ಆರು ವರ್ಷದ ಡೇಟಿಂಗ್‌- ಮದ್ವೆಯಾದ ಎರಡೇ ದಿನಕ್ಕೆ ಪ್ರೆಗ್ನೆಂಟ್‌: ಆಸ್ಪತ್ರೆ ರಹಸ್ಯ ಬಾಯ್ಬಿಟ್ಟ ಸೋನಾಕ್ಷಿ

By Suchethana D  |  First Published Jul 6, 2024, 5:18 PM IST

ಆರು ವರ್ಷದ ಡೇಟಿಂಗ್‌ ಬಳಿಕ  ಮದ್ವೆಯಾದ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾದ ಎರಡೇ ದಿನಕ್ಕೆ ಪ್ರೆಗ್ನೆಂಟ್‌ ಆದ್ರಾ? ಕೊನೆಗೂ ಆಸ್ಪತ್ರೆ ರಹಸ್ಯ ಬಾಯ್ಬಿಟ್ಟ ನಟಿ ಏನಂದ್ರು?  
 


 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. 

ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ ಶತ್ರುಘ್ನಾ ಸಿನ್ಹಾ ಅವರಿಗೆ ಈ ವಿಷಯವನ್ನು ಕೇಳಲಾಗಿತ್ತು. ನಿಮ್ಮ ಮಗಳು ಅನ್ಯ ಧರ್ಮೀಯನೊಂದಿಗೆ ವಿವಾಹ ಆಗುತ್ತಿರುವುದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಆಗ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದ ನಟ ಅಚ್ಚರಿಯಿಂದ, ಹೌದಾ ಎಂದು ಪ್ರಶ್ನಿಸಿದ್ದರು.  'ನಾನು ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ನಾನು ಇಲ್ಲಿದ್ದೇನೆ. ನನ್ನ ಮಗಳ ಯೋಜನೆಗಳ ಬಗ್ಗೆ ನಾನು ಇನ್ನೂ ಮಾತನಾಡಿಲ್ಲ. ಅವಳು ಮದುವೆಯಾಗುತ್ತಿದ್ದಾಳಾ? ಅವಳು ನನಗೆ ಇನ್ನೂ ಏನನ್ನೂ ಹೇಳಿಲ್ಲ. ನಾನು ಮಾಧ್ಯಮಗಳಲ್ಲಿ ಓದಿದಷ್ಟು ಮಾತ್ರ ನನಗೆ ತಿಳಿದಿದೆ' ಎಂದಿದ್ದರು. ಮಗಳು ವಿಷಯವನ್ನು ತಿಳಿಸದೇ ಮದುವೆಯಾಗುತ್ತಿದ್ದಾಳೆ ಎಂದಾಗ ಅಪ್ಪನೊಬ್ಬನಿಗೆ ಆಗುವ ಆಘಾತ ಶತ್ರುಘ್ನ ಅವರಿಗೂ ಆಗಿತ್ತು. ಆದರೂ ಸಾವರಿಸಿಕೊಂಡು,  'ಅವಳು ಈ ಬಗ್ಗೆ ನನ್ನೊಂದಿಗೆ ಮಾತನಾಡುವಾಗ ವಿಷಯ ಹೇಳಲಿಲ್ಲ. ಆದರೆ ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವನಾ ನಾನು ಬಯಸುತ್ತೇನೆ' ಎಂದಿದ್ದರು  ಶತ್ರುಘ್ನಾ.

Tap to resize

Latest Videos

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​! ಫ್ರಿಜ್​ ಖರೀದಿ ಮಾಡ್ಬೇಡಿ ಅನ್ನೋದಾ ಟ್ರೋಲಿಗರು?

ಇದು ಬಿಸಿಬಿಸಿ ಸುದ್ದಿ ಹರಡುತ್ತಿರುವ ನಡುವೆಯೇ ಮದುವೆಯಾಗುತ್ತಿದ್ದಂತೆಯೇ ಜೋಡಿ ಆಸ್ಪತ್ರೆಗೆ ಹೋಗಿತ್ತು. ಇವರು ಆಸ್ಪತ್ರೆಗೆ ಹೋಗಿ ಹೊರಬರುತ್ತಲೇ ನಟಿ ಗರ್ಭಿಣಿ ಎನ್ನುವ ಸದ್ದು ಸೋಷಿಯಲ್‌ ಮೀಡಿಯಾದಲ್ಲಿ ಜೋರಾಗಿತ್ತು. ಇದಾಗಲೇ ಕೆಲವು ನಟಿಯರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರಿಂದ ಆರು ವರ್ಷಗಳ ಡೇಟಿಂಗ್‌ನ ಕಾರಣದಿಂದ ಸೋನಾಕ್ಷಿ ಗರ್ಭಿಣಿ ಎಂದೇ ಸುದ್ದಿಯಾಗಿತ್ತು. ಇದರ ಬಗ್ಗೆ ಸೋನಾಕ್ಷಿ ಈಗ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಮುಂಬರುವ ಚಿತ್ರ ಕಾಕುಡವನ್ನು ಪ್ರಚಾರ ಮಾಡುವಾಗ, ಸೋನಾಕ್ಷಿ ಮದುವೆಯ ನಂತರದ ಜೀವನದ ಕುರಿತು ಹೇಳಿದ್ದಾರೆ. ಮದುವೆಯ ನಂತರ ಜೀವನ ತುಂಬಾ ಚೆನ್ನಾಗಿದೆ.  ಕೆಲಸಕ್ಕೆ ಮರಳಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇದೇ ವೇಳೆ ಗರ್ಭಿಣಿ ಎನ್ನುವ ವಿಷಯದ ಕುರಿತೂ ಮಾತನಾಡಿದ ನಟಿ, ಮದುವೆಯಾದ ಮೇಲೆ ಒಂದೇ ಒಂದು ಬದಲಾವಣೆಯಾಗಿದೆ. ಅದೇನೆಂದರೆ,  ನಾನು ಈಗ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ನಾನು ಹೊರಬಂದ ತಕ್ಷಣ, ಜನರು ನಾನು ಗರ್ಭಿಣಿ ಎಂದು ಭಾವಿಸುತ್ತಾರೆ ಎಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದಾರೆ. ಈ ಮೂಲಕ ತಾವು ಗರ್ಭಿಣಿ ಅಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ಅಷ್ಟಕ್ಕೂ ನಟಿ ಆಸ್ಪತ್ರೆಗೆ ಹೋಗಿದ್ದು, ತಂದೆ ಶತ್ರುಘ್ನ ಸಿನ್ಹಾ ಅವರ ಆರೋಗ್ಯ ವಿಚಾರಿಸಲು ಎನ್ನಲಾಗಿದೆ. ಶತ್ರುಘ್ನ ಅವರು ಮಗಳ ಮದುವೆಯಲ್ಲಿ ಚೆನ್ನಾಗಿ ಓಡಾಟ ನಡೆಸಿದ್ದರೂ ಗುಟ್ಟಾದ ಮದುವೆ ಮತ್ತು ಟೀಕೆಗಳಿಂದ ನಟ ತುಂಬಾ ನೊಂದುಕೊಂಡಿದ್ದರು. ಇದರಿಂದ ಮದುವೆಯಾಗುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ನೋಡಲು ಜೋಡಿ ಹೋಗಿತ್ತು ಎನ್ನಲಾಗಿದೆ. ಈಗ ಶತ್ರುಘ್ನ ಸಿನ್ಹಾ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ. ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಅವರ ಪುತ್ರ ಹೇಳಿದ್ದಾರೆ. 
 

ಸೋನಾಕ್ಷಿ ಗಂಡನ 2,100 ಸಾಲ ಇನ್ನೂ ವಾಪಸ್​ ಕೊಡದ ಸಲ್ಮಾನ್​ ಖಾನ್​! ಇವರಿಬ್ಬರ ಹಿನ್ನೆಲೆಯೇ ಕುತೂಹಲ...

click me!