ಸ್ಟಾರ್ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ... ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದೇನು?
ಸಿನಿ ತಾರೆಯರು ಎಂದ ಮೇಲೆ ಕೇಳುವುದೇ ಬೇಡ ಬಿಡಿ. ಅದರಲ್ಲಿಯೂ ಸ್ಟಾರ್ ಪಟ್ಟಕ್ಕೆ ಏರಿದರೆ ಮುಗಿದೇ ಹೋಯ್ತು. ನಿಂತರೆ ಕುಂತರೆ ಕೈಗೊಂದು, ಕಾಲಿಗೊಂದು ಆಳು. ಮನೆಯ ಒಳಗಡೆಯಿಂದ ಹೊರಗೆ ಬಿಡಲು ಒಬ್ಬ ಆಳು, ಕಾರಿನ ಬಳಿಗೆ ಕರೆದುಕೊಂಡು ಹೋಗಲು ಮತ್ತೊಂದಿಷ್ಟು ಮಂದಿ ಬಾಡಿಗಾರ್ಡ್ಗಳು, ಬಾಗಿಲು ತೆರೆಯಲು ಒಬ್ಬ, ಡ್ರೆಸ್ ಸರಿ ಮಾಡಲು ಇನ್ನೊಬ್ಬ.... ಹೀಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಎಷ್ಟೋ ಮಂದಿ ಸ್ಟಾರ್ ನಟರ ಬಾಡಿಗಾರ್ಡ್ಗಳಿಗೆ ಸಂಬಳವೇ ಹತ್ತಿಪ್ಪತ್ತು ಲಕ್ಷವೂ ಇದೆ. ಹೀಗಿದ್ದ ಮೇಲೆ ಅಡುಗೆಯವರು ಕೇಳಬೇಕೆ? ವೆಜ್ ಮಾಡಲು ಒಂದಿಷ್ಟು ಮಂದಿ, ನಾನ್ವೆಜ್ಗೆ ಮತ್ತೊಂದಿಷ್ಟು ಮಂದಿ, ಬ್ರೇಕ್ಫಾಸ್ಟ್ಗೆ ಬೇರೆಯವ, ಲಂಚ್ಗೆ ಮತ್ತೊಬ್ಬ... ಹೀಗೆ ನಡೆದೇ ಇರುತ್ತದೆ. ಇದೀಗ ಶಾಕಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕ ಅನುರಾಗ್ ಕಶ್ಯಪ್.
ಅನುರಾಗ್ ಕಶ್ಯಪ್ ಅವರು ಇಂಥ ವ್ಯರ್ಥ ಖರ್ಚಿನ ಕುರಿತು ಇದಾಗಲೇ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಸಿನಿಮಾದ ಪ್ರೊಡಕ್ಷನ್ ಕಾಸ್ಟ್ ಹೆಚ್ಚಾಗುತ್ತಿರುವುದಕ್ಕೆ ಸಿನಿಮಾದ ಸ್ಟಾರ್ ನಟ-ನಟಿಯರು ಮಾಡುವ ಡಿಮ್ಯಾಂಡ್ಗಳೇ ಕಾರಣ ಎಂಬ ಚರ್ಚೆ ಎದ್ದಿದ್ದು, ಬಾಲಿವುಡ್ನ ಕೆಲವು ಸಿನಿಮಾ ನಿರ್ಮಾಪಕರು ಒಟ್ಟಾಗಿ ಈ ಬಗ್ಗೆ ಚರ್ಚೆ ನಡೆಸಿ ಕೆಲವು ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ. ಈ ವಿಷಯವಾಗಿ ಮೊದಲಿನಿಂದಲೂ ತಕರಾರು ಎತ್ತುತ್ತಲೇ ಇದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್, ಸಂದರ್ಶನವೊಂದರಲ್ಲಿ ಸ್ಟಾರ್ ನಟ-ನಟಿಯರ ದುಬಾರಿ ಜೀವನ ಶೈಲಿಯ ಬಗ್ಗೆ ಮಾತನಾಡಿದ್ದಾರೆ. ನಟ-ನಟಿಯರು ಮಾಡುವ ಡಿಮ್ಯಾಂಡ್ಗಳನ್ನು ಪೂರೈಸುವುದರಲ್ಲೇ ಸಿನಿಮಾದ ಕಾಲು ಭಾಗ ಬಜೆಟ್ ಹೊರಟು ಹೋಗುತ್ತದೆ. ಉದಾಹರಣೆಗೆ ನಟಿಗೆ ಬೇಕಾದ ಬರ್ಗರ್ ತೆಗೆದುಕೊಂಡು ಬರಲು ಗಾಡಿಯೊಂದು ಮೂರು ಕಿ.ಮೀ ಜರ್ನಿ ಮಾಡಿಕೊಂಡು ನಗರಕ್ಕೆ ಹೋಗಿ ಬರಬೇಕು, ಇಂಥಹುಗಳಲ್ಲಿಯೇ ಬಜೆಟ್ ಹೊರಟುಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಡಿ ಬಿಡಿ ಎಂದ್ರೂ ಹುಡುಗನನ್ನು ಹಿಡಿದು ಶೆರ್ಲಿನ್ ಮಾಡ್ತಿರೋದೇನು? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!
ಸ್ಟಾರ್ ನಟನೊಬ್ಬ ತಮ್ಮ ಅಡುಗೆಯವನಿಗೆ ದಿನಕ್ಕೆ ಎರಡು ಲಕ್ಷ ರೂಪಾಯಿ ಸಂಬಳ ಕೊಡುತ್ತಾನೆ ಎಂದಿದ್ದಾರೆ. ಆ ನಟನ ಹೆಸರನ್ನು ರಿವೀಲ್ ಮಾಡದ ಅನುರಾಗ್ ಕಶ್ಯಪ್ ಅವರು, ಪ್ರತಿದಿನದ ಲೆಕ್ಕದಲ್ಲಿ ಶೆಫ್ಗೆ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ. ಹಾಗೆ ಲೆಕ್ಕ ಹಾಕಿದರೆ ತಿಂಗಳಿಗೆ ಸುಮಾರು 60 ಲಕ್ಷ ರೂಪಾಯಿ. ಇದನ್ನು ನಾನು ಖುದ್ದಾಗಿ ನೋಡಿದ್ದೇನೆ. ಆ ಶೆಫ್ ನಟನಿಗೆ ಏನೇನು ಬೇಕೋ ಅದನ್ನು ಮಾಡಿಕೊಡುತ್ತಾನೆ. ಆ ನಟನಿಗೆ ಕೆಲವೊಂದು ಆಹಾರಗಳ ಅಲರ್ಜಿ ಇರುವ ಕಾರಣ, ಆರೋಗ್ಯಕರ ಅಡುಗೆಯನ್ನಷ್ಟೇ ಮಾಡಿಕೊಡುವುದು ಆತನ ಕೆಲಸ. ಅದಕ್ಕಾಗಿ ಇಷ್ಟು ದೊಡ್ಡದ ಹಣ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಆ ಅಡುಗೆಯ ಕುರಿತು ಇನ್ನಷ್ಟು ಹೇಳಿರುವ ಅನುರಾಗ್ ಕಶ್ಯಪ್ ಅವರು, ಇಷ್ಟೆಲ್ಲಾ ಸಂಬಳ ಪಡೆಯುವ ಆ ಶೆಫ್ ಭಾರಿ ಆಹಾರವನ್ನೇನೂ ಮಾಡುವುದಿಲ್ಲ. ತರಕಾರಿ, ಬೀಜಗಳನ್ನು ಬೆರೆಸಿದ ವಿಚಿತ್ರವಾದ ಸ್ವಲ್ಪವೇ ಆಹಾರ ತಯಾರಿಸುತ್ತಾನೆ. ಅದನ್ನು ಮಾತ್ರ ಆ ಸ್ಟಾರ್ ತಿನ್ನುತ್ತಾನೆ. ನಾನು ಆ ಅಡುಗೆಯನ್ನು ಒಮ್ಮೆ ನೋಡಿ ಏನಿದು? ಮನುಷ್ಯರು ತಿನ್ನುವುದಾ ಇಲ್ಲ ಹಕ್ಕಿಗಳಿಗೆ ತಿನ್ನಿಸುವುದಾ ಎಂದು ಕೇಳಬೇಕು ಎನ್ನಿಸಿತ್ತು. ಇದನ್ನು ಮಾಡಲು ಈ ಪರಿ ಖರ್ಚು ಮಾಡಲಾಗುತ್ತದೆ. ವಿನಾ ಕಾರಣ, ಹಣದ ದುರುಪಯೋಗ ಆಗುತ್ತಿದೆ ಎಂದಿದ್ದಾರೆ.
ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್ ಇಕ್ಬಾಲ್ ತಂದೆ ಮಾತೀಗ ವೈರಲ್!