ಸೋನಾಕ್ಷಿ ಸಿನ್ಹಾ ಮದುವೆ ಸಮಾರಂಭ ಅದ್ಧೂರಿಯಾಗಿಯೇ ನಡೆದಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮದುವೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮನೀಶಾ ಕೊಯಿರಾಲಾ ನೀಡಿದ ಗಿಫ್ಟ್ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ವಿವಾಹ ಬಂಧನದಲ್ಲಿ (Sonakshi Sinha and Jaheer Iqbal Wedding) ಬಂಧಿಯಾಗಿದ್ದಾರೆ. ಅವರ ಮದುವೆ ಸಾಕಷ್ಟು ಸುದ್ದಿಯಲ್ಲಿದೆ. ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿಕೊಂಡ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ನಂತರ ಅದ್ಧೂರಿ ಆರತಕ್ಷತೆ ಪಾರ್ಟಿಯನ್ನು ಆಯೋಜಿಸಿದ್ದರು. ಸೋನಾಕ್ಷಿ- ಜಹೀರ್ ವಿವಾಹ ಸಮಾರಂಭಕ್ಕೆ ಬಾಲಿವುಡ್ ತಾರೆಯರ ದಂಡೇ ಹರಿದು ಬಂದಿತ್ತು. ಬಣ್ಣದ ಉಡುಗೆ ತೊಟ್ಟ ಅನೇಕ ಕಲಾವಿದರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆದ್ರೆ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಮನೀಶಾ ಕೊಯಿರಾಲಾ ಕಾಣಿಸಿಕೊಳ್ಳಲಿಲ್ಲ. ಅವರು ಪಾರ್ಟಿಗೆ ಬರದೆ ಹೋದ್ರೂ ಅವರ ಗಿಫ್ಟ್ ಮತ್ತು ಆಶೀರ್ವಾದ ಮಾತ್ರ ಸೋನಾಕ್ಷಿಗೆ ತಲುಪಿದೆ.
ಮನೀಶಾ ಕೊಯಿರಾಲಾ (Manisha Koirala), ಗೋಲ್ಡನ್ ಕಲರ್ ಪೇಪರ್ ನಲ್ಲಿ ಸುತ್ತಿದ್ದ ಗಿಫ್ಟ್ (Gift) ಹಾಗೂ ಹೂವಿನ ಬೊಕ್ಕೆಯನ್ನು ನೀಡಿದ್ದಾರೆ. ಗಿಫ್ಟ್ ಪ್ಯಾಕ್ ನಲ್ಲಿ ಏನಿತ್ತು ಎಂಬುದನ್ನು ಹೇಳೋದು ಕಷ್ಟ. ಆದ್ರೆ ಅವರು ನೀಡಿದ್ದ ಸುಂದರ ಹೂ ಕ್ಯಾಮರಾ ಕಣ್ಣನ್ನು ಸೆಳೆದಿದೆ. ಮನಿಶಾ ಕೊಯಿರಾಲ ನೀಡಿದ ಹೂವು ಸಾಕಷ್ಟು ವಿಶೇಷತೆಯನ್ನು ಹೊಂದಿದೆ.
ನಂಗೆ 86 ವರ್ಷಕ್ಕೆ ಕಂಟಕವಿದೆ, ಒಮ್ಮೆ ಹೋದರೆ ದುಃಖಿಸಬೇಡ, ಮತ್ತೆ ಬರುವೆ ಅಂದಿದ್ರು; ನಟ ಜಗ್ಗೇಶ್
ಸಾಮಾನ್ಯವಾಗಿ ಮದುವೆ, ಹುಟ್ಟುಹಬ್ಬದ ಸಮಾರಂಭದಲ್ಲಿ ಫ್ಲವರ್ (Flower) ಬೊಕ್ಕೆಯನ್ನು ಉಡುಗೊರೆಯಾಗಿ ನೀಡ್ತಾರೆ. ಅದನ್ನು ಕೊಡೋರು ಹಾಗೆ ಸ್ವೀಕರಿಸೋರು ಇಬ್ಬರೂ ಅದ್ರಲ್ಲಿರುವ ಹೂ ಹಾಗೂ ಅದ್ರ ಮಹತ್ವದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಸಮಾರಂಭಕ್ಕೆ ಹೋಗುವ ಅತಿಥಿಗಳು, ಹೂ ನೀಡಿ ಶುಭವಾಗಲಿ ಎಂದು ಹರಸಿ ಬರ್ತಾರೆ. ಅದನ್ನು ನಗ್ತಾ ಸ್ವೀಕರಿಸುವ ಜನರು ಅದನ್ನು ಬದಿಗಿಡ್ತಾರೆ. ನೀವೂ ಹೂಗುಚ್ಛವನ್ನು ಉಡುಗೊರೆಯಾಗಿ ನೀಡೋರಾಗಿದ್ದರೆ ಈಗ ನಾವು ಹೇಳ್ತಿರೋದನ್ನು ಸರಿಯಾಗಿ ತಿಳಿದುಕೊಳ್ಳಿ. ಪ್ರತಿಯೊಂದು ಹೂ ತನ್ನದೇ ಮಹತ್ವ ಹೊಂದಿದೆ. ಹಾಗಾಗಿ ಹೂ ನೀಡುವ ಮುನ್ನ, ನೀವು ಯಾವ ಹೂ ಹಾಗೆ ಅದ್ರ ಬಣ್ಣ ಯಾವುದು ಎಂಬುದನ್ನು ಗಮನಿಸಿದ ಉಡುಗೊರೆ ನೀಡಿ.
ಮನೀಶಾ ಕೊಯಿರಾಲಾ ನೀಡಿದ ಹೂ ಯಾವುದು? : ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ಗೆ ಮನೀಶಾ ಕೊಯಿರಾಲಾ ಕಳುಹಿಸಿದ ಹೂವುಗಳು ಏಷ್ಯಾಟಿಕ್ ಲಿಲ್ಲಿಗಳು. ಲಿಲಿ ಎಂಬ ಪದವು ಲೀರಿಯನ್ ಎಂಬ ಗ್ರೀಕ್ ಪದದಿಂದ ಬಂದಿದೆ. ಅದರ 100 ಕ್ಕೂ ಹೆಚ್ಚು ಪ್ರಭೇದಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಉಡುಗೊರೆ ನೀಡಲು ಈ ಹೂವು ಬೆಸ್ಟ್ ಎನ್ನಲಾಗುತ್ತದೆ. ಹೊಸದಾಗಿ ಮದುವೆಯಾದ ನಟಿಗೆ ಮನೀಶಾ ಕೊಯಿರಾಲಾ ಗುಲಾಬಿ ಲಿಲ್ಲಿಗಳ ಸುಂದರವಾದ ಪುಷ್ಪಗುಚ್ಛವನ್ನು ಕಳುಹಿಸಿದ್ದಾರೆ. ಮೃದುವಾದ ಪ್ರೀತಿ, ಸ್ತ್ರೀತ್ವ ಮತ್ತು ಮಾಧುರ್ಯದ ಸಂಕೇತವೆಂದು ಇದನ್ನು ಪರಿಗಣಿಸಲಾಗುತ್ತದೆ. ಇದು ಭಾವೋದ್ರೇಕದ ಪ್ರೀತಿ ಬದಲು ಇಬ್ಬರು ಸ್ನೇಹಿತರ ನಡುವಿನ ಬಂಧ ಮತ್ತು ಶುದ್ಧ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಇದ್ರ ಜೊತೆ ಪಾಲಕರು ಹಾಗೂ ಮಕ್ಕಳ ನಡುವಿನ ಪ್ರೀತಿಯನ್ನೂ ಇದು ಸೂಚಿಸುತ್ತದೆ.
'ಕಾಟೇರ' ನಿರ್ದೇಶಕನಿಗೆ ಕೂಡಿ ಬಂದ ಕಂಕಣ ಭಾಗ್ಯ..? ಬನಾರಸ್ ಬೆಡಗಿ ಜೊತೆ ತರುಣ್ ಸುಧೀರ್ ವಿವಾಹ..?
ಈ ಬಣ್ಣದ ಲಿಲಿಯನ್ನು ನೀಡ್ಬೇಡಿ ? : ಲಿಲಿ ಹೂಗಳನ್ನು ಉಡುಗೊರೆಯಾಗಿ ನೀಡ್ಬೇಕು ನಿಜ. ಆದ್ರೆ ಎಲ್ಲ ಬಣ್ಣದ ಲಿಲಿ ಉಡುಗೊರೆಗೆ ಸೂಕ್ತವಲ್ಲ. ಶುಭ ಕಾರ್ಯಗಳಲ್ಲಿ ನೀವು ಯಾವುದೇ ಕಾರಣಕ್ಕೂ ಬಿಳಿ ಲಿಲಿಯನ್ನು ನೀಡಬಾರದು. ಬಿಳಿ ಶುದ್ಧ ಮತ್ತು ಶಾಂತಿಯ ಸಂಕೇತವಾಗಿದೆ. ಆದ್ರೆ ಅದನ್ನು ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಬಳಸಲಾಗುತ್ತದೆ. ಅಂತ್ಯಕ್ರಿಯೆ ಸಮಯದಲ್ಲಿ ಆತನ ದೇಹದ ಮೇಲೆ ಹಾಕಲು ಈ ಬಿಳಿ ಹೂವನ್ನು ಬಳಸಲಾಗುತ್ತದೆ. ಸಂತೋಷದ ಸಮಯದಲ್ಲಿ ಇಲ್ಲವೆ ಆಪ್ತರಿಗಾಗಿ ನೀವು ಈ ಬಿಳಿ ಲಿಲಿ ಹೂವನ್ನು ನೀಡಬೇಡಿ.