ಲೇಡಿ ಲವ್ ಜೊತೆ ವಿರಾಟ್ ಕೊಹ್ಲಿ ಹೊಸ ಫೋಟೋ ವೈರಲ್, ಮತ್ತೊಂದು ಮಗೂಗೆ ರೆಡಿಯಾಗ್ತಿದ್ಯಾ ಜೋಡಿ?

By Roopa Hegde  |  First Published Jul 24, 2024, 12:14 PM IST

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಲಂಡನ್ ಗೆ ಶಿಫ್ಟ್ ಆಗ್ತಾರೆ ಎನ್ನುವ ಸುದ್ದಿ ಮಧ್ಯೆಯೇ ಅವರ ಇನ್ನೊಂದು ಫೋಟೋ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಜೊತೆ ಕೊಹ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ.
 


ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಆಗಾಗ ಸುದ್ದಿಗೆ ಬರ್ತಿರುತ್ತಾರೆ. ಭಾರತದ ಪ್ರಸಿದ್ಧ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾಗಿರುವ ವಿರುಷ್ಕಾ, ಸದ್ಯ ಲಂಡನ್ ನಲ್ಲಿದ್ದಾರೆ. ಅವರ ಲೇಟೆಸ್ಟ್ ಫೋಟೋ ಒಂದು ಈಗ ವೈರಲ್ ಆಗಿದೆ. ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಒಂದು ಫೋಟೋದಲ್ಲಿ ಅನುಷ್ಕಾ ಭುಜ ಹಿಡಿದು ಕೊಹ್ಲಿ ಸ್ಮೈಲ್ ಮಾಡಿದ್ದಾರೆ. ಈ ಎರಡು ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. 

ಅನುಷ್ಕಾ (Anushka) ಫ್ಲೋರಲ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಚಿಕ್ಕ ಕೂದಲು, ಅವರು ಕುತ್ತಿಗೆ ಹಾಕಿರುವ ಚಿನ್ನದ ಸರ, ಅದಕ್ಕೆ ಹೊಂದಿಕೊಳ್ಳುವ ಕಿವಿಯೋಲೆ ಮತ್ತು ಅವರ ಸುಂದರ ನಗು ಈ ಫೋಟೋ ವಿಶೇಷತೆಯನ್ನು ಹೆಚ್ಚಿಸಿದೆ. ಇನ್ನು ವಿರಾಟ್ (Virat) ಬಿಳಿ ಟಿ-ಶರ್ಟ್, ಬೀಜ್ ಶಾರ್ಟ್ಸ್ ಮತ್ತು ಬೀಜ್ ಕ್ಯಾಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಿಗ್ನೇಚರ್ ಗಡ್ಡ ಮತ್ತು ಕನ್ನಡಕ ಅವರ ನಗುವಿಗೆ ಪರ್ಫೆಕ್ಟ್ ಲುಕ್ ನೀಡಿದೆ. 

Tap to resize

Latest Videos

undefined

ಪ್ರಜ್ವಲ್ ರೇವಣ್ಣ ಸೆಲ್‌ 1 ಕಿಮೀ. ದೂರದಲ್ಲಿದೆ, ಬೇಕರಿ ಐಟಂ ಸಿಗುತ್ತೆ; ದರ್ಶನ್‌ VIP ಸೆಲ್‌ ಬಗ್ಗೆ ಸತ್ಯ ಬಿಚ್ಚಿಟ್ಟ ವ್ಯಕ್ತಿ

Instantbollywood ಹೆಸರಿನ ಇನ್ಸ್ಟಾ (Insta)  ಖಾತೆಯಲ್ಲಿ ಇವರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಲೇಡಿ ಲವ್ ಜೊತೆ ವಿರಾಟ್ ಕೊಹ್ಲಿ ನೋಡಿ ಸಂತೋಷವಾಯ್ತು ಎಂದು ಅನೇಕ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

ಫೋಟೋ ನೋಡಿದ ಕೆಲ ಅಭಿಮಾನಿಗಳು, ವಿರಾಟ್ ಕೊಹ್ಲಿಗೆ ವಯಸ್ಸಾಯ್ತು ಅಂತ ಬೇಸರಪಟ್ಟುಕೊಂಡಿದ್ದಾರೆ. ಈ ಜನರೇಷನ್ ಮಾದರಿ ಜೋಡಿ ಅಂತ ಅಭಿಮಾನಿಗಳು ವಿರುಷ್ಕಾ ಹೊಗಳಿದ್ದಾರೆ. ಇನ್ನೊಂದು ಮಗುವಿನ ತಯಾರಿ ನಡೆಯುತ್ತಿದೆಯಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಅನುಷ್ಕಾ ರಾಣಿಯಾದ್ರೆ, ವಿರಾಟ್ ರಾಜಾ ಎಂದು ಅಭಿಮಾನಿಗಳು ಹೇಳಿದ್ರೆ, ದಿನ ಕಳೆದಂತೆ ಅನುಷ್ಕಾ ಸೌಂದರ್ಯ ದುಪ್ಪಟ್ಟಾಗ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.  

ಟಿ –20 ವಿಶ್ವಕಪ್ ನಂತ್ರ ವಿಶ್ರಾಂತಿಯಲ್ಲಿರುವ ಕೊಹ್ಲಿ, ಕುಟುಂಬದ ಜೊತೆ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಅನಂತ್ ಅಂಬಾನಿ, ರಾಧಿಕಾ ಮದುವೆ ಸಮಾರಂಭದಲ್ಲೂ ಕೊಹ್ಲಿ – ಅನುಷ್ಕಾ ಗೈರು ಹಾಜರಾಗಿದ್ದರು. ಅಂಬಾನಿ ಕುಟುಂಬದ ಮದುವೆಗೆ ಕೊಹ್ಲಿ ಬರಲಿಲ್ಲ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಈ ಸಮಯದಲ್ಲಿ ಇಬ್ಬರೂ ಲಂಡನ್ ನಲ್ಲಿರುವ ವಿಡಿಯೋ ವೈರಲ್ ಆಗಿತ್ತು. 

ಲಂಡನ್ ನಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ಕೀರ್ತನೆಯಲ್ಲಿ ಇವರು ಪಾಲ್ಗೊಂಡಿದ್ದರು ಎಂಬ ಸುದ್ದಿ ಇತ್ತು. ಅದ್ರ ವಿಡಿಯೋ ಕೂಡ ವೈರಲ್ ಆಗಿತ್ತು. ಮಗು ಅಕಾಯ್ ಜನನದ ನಂತ್ರ ಅನುಷ್ಕಾ ತಮ್ಮ ಬಹುತೇಕ ಸಮಯವನ್ನು ಲಂಡನ್ ನಲ್ಲಿ ಕಳೆಯುತ್ತಿದ್ದಾರೆ. ಫೆಬ್ರವರಿ 15ರಂದು ಅಕಾಯ್ ಜನಿಸಿದ್ದು, ಇಬ್ಬರು ಮಕ್ಕಳ ಖಾಸಗಿತನಕ್ಕಾಗಿ ಕೊಹ್ಲಿ ದಂಪತಿ ಶಾಶ್ವತವಾಗಿ ಲಂಡನ್ ಗೆ ಶಿಫ್ಟ್ ಆಗುತ್ತಾರೆ ಎನ್ನುವ ಸುದ್ದಿ ಇದೆ. 

ಈ ಮಧ್ಯೆ ಲಂಡನ್ ನಲ್ಲಿರುವ ಅನೇಕ ಫೋಟೋಗಳು ಒಂದಾದ್ಮೇಲೆ ಒಂದರಂತೆ ವೈರಲ್ ಆಗ್ತಿದೆ. ಈಗಾಗಲೇ ಕೊಹ್ಲಿ ದಂಪತಿ ಲಂಡನ್ ಗೆ ಶಿಫ್ಟ್ ಆಗಿದ್ದಾರಾ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.  ವಿಶ್ವಕಪ್ ಮುಗಿದ ನಂತ್ರ ಭಾರತಕ್ಕೆ ಬಂದಿದ್ದ ಕೊಹ್ಲಿ ನಂತ್ರ ಲಂಡನ್ ಗೆ ತೆರಳಿದ್ದಾರೆ. ಇತ್ತೀಚಿಗೆ ಕೊಹ್ಲಿ ಮಗನನ್ನು ಎತ್ತಿಕೊಂಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಅದ್ರಲ್ಲಿ ಅನುಷ್ಕಾ ಹೂವಿನ ಅಂಗಡಿ ಬಳಿ ನಿಂತಿದ್ದನ್ನು ನೋಡಬಹುದು.

ಭಾರತದ ಮೇಲೆ ಕಿಡಿಕಾರುವ ಪಾಕ್ ಆಟಗಾರನ ಪ್ರೀತಿ ಬಲೆಗೆ ಬಿದ್ದ ನಮ್ಮ ದೇಶದ ಪ್ಲೈಟ್ ಇಂಜಿನಿಯರ್..!

ಅನುಷ್ಕಾ ಸದ್ಯ ಸಿನಿಮಾದಿಂದ ದೂರವಿದ್ದಾರೆ. ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅವರು, ಕ್ರಿಕೆಟ್ ಮೈದಾನದಲ್ಲಿ ಆಗಾಗ ಕಾಣಿಸಿಕೊಳ್ತಿರುತ್ತಾರೆ.  ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಡಿಸೆಂಬರ್ 11, 2017ರಂದು ಮದುವೆಯಾಗಿದ್ದಾರೆ. ಇಬ್ಬರು ಮುದ್ದು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ವಿರುಷ್ಕಾ ಸಮಯ ಕಳೆಯುತ್ತಿದ್ದಾರೆ. 

click me!