
ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಭರ್ಜರಿ ಮದುವೆ ನಡೆದಿದೆ. ಏಳು ವರ್ಷಗಳ ಡೇಟಿಂಗ್ ಬಳಿಕ ಈಗ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ. 37 ವರ್ಷದ ಸೋನಾಕ್ಷಿ 35 ವರ್ಷದ ಜಹೀರ್ ಅವರ ಮದುಮಗಳಾಗಿದ್ದಾರೆ. ಮದುವೆ ಇನ್ನೂ ಮದುವೆ ಶಾಸ್ತ್ರಗಳು ನಡೆಯುತ್ತಲೇ ಇವೆ. ಇದು ಹಿಂದೂ-ಮುಸ್ಲಿಂ ಆಗಿರುವ ಕಾರಣ ಮೊದಲಿನಿಂದಲೂ ಸಾಕಷ್ಟು ವಿವಾದ ಸೃಷ್ಟಿಸುತ್ತಲೇ ಇದೆ. ಆದರೆ ಏಳು ವರ್ಷ ಪರಸ್ಪರ ಅರ್ಥ ಮಾಡಿಕೊಂಡಿರುವ ಜೋಡಿ ಈಗ ಅತ್ಯಂತ ಖುಷಿಯಿಂದಲೇ ಮದುವೆಯಾಗಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಅದರಲ್ಲಿ ಒಂದು ವಿಡಿಯೋದಲ್ಲಿ ಇಬ್ಬರೂ ಸಕತ್ ಡ್ಯಾನ್ಸ್ ಮಾಡಿದ್ದಾರೆ. ಆದರೆ ಅದರಲ್ಲಿ ಜಹೀರ್ ಅವರು ಫುಲ್ ಟೈಟ್ ಆಗಿ ತೇಲಾಡುವಂತೆ ಕಾಣಿಸುತ್ತಿದೆ. ಇದನ್ನು ನೋಡುತ್ತಲೇ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ.
ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಮದುವೆಯಾಗುವುದನ್ನು ಸಹಿಸದ ಹಲವರು, ನೋಡು ನಿನ್ನ ಕಥೆ ಅಷ್ಟೇ. ಮದ್ವೆ ದಿನವೇ ಇಷ್ಟೆಲ್ಲಾ ಕುಡಿದಿದ್ದಾನೆ. ನೀನು ಹೀಗೆ ಬಿಟ್ಟರೆ ಕಥೆ ಅಷ್ಟೇ. ಇನ್ನೂ ಕಾಲ ಮಿಂಚಿಲ್ಲ, ಯೋಚ್ನೆ ಮಾಡು... ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಈ ವಿಡಿಯೋದಲ್ಲಿ ಜಹೀರ್ ಓಲಾಡುತ್ತಲೇ ನರ್ತಿಸುವುದನ್ನು ನೋಡಬಹುದು. ಅದನ್ನು ನೋಡಿದ ನೆಟ್ಟಿಗರು ತನ್ನದೇ ಮದ್ವೆಯ ದಿನ ಈ ರೀತಿಯಾ ಅಬ್ಬಾ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಮದುವೆಯ ಬಗ್ಗೆ ಮಾತುಗಳು ನಿಲ್ಲುತ್ತಿಲ್ಲ. ಇವರಿಬ್ಬರೂ ವಿವಾಹ ಆಗುತ್ತಾರೆ ಎನ್ನುವ ಸುದ್ದಿ ಸಿಗುತ್ತಲೇ ಮದುವೆಯಾದ ಮೇಲೆ ಸೋನಾಕ್ಷಿ ಮತಾಂತರ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಗೆ ಜಹೀರ್ ತಂದೆ ಇಕ್ಬಾಲ್ ರತನ್ಸಿ, ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು.
ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್ ಇಕ್ಬಾಲ್ ತಂದೆ ಮಾತೀಗ ವೈರಲ್!
ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು. ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ ಹೃದಯಗಳು ಒಂದಾಗಿವೆ. ಇದರ ನಡುವೆ ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಸುದ್ದಿ ಹೊರ ಬಂದಾಗಿನಿಂದ ಹಿಂದೂ ನಟಿಯರು ಮುಸ್ಲಿಂ ನಟರನ್ನು ಮದುವೆ ಆಗೋದೇಕೆ? ಇದು ಲವ್ ಜಿಹಾದ್ ಅಲ್ಲವೇ? ರಾಮಾಯಣ ಹೆಸರಿನ ಮನೆಗೆ ಮುಸ್ಲಿಂ ಅಳಿಯ ಎಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ನಟಿ, ಇದು ನನ್ನ ವೈಯಕ್ತಿಕ ವಿಷಯ ಮತ್ತು ನನ್ನದೇ ಆಯ್ಕೆ. ಈ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಬೇಕಿಲ್ಲ. ನನ್ನ ಪೋಷಕರಿಗಿಂತ ಜನರು ಯಾಕೆ ಇಷ್ಟು ಕುತೂಹಲ ಹೊಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಪೋಷಕರಿಗಿಂತ ಬೇರೆಯವರೇ ಹೆಚ್ಚು ಕೇಳುತ್ತಾರೆ. ಹಾಗಾಗಿ ಇದು ನನಗೆ ತುಂಬಾ ತಮಾಷೆಯಾಗಿ ಕಾಣುತ್ತದೆ ಎಂದಿದ್ದಾರೆ. ಇದೀಗ ಮತಾಂತರದ ವದಂತಿಗೆ ಭಾವಿ ಮಾವ ತೆರೆ ಎಳೆದಿದ್ದಾರೆ. ಆದರೆ ಟ್ರೋಲಿಗರೂ ಇಲ್ಲೂ ಬಿಡುತ್ತಿಲ್ಲ. ಮತಾಂತರ ಮಾಡಲ್ಲ ಸರಿ, ಫ್ರಿಜ್‌ನಲ್ಲಿ ಮಾತ್ರ ಇಡಬೇಡಿ ಎನ್ನುತ್ತಿದ್ದಾರೆ.
ಸ್ಟಾರ್ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಇದು ಹಕ್ಕಿ ತಿನ್ನುವ ಆಹಾರ ಇದಂತೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.