವವರ ಪರಿಚಯವಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಕಾರ್ಯಕ್ಕೆ ನಾನು ಜೊತೆಯಾಗಬೇಕು ಎಂದು ಹೇಳಿದರು. ಆಗ ನಾನು ಸರಿ ನಿಮ್ಮ ಆಸ್ಪತ್ರೆಗೆ ರಾಯಭಾರಿಯಾಗುತ್ತೇನೆ, ಅದಕ್ಕೆ ಪ್ರತಿರೂಪವಾಗಿ 50 ಲಿವರ್ ಟ್ರಾನ್ಸ್ ಪ್ಲಾಂಟ್ ಗಳನ್ನು ನೀಡಿ ಎಂದೆ. ಅದರ ಒಟ್ಟಾರೆ ಮೊತ್ತ ಸುಮಾರು 12 ಕೋಟಿ ರೂಪಾಯಿ ಆಗಬಹುದು' ಎಂದರು.

'ಬೇಸಿಗೆಗೆ ಚಿಲ್ಡ್ ಬಿಯರ್ ದಾನ ಮಾಡಿ' ಎಂದ ಅಭಿಮಾನಿಗೆ ಸೋನು ಸೂದ್ ಕೊಟ್ಟ Reply ಹೀಗಿತ್ತು..

ಜಾಹೀರಾತಿಗೆ ಪಡೆಯುವ ಸಂಭಾವನೆ ಬದಲಿಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಗಳನ್ನು ಪ್ರತಿಯಾಗಿ ಪಡೆಯುವ ಬಗ್ಗೆ ಸೋನು ಮತ್ತಷ್ಟು ಮಾಹಿತಿ ನೀಡಿದ್ದಾರೆ. 'ಯಾರಿಗೆ ಈ ಚಿಕಿತ್ಸೆ ಪಡೆಯಲು ಸಾಧ್ಯವೇ ಆಗದ ವ್ಯಕ್ತಿಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆಮಾಡಲಾಗುತ್ತದೆ ಎಂದರು. ಇದು ಸರಿಯಾದ ಚುಕ್ಕೆ ಜೋಡಿಸುವ ಕ್ರಮ ಅಷ್ಟೆ. ಜನರ ನಮ್ಮ ಬಳಿಕೆ ಬಂದು ಹೇಗೆ ಸಹಾಯಮಾಡಬೇಕು ಎಂದು ಕೇಳುತ್ತಾರೆ. ಅದಕ್ಕೆ ಒಂದು ಮಾರ್ಗ ಹುಡುಕಬೇಕು' ಎಂದು ಸೋನು ಸೂದ್ ಹೇಳಿದ್ದಾರೆ. ಸೋನು ಸೂದ್ ಸಮಾಜಮುಖಿ ಕೆಲಸಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಹಣ ಎಸೆದು ಸಂಭ್ರಮಿಸಿದ ಫ್ಯಾನ್ಸ; ಈ ಪ್ರೀತಿಗೆ ಅರ್ಹನಲ್ಲ ಎಂದ ಸೋನು ಸೂದ್

ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೇ ಸೋನು ಸೂದ್ ಸದ್ಯ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಕೊನೆಯದಾಗಿ ಸೋನು ಸೂದ್ ತೆಲುಗಿನ ಆಚಾರ್ಯ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸೋನು ಸೂದ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

click me!