ಮಳೆಬಿಲ್ಲಿನ ಸೌಂದರ್ಯ, ಬೆಳಂದಿಗಳ ಲಾವಣ್ಯ; ಮಂಚದಲ್ಲಿ ಬಾರ್ಬಿ ಡ್ರೆಸ್‌ನಲ್ಲಿ ಮಿಂಚಿದ ಸಾರಾ!

By Chethan Kumar  |  First Published Jul 23, 2024, 6:13 PM IST

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಬಾರ್ಬಿ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. ಇದರ ಜೊತೆಗೆ ಕವನದ ಮೂಲಕ ತನ್ನ ಸೌಂದರ್ಯ ಹಾಗೂ ವಿವಿದ ಫೋಟೋಗಳನ್ನು ಆನಂದಿಸಲು ಸಾರಾ ಸೂಚಿಸಿದ್ದಾರೆ. 


ಮುಂಬೈ (ಜು.23) ಹಾಲಿವುಟ್ ನಟಿ ಗ್ರೆಟಾ ಗರ್ವಿಗ್ ನಟನೆಯ ಬಾರ್ಬಿ ಫ್ಯಾಶನ್ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಹಲವು ನಟಿಯರು, ಮಾಡೆಲ್ ಬಾರ್ಬಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ, ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಬಾಲಿವುಡ್ ನಟಿ ಸಾರಾ ಆಲಿ ಖಾನ್ ಪಿಂಕ್ ಡ್ರೆಸ್‌ನಲ್ಲಿ ಬಾರ್ಬಿ ಗರ್ಲ್ ರೀತಿ ಮಿಂಚಿದ್ದಾರೆ. ಸಾರಾ ಆಲಿ ಪಿಂಕ್ ಮಿನಿ ಡ್ರೆಸ್ ಮೂಲಕ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಬಾರ್ಬಿ ರೀತಿ ಕಂಗೊಳಿಸಿರುವ ಸಾರಾ ಆಲಿ ಖಾನ್ ಫೋಟೋ ಶೂಟ್ ಇದೀಗ ಭಾರಿ ವೈರಲ್ ಆಗಿದೆ.

ರೋಸಿ ಮೇಕ್‌ಅಪ್, ಗ್ಲಾಸಿ ಲಿಪ್, ಅಷ್ಟೇ ಆಕರ್ಷಕ ಇಯರ್ ರಿಂಗ್, ಜೊತೆಗೆ ಫಿಂಗರ್ ರಿಂಗ್ ಕೂಡ ಧರಿಸಿದ್ದಾರೆ. ಬಿಳಿ ಮಂಚದ ಮೇಲೆ ಫೋಟೋ ಶೂಟ್ ಬಳಿಕ, ಹೊಟೆಲ್ ಬಾಲ್ಕನಿಯಂದ ಸುಂದರ ಸಮುದ್ರದ ಬ್ಯಾಗ್ರೌಂಡ್‌ನಲ್ಲೂ ಫೋಟೋಶೂಟ್ ನಡಸಲಾಗಿದೆ. ಸಾರಾ ಇದಕ್ಕೂ ಮುನ್ನ ಹಲವು ಬಾರಿ ಪಿಂಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಸಾರಾ ಆಲಿ ಖಾನ್ ಸೌಂದರ್ಯ ಈ ಡ್ರೆಸ್‌ನಲ್ಲಿ ಇಮ್ಮಡಿಗೊಂಡಿದೆ. ಪಿಂಕ್ ಸ್ಕರ್ಟ್, ಪಿಂಕ್ ಗೌನ್ ಸೇರಿದಂತೆ ವಿವಿಧ ಪಿಂಕ್ ಡ್ರೆಸ್‌ನಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಕರೀನಾ ಕಪೂರ್‌ಗಾಗಲಿ, ಮಕ್ಕಳಿಗಾಗಲಿ ಸೈಫ್ ಆಲಿ ಖಾನ್ 5000 ಕೋಟಿ ಆಸ್ತಿಯಲ್ಲೇಕೆ ಪಾಲಿಲ್ಲ?

ಪಿಂಕ್ ಡ್ರೆಸ್ ಫೋಟೋ ಶೂಟ್ ಕುರಿತು ವಿಡಿಯೋ ಹಾಗೂ ಕೆಲ ಫೋಟೋಗಳನ್ನು ಸಾರಾ ಆಲಿ ಖಾನ್ ಹಂಚಿಕೊಂಡಿದ್ದಾರೆ. ಇದೇ ವೇಳೆ ಸುಂದರ ಕವನದ ಮೂಲಕ ಬಣ್ಣಿಸಿದ್ದಾರೆ. ಇದೀಗ ಸಾರಾ ಆಲಿ ಖಾನ್ ಸುಂದರ ಫೋಟೋ ಶೂಟ್ ಜೊತೆಗೆ ವರ್ಣನೆಯ ಕವನಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

 
ಗ್ಲಾಸಿ ಹಾಗೂ ಸ್ಪ್ರೇನಂತೆ ಕಂಗೊಳಿಸುತ್ತಿದೆ ಬಾರ್ಬಿ ಡ್ರೆಸ್
ಹೂಗುಚ್ಚದ ಸೌಂದರ್ಯ ಖನಿಯಂತಾಗಿದ್ದಾಳೆ ಸಾರಾ
ಹೊರಗಡೆ ಮೋಡ ಕವಿದ ದಿನದ ಜೊತೆ ಮಳೆ, ಬೂದು ಬಣ್ಣಕ್ಕೆ ತಿರುಗಿದೆ ಇಳೆ
ಮಲಗಿದ್ದಳು ಸಾರಾ ಹಾಸಿಗೆಯ ಮೇಲೆ
ತಂಡವು ಸೂಚಿಸಿತು ಹಾಗೇ ಇರಲು ಒಂದಷ್ಟು ಹೊತ್ತು
ಸೂಚನೆ ಪಾಲಿಸಲು ಸಂದೇಶ ಮೇಲಿಂದ ಮೇಲೆ ಬಂತು 
ವಿಳಂಬಕ್ಕಾಗಿ ಹೇಳಿದಳು ಕ್ಷಮಿಸಿ 
ಆದರೆ ವಿವಿಧ ಭಂಗಿಯ ಫೋಟೋ ಆನಂದಿಸಿ   

 

ಫೋಟೋ ಜೊತೆ ಈ ಮೇಲಿನ ಕವನ ಪೋಸ್ಟ್ ಮಾಡಿರುವ ಸಾರಾ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಸಾರಾ ಕವನಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಸಾರಾ ಅಲಿ ಖಾನ್ ಮೇಲೆ 5 ಕೋಟಿಗೆ ಮೊಕದ್ದಮೆ ಹೂಡಿದ 'ಕೇದಾರನಾಥ' ನಿರ್ದೇಶಕ; ನಂತರ ಏನಾಯಿತು?
 

click me!