ಛೇ... ಈಗ ತಾನೇ ಕಣ್ಣುಬಿಟ್ಟ ದೀಪಿಕಾ ಮಗುವಿಗೆ ಇದೆಂಥ ಕಾಟ! ಅಪ್ಪನ ಹೆಸರಿನಲ್ಲಿ ಹೀಗೆ ಮಾಡೋದು ಸರಿನಾ?

By Suchethana D  |  First Published Sep 12, 2024, 4:50 PM IST

ಇಷ್ಟು ತಿಂಗಳು ದೀಪಿಕಾ  ಪಡುಕೋಣೆಯ ಗರ್ಭಧಾರಣೆಯ ಕುರಿತು ಇನ್ನಿಲ್ಲದಂತೆ ಟ್ರೋಲ್​ ಮಾಡುತ್ತಿದ್ದ ಟ್ರೋಲಿಗರಿಂದ ಛೇ ಇದೆಂಥ ಅಸಭ್ಯ ಸಂದೇಶಗಳು? 
 


ದೀಪಿಕಾ ಪಡುಕೋಣೆ ನಿನ್ನೆ ಅಂದ್ರೆ ಸೆಪ್ಟೆಂಬರ್‌ 8ರಂದು ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದಾರೆ. ಈಕೆಗೆ ಗಂಡುಮಗು ಹುಟ್ಟಲಿದೆ ಎಂಬ ಸೆಲೆಬ್ರಿಟಿ ಜ್ಯೋತಿಷಿಯ ಮಾತು ಸುಳ್ಳಾಗಿದೆ. ಸೆಪ್ಟೆಂಬರ್‌ 28 ರಂದು ದೀಪಿಕಾ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್‌ ಕಪೂರ್‌ ಹುಟ್ಟಿದ ದಿನವೇ ದೀಪಿಕಾ ಮಗುನೂ ಹುಟ್ಟಲಿದೆ ಎಂಬ ಸುದ್ದಿಯೂ ಸುಳ್ಳಾಗಿದ್ದು, 20 ದಿನ ಮುಂಚೆಯೇ ಮಗು ಜನಿಸಿದೆ. ದೀಪಿಕಾರದ್ದು ಫೇಕ್‌ ಹೊಟ್ಟೆ ಎಂದು ತುಂಬು ಗರ್ಭಿಣಿಯವರೆಗೂ ಹೇಳಿಕೊಂಡು ಬಂದಿರೋ ದೊಡ್ಡ ವರ್ಗವೇ ಇದೆ. ಅದರ ನಡುವೆಯೂ ಇದೀಗ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ನಟಿ.  ಅಷ್ಟಕ್ಕೂ ದೀಪಿಕಾ ಗರ್ಭಿಣಿ ಎಂದು ಸುದ್ದಿ ಗೊತ್ತಾದಾಗಿನಿಂದಲೂ ಗರ್ಭಧಾರಣೆಯ ಬಗ್ಗೆ ಇನ್ನಿಲ್ಲದ ಚರ್ಚೆಗಳು ಹುಟ್ಟಿಕೊಂಡಿದ್ದವು.  ಮೊದಲಿಗೆ ದಿನಕ್ಕೊಂದರಂತೆ ನಟಿಯ ಹೊಟ್ಟೆ ಕಾಣಿಸುತ್ತಿರುವ ಕಾರಣ, ನಟಿ ಗರ್ಭಿಣಿಯೇ ಅಲ್ಲ ಎಂದು ಹೇಳಲಾಗಿತ್ತು.  ಮುಂದಿನ ತಿಂಗಳು ಡೆಲವರಿ ಎಂದರೆ ಈಗ ದೀಪಿಕಾ ತುಂಬು ಗರ್ಭಿಣಿಯಾಗಿರಬೇಕು. ಆದರೆ ಇಲ್ಲಿಯವರೆಗೂ ಅವರ ಹೊಟ್ಟೆಯ ಸೈಜ್‌ನಲ್ಲಿ ವ್ಯತ್ಯಾಸ ಆಗ್ತಿಲ್ಲ, ಅದರ ಶೇಪ್‌ ಮಾತ್ರ ಅಡ್ಡಾದಿಡ್ಡಿ ಆಗುತ್ತಿದೆ ಎಂದೇ ದೊಡ್ಡ ಮಟ್ಟಿಗಿನ ಚರ್ಚೆಯಾಗಿತ್ತು.   

ತುಂಬು ಗರ್ಭಿಣಿ ದೀಪಿಕಾ ಎಲ್ಲರ ಇಂಥ ಕುಹಕ ಮಾತುಗಳಿಗೆ ಫುಲ್​ಸ್ಟಾಪ್​ ಇಡಲು ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್​ ಮಾಡಿಸಿಕೊಂಡರು. ಆದರೂ ಈಗಲೂ ಈಕೆಯ ಗರ್ಭಧಾರಣೆ ಕುರಿತು ಏನೇನೋ ಸುದ್ದಿಗಳು ಹರಿದಾಡಿದವು.  . ಟೂ ಪೀಸ್​ ಸೇರಿದಂತೆ ಹಲವಾರು ರೀತಿಯಲ್ಲಿ ವೇಷ ಮಾಡಿಕೊಂಡ ನಟಿ ದೀಪಿಕಾ ಹೊಟ್ಟೆ ತೋರಿಸಿ ಫೋಟೋಶೂಟ್​ ಮಾಡಿಸಿದ್ದರೂ,  ದೀಪಿಕಾ ಗರ್ಭಿಣಿ ಅಲ್ಲವೇ ಅಲ್ಲ, ಇದು ಫೋಟೋಷಾಪ್​ನಲ್ಲಿ ಮಾಡಿರುವ ಎಡಿಟಿಂಗ್​ ಅಷ್ಟೇ. ಒಂದು ವೇಳೆ ಆಕೆ ರಿಯಲ್​ ಆಗಿ ಗರ್ಭಿಣಿಯಾಗಿದ್ದರೆ ಕಲರ್​ ಫೋಟೋಶೂಟ್​ ಮಾಡಿಸುತ್ತಿದ್ದರು ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದರು. ಇತ್ತೀಚೆಗೆ ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋಗ್ರಫಿ ಮತ್ತೆ ಟ್ರೆಂಡಿಂಗ್​ನಲ್ಲಿ ಇರುವುದು ನಿಜವಾದರೂ, ಒಂದೆರಡು ಫೋಟೋಗಳನ್ನಾದರೂ ಕಲರ್​ನಲ್ಲಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಕಲರ್​ ಫೋಟೋಗ್ರಫಿಯಾದರೆ ಎಡಿಟಿಂಗ್​ ಮಾಡಿರುವುದು ಸರಿಯಾಗಿ ಗೋಚರಿಸುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದೇ ಹೇಳಿದರು. 

Tap to resize

Latest Videos

undefined

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

ಇಷ್ಟೆಲ್ಲಾ ಟ್ರೋಲ್​  ಮಾಡಿದವರು ದೀಪಿಕಾಗೆ ಮಗುವಾದ ಮೇಲಾದ್ರೂ ಸುಮ್ಮನಿದ್ದಾರಾ? ಇಲ್ಲ! ಈಗ ಅವರ ಭಾಷೆಯ ಶೈಲಿಯೇ ಬೇರೆಯಾಗಿದೆ. ಈಗ ಮಗುವಿನ ಬಗ್ಗೆ ಇನ್ನಿಲ್ಲದ ಟ್ರೋಲ್​ ಮಾಡುತ್ತಿದ್ದಾರೆ. ಕೆಲವರು ಇದು ರಣವೀರ್​ ಸಿಂಗ್​ ಮಗು ಹೌದೋ ಅಲ್ಲವೋ ಡಿಎನ್​ಎ ಟೆಸ್ಟ್​ ಮಾಡಿಸಬೇಕು ಎಂದು ಕೆಟ್ಟಿದ್ದಾಗಿ ಕಮೆಂಟ್​ ಹಾಕುತ್ತಿದ್ದರೆ, ಈ ಮಗು ಅಪ್ಪನಂತೆ ಮೆಂಟಲ್​ ಆಗದಿದ್ದರೆ ಸಾಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಈ ಹಿಂದೆ ಕೂಡ ಹಲವರು ಮಗು ಹುಟ್ಟಲಿ, ಬಿಡಲಿ ಅಪ್ಪನಂತೆ ಹುಚ್ಚು ಮಗುವನ್ನು ಹುಟ್ಟಿಸಬೇಡಮ್ಮಾ ಎಂದು ನಟಿಯ ಕಾಲೆಳೆದಿದ್ದರು. ಈಗಲೂ ಅದೇ ಧಾಟಿಯಲ್ಲಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.

ಇನ್ನು ನಟಿಯ ಕೆಲವು ಎಕ್ಸ್​ ಬಾಯ್​ಫ್ರೆಂಡ್ಸ್​ ಹೆಸರುಗಳನ್ನೆಲ್ಲಾ ಎಳೆದು ತಂದಿರುವ ನೆಟ್ಟಿಗರು ಈ ಮಗು ಯಾರದ್ದು ಎಂದು ಒಮ್ಮೆ ಕನ್​ಫರ್ಮ್​  ಮಾಡಬೇಕು ಎಂದೆಲ್ಲಾ ಅಸಭ್ಯ ರೀತಿಯಲ್ಲಿ ಕಮೆಂಟ್​ ಹಾಕುತ್ತಿದ್ದಾರೆ. ಅದೇ ಇನ್ನೊಂದೆಡೆ, ದೀಪಿಕಾರ ಗರ್ಭಧಾರಣೆ ಕುರಿತು ಟ್ರೋಲ್​ ಮಾಡಿರುವವರೆಲ್ಲರೂ ನಟಿಗೆ ಕ್ಷಮೆ ಕೋರಬೇಕು ಎಂದು ಒಂದಿಷ್ಟು ಮಂದಿ ಸೋಷಿಯಲ್​  ಮೀಡಿಯಾದಲ್ಲಿ ಹಲವು ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ತಾಯಿಯಾಗುತ್ತಿರುವ ಮಹಿಳೆಯೊಬ್ಬಳಿಗೆ ಈ ರೀತಿ ಮಾನಸಿಕವಾಗಿ ಹಿಂಸೆ ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 
 

click me!