ಗಂಡನ ಮನೆಯಲ್ಲಿ ಅಡುಗೆ ಮಾಡೋ ಒತ್ತಡವಿದ್ಯಾ? ಮದುವೆ ನಂತ್ರ ಸೋನಾಕ್ಷಿ ಸಿನ್ಹಾ ಯಾಕೆ ಹೀಗೆ ಮಾಡ್ತಾ ಇದ್ದಾರೆ?

By Roopa Hegde  |  First Published Sep 13, 2024, 4:22 PM IST

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ, ಗಂಡನ ಮನೆಯಲ್ಲಿ ಏನು ಅಡುಗೆ ಮಾಡ್ತಾರಾ ಎನ್ನುವ ಕುತೂಹಲವಿದೆ. ಬಾಯಿ ಸಿಹಿ ಮಾಡೋ ಶಾಸ್ತ್ರದಲ್ಲಿ ಅವರು ತಯಾರಿಸಿದ್ದೇನು? ಜಹೀರ್ ಇಕ್ಬಾಲ್ ಗೆ ಇಷ್ಟವಾಯ್ತಾ ಸೋನಾಕ್ಷಿ ಖಾದ್ಯ? ಅಡುಗೆ ಮಾಡೋಕೆ ಸೋನಾಕ್ಷಿಗೆ ಅತ್ತೆ – ಮಾವ ಒತ್ತಡ ಹಾಕ್ತಿದ್ದಾರಾ? ಎಲ್ಲ ಪ್ರಶ್ನೆಗೆ ಸೋನಾಕ್ಷಿ ಉತ್ತರ ನೀಡಿದ್ದಾರೆ. 


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Bollywood actress Sonakshi Sinha) ಹಾಗೂ ಜಹೀರ್ ಇಕ್ಬಾಲ್ (Zaheer Iqbal)  ಹ್ಯಾಪಿ ಮ್ಯಾರಿಡ್ ಲೈಫ್ (Happy Married Life) ಎಂಜಾಯ್ ಮಾಡ್ತಿದ್ದಾರೆ. ಸೋನಾಕ್ಷಿ ಸಿನ್ಹಾ ಮದುವೆಯಾಗಿ ಮೂರು ತಿಂಗಳಾಗ್ತಾ ಬಂತು. ಜೂನ್ 23ರಂದು ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಕೈ ಹಿಡಿದಿದ್ದಾರೆ. ಮದುವೆ ನಂತ್ರ ಜೋಡಿ ಮೇಲೆ ಅಭಿಮಾನಿಗಳ ಸ್ಪೇಷಲ್ ಕಣ್ಣಿದೆ. ಸೋನಾಕ್ಷಿ ಗುಡ್ ನ್ಯೂಸ್ ನೀಡ್ತಾರಾ ಎಂಬ ನಿರೀಕ್ಷೆಯಲ್ಲೇ ಫ್ಯಾನ್ಸ್ ಇದ್ದಾರೆ. ಸೆಲೆಬ್ರಿಟಿಗಳು ಮನೆಯಲ್ಲಿ ಹೇಗ್ ಇರ್ತಾರೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಫ್ಯಾನ್ಸ್ ಗಿರುತ್ತೆ. ಗಂಡನ ಮನೆಗೆ ಹೋಗಿರುವ ಸೋನಾಕ್ಷಿ, ಅಲ್ಲಿ ಏನೇನ್ ಮಾಡ್ತಾರೆ, ಅಡುಗೆ ಮಾಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗಿರುತ್ತೆ. ಸೋನಾಕ್ಷಿ ಇದಕ್ಕೆ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸೋನಾಕ್ಷಿ, ಅತ್ತೆ ಮನೆಯಲ್ಲಿ ಅಡುಗೆ ಮಾಡ್ಲೇಬೇಕು ಅನ್ನೋ ಒತ್ತಡ ಇಲ್ಲ ಎಂದಿದ್ದಾರೆ.

ಇವೆಂಟ್ ಒಂದರಲ್ಲಿ ಪಾಲ್ಗೊಂಡಿದ್ದ ಸೋನಾಕ್ಷಿ ಸಿನ್ಹಾ, ಅಡುಗೆ (cooking) ಮಾಡೋಕೆ ಯಾವುದೇ ಒತ್ತಡ ಇಲ್ಲ. ಅಡುಗೆ ಮಾಡ್ಬೇಕು ಅನ್ನಿಸಿದ್ರೆ ಮಾಡ್ತೇನೆ. ಹಾಗಂತ, ಪ್ರತಿ ದಿನ ಅಡುಗೆ ಮಾಡಿಯೇ ಬರ್ಬೇಕು ಎನ್ನುವ ರೂಲ್ಸ್ ಇಲ್ಲ. ಈಗ ಮಹಿಳೆಯ ಲೈಫ್ ಸ್ಟೈಲ್ ಬದಲಾಗಿದೆ. ಅಡುಗೆ ಮಾಡ್ಲೇಬೇಕು ಎನ್ನುವ ನಿಯಮ ಯಾರಿಗೂ ಇಲ್ಲ. ಮನೆ ಹಾಗೂ ಕೆಲಸ ಎರಡನ್ನೂ ಅವರು ಸಂಭಾಳಿಸ್ತಿರುತ್ತಾರೆ. ಅಡುಗೆ ಮಾಡೋದು ಅವರ ಇಂಟರೆಸ್ಟಿಂಗ್ ವಿಷ್ಯ. ಅಡುಗೆ ಮಾಡುವ ಒತ್ತಡ ನನಗಿಲ್ಲದಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದು ಸೋನಾಕ್ಷಿ ಹೇಳಿದ್ದಾರೆ. 

Tap to resize

Latest Videos

ಬರೋಬ್ಬರಿ 4 ಕೋಟಿ ರೂ ಹೊಸ ಕಾರು ಖರೀದಿಸಿದ ನಟ ಥಲಾ ಅಜಿತ್, ಅಂತಾದ್ದೇನಿದೆ ಈ ಕಾರಲ್ಲಿ?

ಫಸ್ಟ್ ಟೈಂ ಅಡುಗೆ ಮಾಡಿದ ಸೋನಾಕ್ಷಿ ಸಿನ್ಹಾ : ಇವೆಂಟ್ ನಲ್ಲಿ ಪಾಲ್ಗೊಂಡಿದ್ದ ಸೋನಾಕ್ಷಿ ಸಿನ್ಹಾ, ಸಟ್ಟು ಪರಾಠ (sattu paratha) ತಯಾರಿಸಿದ್ರು. ಸೋನಾಕ್ಷಿಗೆ ಸಾಥ್ ನೀಡಿದ್ದ ಜಹೀರ್ ಇಕ್ಬಾಲ್, ಅವಕಾಡೊ ಸುಶಿ ತಯಾರಿಸಿದ್ದರು. ಇದೇ ಫಸ್ಟ್ ಟೈಂ ಅಡುಗೆ ಮಾಡಿದ್ದು, ಇದನ್ನು ನೋಡಿದ್ರೆ ಅಮ್ಮ ಪೂನಂ ಸಿನ್ಹಾ ಖುಷಿಯಾಗ್ತಾರೆ ಎಂದು ಸೋನಾಕ್ಷಿ ಹೇಳಿದ್ದಾರೆ. 

ಪೂನಂ ಸಿನ್ಹಾ ಒಳ್ಳೆ ಕುಕ್. ಮಗಳು ರುಚಿಯಾಗಿ ಅಡುಗೆ ಮಾಡ್ಬೇಕು ಎಂಬುದು ಅವರ ಆಸೆಯಿತ್ತು. ಅದು ಈವರೆಗೂ ಆಗಿರ್ಲಿಲ್ಲ. ಗಂಡನ ಮನೆಗೆ ಹೋದ್ಮೇಲೆ ಸೋನಾಕ್ಷಿ ಅಡುಗೆ ಕಲಿತು, ಮಾಡ್ತಾಳೆ ಎಂದು ಪೂನಂ ಸಿನ್ಹಾ ಕನಸು ಕಾಣ್ತಿದ್ದರಂತೆ. ಆ ಕ್ಷಣ ಇನ್ನೂ ಬಂದಿಲ್ಲ. ಪೂನಂ ಸಿನ್ಹಾ ಕಾಯ್ತಾನೆ ಇದಾರೆ. ಮೋಸ್ಟ್ಲಿ ಈಗ ಅಮ್ಮ ಸಂತೋಷಪಡ್ತಾರೆ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.  ಇಷ್ಟೊಂದು ಜನರ ಮುಂದೆ ಅಡುಗೆ ಮಾಡುವಾಗ ಸ್ವಲ್ಪ ಭಯವಾಯ್ತು. ಆದ್ರೂ ನಾನು ಎಂಜಾಯ್ ಮಾಡ್ದೆ ಎಂದ ಸೋನಾಕ್ಷಿ, ಇನ್ಮುಂದೆ ಮತ್ತಷ್ಟು ಅಡುಗೆ ಮಾಡಲು ಟ್ರೈ ಮಾಡ್ತೇನೆ ಎಂದಿದ್ದಾರೆ. 

ಅಜ್ಜಿ ಮನೆಯಲ್ಲಿ ಏನ್ ತಿನ್ನುತ್ತಿದ್ರು ಸೋನಾಕ್ಷಿ ಸಿನ್ಹಾ ? : ಇಂಡಿಯನ್ ಆಹಾರ ತಿನ್ನೋಕೆ ಸೋನಾಕ್ಷಿ ಸಿನ್ಹಾಗೆ ಬಹಳ  ಖುಷಿ. ಬಾಲ್ಯದಲ್ಲಿ ಅಜ್ಜಿ ಮನೆಗೆ ಹೋಗಿ ಬಿಹಾರಿ ಆಹಾರವನ್ನು ತಿನ್ನುತ್ತಿದ್ದರು ಅವರು. ಇದ್ರಲ್ಲಿ ಲಿಟ್ಟಿ ಚೋಖಾ, ಸಟ್ಟು ಪರೋಠಾವನ್ನು ನನ್ನ ಅಜ್ಜಿ ಮಾಡ್ತಿದ್ದರು. ಈಗ್ಲೂ ಅದನ್ನು ತಿನ್ನಲು ನಾನು ಇಷ್ಟಪಡ್ತೇನೆ ಎನ್ನುತ್ತಾರೆ ಸೋನಾಕ್ಷಿ ಸಿನ್ಹಾ. 

ಗ್ಲಾಸ್‌ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಡಿವೇಲು, ಕಾಮಿಡಿ ಕಿಂಗ್‌ ಆಗಿದ್ದು ಹೇಗೆ?

ಬಾಯಿ ಸಿಹಿ ಮಾಡೋ ಶಾಸ್ತ್ರದಲ್ಲಿ ಏನೂ ಮಾಡ್ದೆ, ತಂದಿದ್ದ ಸ್ವೀಟನ್ನೇ ಅತ್ತೆ ಮಾವನಿಗೆ ನೀಡಿದ್ದ ಸೋನಾಕ್ಷಿ, ಇಕ್ಬಾಲ್ ಗಾಗಿ ಅಡುಗೆ ತಯಾರಿಸಿದ್ದರಂತೆ. ಬ್ರೆಡ್, ಎಗ್ ನಲ್ಲಿ ಮಾಡಿದ್ದ ಖಾದ್ಯ ಚೆನ್ನಾಗಿತ್ತು ಎಂದಿದ್ದಾರೆ ಇಕ್ಬಾಲ್. ಮದುವೆ ನಂತ್ರ ಸ್ಪೇಷಲ್ ಇವೆಂಟ್ ಗಳಲ್ಲಿ ಪಾಲ್ಗೊಳ್ಳುತ್ತಿರುವ ಅವರು ಸೋಶಿಯಲ್ ಮೀಡಿಯಾದಲ್ಲೂ ಮಿಂಚುತ್ತಿದ್ದಾರೆ. ಹೊಸ ಜೋಡಿ ಎಲ್ಲಿ ಹೋದ್ರೂ ಪಾಪರಾಜಿಗಳು ಅವರನ್ನು ಹಿಂಬಾಲಿಸ್ತಾರೆ. 

click me!