
ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ 'ಭಾರತೀಯ ಹೆಣ್ಮಕ್ಕಳು ಸೋಮಾರಿಗಳು' ಎಂದು ಹೇಳಿ ಯುವತಿಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹೇಳಿಕೆ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಸೋನಾಲಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ತನ್ನ ಹೇಳಿಕೆ ದೊಡ್ಡ ಮಟ್ಟದ ವಿವಾದ ಸೃಷ್ಟಿಸುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ದಿಲ್ ಚಾಹ್ತಾ ಹೈ ನಟಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ಹುಡುಗಿಯರು ತಮ್ಮ ವೃತ್ತಿಜೀವನದ ಬಗ್ಗೆ ಉತ್ಸುಕರಾಗುವ ಬದಲು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಉತ್ತಮ ಬಾಯ್‌ಫ್ರೆಂಡ್ ಅಥವಾ ಗಂಡನನ್ನು ಹುಡುಕುತ್ತಾರೆ' ಎಂದು ಹೇಳಿದರು. ಈ ಹೇಳಿಕೆ ವಿರುದ್ಧ ಅನೇಕರು ಕಿಡಿ ಕಾರಿದ್ದರು. ನಟಿ, ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಕೂಡ ಆಕ್ರೋಶ ವ್ಯಕ್ತಪಡಸಿದ್ದರು.
ವಿವಾದ ದೊಡ್ಡದಾಗುತ್ತಿದ್ದಂತೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. 'ನನ್ನ ಹೇಳಿಕೆಯಿಂದ ಅನೇಕ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದ್ದೀನಿ. ನಾನೊಬ್ಬ ಮಹಿಳೆಯಾಗಿ, ನನ್ನ ಉದ್ದೇಶ ಇತರರನ್ನು ನೋಯಿಸುವುದು ಅಲ್ಲ. ಪ್ರಶಂಸಿಸಲು ಅಥವಾ ಟೀಕಿಸಲು ವೈಯಕ್ತಿಕವಾಗಿ ನನ್ನನ್ನು ತಲುಪಿದ್ದಕ್ಕೆ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ನಾವು ಆಲೋಚನೆಗಳ ಮುಕ್ತ ವಿನಿಮಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
Sonali Kulkarni: ಈಗಿನ ಹೆಣ್ಣು ಮಕ್ಕಳು ಸೋಮಾರಿಗಳೆಂದ ನಟಿ ವಿರುದ್ಧ ನೆಟ್ಟಿಗರ ಆಕ್ರೋಶ
'ನಾನು ಮಹಿಳೆಯರಿಗೆ ಮಾತ್ರವಲ್ಲದೇ ಇಡೀ ಮನುಕುಲದ ಬಗ್ಗೆ ಆಲೋಚಿಸುವುದು ಮತ್ತು ಬೆಂಬಲ ನೀಡಲು ಪ್ರಯತ್ನಿಸುತ್ತೇನೆ. ನಾನು ಯಾರಿಗಾದರೂ ನೋವನ್ನು ಉಂಟುಮಾಡಿದರೆ ನನ್ನ ಹೃದಯದಿಂದ ನಾನು ಕ್ಷಮೆ ಕೇಳುತ್ತಿದ್ದೀನಿ. ನಾನು ಆಶಾವಾದಿ ಜೀವನ ತುಂಬಾ ಸುಂದರವಾಗಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಈ ಘಟನೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.
ಆಕೆಯ ಫ್ಯಾಷನ್‌ಗೆ ನಾನು ಫ್ಯಾನ್ ಅಲ್ಲ, ಅದು ಕೆಟ್ಟ ಅಭಿರುಚಿ; ಉರ್ಫಿ ವಿಚಿತ್ರ ಡ್ರೆಸ್‌ಗೆ ರಣಬೀರ್ ರಿಯಾಕ್ಷನ್
ಸೋನಾಲಿ ಕುಲಕರ್ಣಿ ಹೇಳಿದ್ದೇನು?
'ಭಾರತದಲ್ಲಿ ಬಹಳಷ್ಟು ಮಹಿಳೆಯರು ಸೋಮಾರಿಗಳು. ಅವರಿಗೆ ತಮ್ಮ ಬಾಯ್‌ಫ್ರೆಂಡ್ ಅಥವಾ ಪತಿಯಾಗುವ ಎಷ್ಟು ಚೆನ್ನಾಗಿ ಸಂಪಾದಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಅವರಿಗೆ ಸ್ವಂತ ಮನೆ ಇರಬೇಕು, ಕಾಲಕಾಲಕ್ಕೆ ಇನ್ಕ್ರಿಮೆಂಟ್ ಆಗುತ್ತಿರಬೇಕು. ಇದನ್ನೇ ಬಯಸುವ ಇಂದಿನ ಯುವತಿಯರು, ತಮ್ಮ ನಿಲುವನ್ನು ತಾವೇ ಮರೆತುಬಿಡುತ್ತಾರೆ. ಅವರು ಏನು ಮಾಡುತ್ತಾರೆಂದು ಇವರಿಗೆ ತಿಳಿದಿಲ್ಲ. ತಮಗೂ ಸಂಪಾದಿಸುವ ಸಾಮರ್ಥ್ಯ ಇದೆ ಎಂಬುದನ್ನು ಮೊದಲು ಹೆಣ್ಣುಮಕ್ಕಳು ಮನಗಾಣಬೇಕು. ಮನೆಯ ಖರ್ಚುವೆಚ್ಚಗಳನ್ನು ಇಬ್ಬರೂ ಸೇರಿ ಶೇರ್ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು. ಮನೆಗೆ ಹೊಸ ಫ್ರಿಡ್ಜ್ ಅಥವಾ ಇನ್ನಾವುದೇ ವಸ್ತುಗಳು ಬೇಕು ಎಂದರೆ ಇಬ್ಬರೂ ಸಮಪಾಲು ಹಾಕಿಕೊಂಡು ತರಬೇಕು, ಅದನ್ನು ಬಿಟ್ಟು ಎಲ್ಲವನ್ನೂ ಗಂಡನೇ ಮಾಡಬೇಕು ಎಂದರೆ ಹೇಗೆ' ಎಂದು ಹೇಳಿದ್ದರು. ಸೊನಾಲಿ ಹೇಳಿಕೆ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಆದರೆ ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.