ಸುಂದರ ಕಾಲಿದ್ದರೆ ನಟ ಸಾಕಿಬ್​ ಸಲೀಂನನ್ನು ಇಂಪ್ರೆಸ್​ ಮಾಡ್ಬೋದು! ಸೋನಾಕ್ಷಿ ಮಾತು ಸಕತ್​ ಟ್ರೋಲ್​

By Suchethana D  |  First Published Jul 24, 2024, 1:00 PM IST

ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್​ ಇಕ್ಬಾಲ್​ ಸ್ನೇಹಿತ ಹಾಗೂ ನಟ ಸಾಕಿಬ್​ ಸಲೀಂರನ್ನು ಹೊಗಳಿರುವ ಪರಿಗೆ ಸಕತ್​ ಟ್ರೋಲ್​  ಆಗುತ್ತಿದೆ. ಏನಿದು ಮಾತು?
 


 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಇವರಿಬ್ಬರ ಬಗ್ಗೆ ಗಾಸಿಪ್​ ತಣ್ಣಗಾಗುತ್ತಿದೆ.

ಇದರ ನಡುವೆಯೇ ಸೋನಾಕ್ಷಿ ತಮ್ಮ ಮುಂಬರುವ ಚಿತ್ರ ಕಕುಡಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರವು ಹಾರರ್​ ಹಾಗೂ ಹಾಸ್ಯ ಮಿಶ್ರಿತವಾಗಿರುವುದಾಗಿ ಹೇಳಲಾಗಿದೆ. ರಿತೇಶ್ ದೇಶ್‌ಮುಖ್, ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮದುವೆಯಾಗಲು ಬಯಸುವ ಯುವ ಜೋಡಿಗಳಾದ ಇಂದಿರಾ (ಸೋನಾಕ್ಷಿ ಸಿನ್ಹಾ) ಮತ್ತು ಸನ್ನಿ (ಸಾಕಿಬ್ ಸಲೀಂ) ಹಲವಾರು  ಅಡೆತಡೆಗಳನ್ನು ಎದುರಿಸುತ್ತಾರೆ.  ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇಂದಿರಾ ಅವರ ತಂದೆಗೆ ಇಂಗ್ಲಿಷ್ ಮಾತನಾಡುವ ಅಳಿಯ ಬೇಕು. ಸನ್ನಿ ಭಾಷಾ ಪರೀಕ್ಷೆಯಲ್ಲಿ ವಿಫಲವಾದಾಗ, ಅವನು ಮತ್ತು ಇಂದಿರಾ ಓಡಿಹೋಗಲು ನಿರ್ಧರಿಸುತ್ತಾರೆ.  ಆದರೆ ವಿಧಿಯಾಟ ಬೇರೆಯಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಚಿತ್ರ ಇದಾಗಿದೆ.

Tap to resize

Latest Videos

ಆರು ವರ್ಷದ ಡೇಟಿಂಗ್‌- ಮದ್ವೆಯಾದ ಎರಡೇ ದಿನಕ್ಕೆ ಪ್ರೆಗ್ನೆಂಟ್‌: ಆಸ್ಪತ್ರೆ ರಹಸ್ಯ ಬಾಯ್ಬಿಟ್ಟ ಸೋನಾಕ್ಷಿ

ಈಗ ಈ ಚಿತ್ರದ ಪ್ರಚಾರದ ಸಮಯದಲ್ಲಿ ಸಂದರ್ಶನವೊಂದರಲ್ಲಿ, ನಟ ಸಾಕಿಬ್​ ಸಲೀಂನನ್ನು ಹುಡುಗಿಯರು ಇಂಪ್ರೆಸ್​ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಮೊದಲಿಗೆ ಸೋನಾಕ್ಷಿ ಆಕೆ ಹುಡುಗಿಯಾಗಿದ್ದರೆ ಸಾಕು ಎನ್ನುತ್ತಾರೆ. ಆಮೇಲೆ ಇನ್ನೋರ್ವ ನಟ, ಸಾಕಿಬ್​ ಕ್ರಿಕೆಟ್​ ಆಟಗಾರ ಆಗಿರುವ ಕಾರಣ, ಸುಂದರ ಕಾಲು ಇದ್ದರೆ ಸಾಕು, ಅವರು ಇಂಪ್ರೆಸ್​ ಆಗುತ್ತಾರೆ ಎಂದಾಗ ನಟಿ ಸೋನಾಕ್ಷಿ ಹೌದು ಹೌದು ಎಂದು ಜೋರಾಗಿ ನಗುತ್ತಾರೆ. ನಟ ಸಾಕಿಬ್​ಗೆ ಯಾವುದೇ ಹುಡುಗಿಯಾದ್ರೂ ಸಾಕು ಎಂದಿರುವ ಸೋನಾಕ್ಷಿ ನಂತರ ಸುಂದರ ಕಾಲಿರುವವರು ಇರಬೇಕು ಎಂಬ ಮಾತಿಗೆ ಸಮ್ಮತಿ ಸೂಚಿಸಿದ್ದರಿಂದ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಅಷ್ಟಕ್ಕೂ ಸಾಕಿಬ್​ ಸಲೀಂ ಮತ್ತು ಸೋನಾಕ್ಷಿ ಪತಿ ಜಹೀರ್​ ಇಕ್ಬಾಲ್​ ಆಪ್ತ ಸ್ನೇಹಿತರು. ಅದಕ್ಕಾಗಿ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ನಟಿಯ ಕಾಲೆಳೆಯುತ್ತಿದ್ದಾರೆ ಟ್ರೋಲಿಗರು. ಮದುವೆಯಾಗಿ ಒಂದು ತಿಂಗಳು ಒಳಗೆನೇ ಪತಿಯ ಆಪ್ತನ ಬಗ್ಗೆ ಎಷ್ಟು ಚೆನ್ನಾಗಿ ತಿಳಿದುಕೊಂಡಿರುವಿರಿ ಎಂದು ತಮಾಷೆ ಮಾಡುತ್ತಿದ್ದರೆ, ಜಹೀರ್​ ಹೋಗಿ ಸಾಕಿಬ್​ನನ್ನು ಈ ಪರಿ ಹೊಗಳೋದಾ ಎಂದು ನಟಿಯನ್ನು ಮತ್ತಿಷ್ಟು ಮಂದಿ ಕಾಲೆಳೆಯುತ್ತಿದ್ದಾರ. ಒಟ್ಟಿನಲ್ಲಿ ನಟಿಯ ಮದುವೆ ಬಗ್ಗೆ ಮಾತುಗಳು ಕಡಿಮೆಯಾಗಿದ್ದರೂ, ಈಕೆಯನ್ನು ನೆಟ್ಟಿಗರು ಬಿಡುವಂತೆ ಕಾಣಿಸುತ್ತಿಲ್ಲ. 

ಬಜ್ಜಿ, ಬೋಂಡಾದ ಪರಿಮಳದಿಂದಲೇ ಮನುಷ್ಯನ ಕ್ಯಾರೆಕ್ಟರ್​ ಹೇಳಿದ ನಟ ರಮೇಶ್​ ಅರವಿಂದ್​

click me!