ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ.ಪಿ ಶಂಕರ್ ಪತ್ನಿ ಮಂಜುಳಾ ನಿಧನ

By Shruiti G KrishnaFirst Published May 11, 2022, 11:11 AM IST
Highlights

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ಎಂ.ಪಿ. ಶಂಕರ್(MP Shankar) ಪತ್ನಿ ಮಂಜುಳಾ ಶಂಕರ್(Manjula Shankar) ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಜುಳಾ ಶಂಕರ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ಎಂ.ಪಿ. ಶಂಕರ್(MP Shankar) ಪತ್ನಿ ಮಂಜುಳಾ ಶಂಕರ್(Manjula Shankar) ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಜುಳಾ ಶಂಕರ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಮಂಜುಳಾ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಆಗ ಅವರಿಗೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ನಂತರ ಬೈಪಾಸ್ ಸರ್ಜರಿಯನ್ನೂ ಮಾಡಲಾಗಿತ್ತು ಎಂದು ಕುಟುಂಬ ಮೂಲಗಳು ಮಾಹಿತಿ ತಿಳಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುಳ ಮಂಗಳವಾರ (ಮೇ 10) ಕೊನೆಯುಸಿರೆಳೆದಿದ್ದಾರೆ.

75 ವರ್ಷದ ವರ್ಷದ ಮಂಜುಳಾ ಶಂಕರ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಮಂಜುಳಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ವಿದ್ಯಾರಣ್ಯಪುರ ಬಡಾವಣೆಯ ವೀರಶೈವ ರುದ್ರಭೂಮಿಯಲ್ಲಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Latest Videos

ಖ್ಯಾತ ನಟ ಎಂಪಿ ಶಂಕರ್ ಬಗ್ಗೆ ಹೇಳುವುದಾದರೆ ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರು. ಕನ್ನಡದ ಅನೇಕ ಪಾತ್ರಗಳಲ್ಲಿ ಎಂ ಪಿ ಶಂಕರ್ ನಟಿಸಿದ್ದಾರೆ. ಅತ್ಯುತ್ತಮ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಎಂ ಪಿ ಶಂಕರ್ ಕನ್ನಡ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಅವರ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಸತ್ಯ ಹರಿಶ್ಚಂದ್ರ ಸಿನಿಮಾದ ಪಾತ್ರ ಕೂಡ ಒಂದು. ಈ ಸಿನಿಮಾದ ಪಾತ್ರ ಶಂಕರ್ ಅವರಿಗೆ ಸ್ಟಾರ್ ಇಮೇಜ್ ತಂದುಕೊಟ್ಟಿತ್ತು. ಭೂತಯ್ಯನ ಮಗ ಅಯ್ಯು ಚಿತ್ರದ ಅಯ್ಯು ಪಾತ್ರ, ನಾಗರಹಾವು ಚಿತ್ರದ ಪೈಲ್ವಾನ್ ಪಾತ್ರದಿಂದ ಎಂಪಿ ಶಂಕರ್ ಸಿನಿಪ್ರಿಯರ ಮನಗೆದ್ದಿದ್ದರು. ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ ಮುಂತಾದ ಕೆಲವು ಪ್ರಮುಖ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.

RIP Shivkumar Sharma ಖ್ಯಾತ ಸಂತೂರ್‌ ವಾದಕ ಪಂ. ಶಿವಕುಮಾರ್‌ ಶರ್ಮಾ ನಿಧನ

ಡಾ. ರಾಜ್‌ಕುಮಾರ್, ನರಸಿಂಹರಾಜು, ಡಾ. ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಎಂ ಪಿ ಶಂಕರ್ ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಕಾಡಿನ ರಹಸ್ಯ ಸಿನಿಮಾ ಮೂಲಕ ಎಂ ಪಿ ಶಂಕರ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ಗಂಧದ ಗುಡಿ, ಕಾಡಿನ ರಾಜ, ಮೃಗಾಲಯ ಸಿನಿಮಾಗಳು ಸೇರಿದಂತೆ ಇನ್ನು ಅನೇಕ ಸಿನಿಮಾಗಳ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದರು.

Junior Ravichandran ವಿದ್ಯುತ್ ತಗುಲಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು!

ಎಂ ಪಿ ಶಂಕರ್ ಕೊನೆಯದಾಗಿ ಅನಾಥರು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 2007ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾ ಬಳಿಕಮತ್ತೆ ಬಣ್ಣ ಹಚ್ಚಿಲ್ಲ. 2008ರಲ್ಲಿ ಖ್ಯಾತ ನಟ ಎಂ ಪಿ ಶಂಕರ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು, ಕುಟುಂಬದವರನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದರು. ಅನಾರೋಗ್ಯದಿಂದ ಬಳಲುತ್ತಿದ್ದ ಎಂ ಪಿ ಶಂಕರ್ 2008ರಲ್ಲಿ ನಿಧನಹೊಂದಿರು. ಎಂ ಪಿ ಶಂಕರ್ ನಿಧನದ ಬಳಿಕ ಪತ್ನಿ ಮಂಜುಳ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಪತಿಯನ್ನು ಕಳೆದು ಅದೇ ನೋವಿನಲ್ಲಿ ಬದುಕುತ್ತಿದ್ದ ಮಂಜುಳ ಮೇ 10ರಂದು ಕೊನೆಯುಸಿರೆಳೆದರು. ಮಗ ತಿಲಕ್ ಮತ್ತು ಮಗಳು ಶೋಭಾ ಅವರನ್ನು ಅಗಲಿದ್ದಾರೆ.

click me!