ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ ಮೀಯಾ ಚೋಟೆ ಮೀಯಾ ಚಿತ್ರ ನಿರ್ಮಿಸಲಾಗಿದೆ...
ಬಾಲಿವುಡ್‌ನ ಪವರ್-ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ (Akshay Kumar)ಮತ್ತು ಟೈಗರ್ ಶ್ರಾಫ್ (Tiger Shroff) ನಟನೆಯ 'ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಬಾಸ್ಕೊ-ಸೀಸರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಅಕ್ಕಿ-ಟೈಗರ್ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ವಿಶಾಲ್ ಮಿಶ್ರಾ ಧ್ವನಿಯಾಗಿರುವ ಟೈಟಲ್ ಟ್ರ್ಯಾಕ್ ಗೆ ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ. ಡೆಹರೂಡನ್ ನಲ್ಲಿ ಚಿತ್ರೀಕರಿಸಲಾಗಿರುವ ಹಾಡಿಗೆ 100ಕ್ಕೂ ಹೆಚ್ಚು ಡ್ಯಾನ್ಸರ್ಸ್ ಕುಣಿದು ಕುಪ್ಪಳಿಸಿದ್ದಾರೆ.
ಕನ್ನಡದಲ್ಲಿಯೂ ಹಾಡು ಮೂಡಿಬಂದಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ ಶಾಸ್ತ್ರಿ, ಅಭಿಷೇಕ್ ಎಂ ಆರ್ ಹಾಗೂ ಋಷಿಕೇಶ ಬಿ ಆರ್ ಧ್ವನಿ ನೀಡಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಲಯಾಂಳ ನಿರ್ದೇಶಕಿ ಅಂಜಲಿ ಮೆನನ್ ಜೊತೆ ಕೈ ಜೋಡಿಸಿದ ಕೆಆರ್‌ಜಿ ಸ್ಟುಡಿಯೋಸ್
ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ ಮೀಯಾ ಚೋಟೆ ಮೀಯಾ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ,ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.
'ಸಿಸಿಎಲ್'ಗೆ ದಿನಗಣನೆ, ಪ್ರಾಕ್ಟಿಸ್ ಶುರು; ಬಿಗ್ ಅಪ್ ಡೇಟ್ ಕೊಟ್ಟ ಕರ್ನಾಟಕ ಬುಲ್ಡೋಜರ್ಸ್ ತಂಡ
ವಶು ಭಗ್ನಾನಿ ಮತ್ತು ಪೂಜಾ ಎಂಟರ್ ಟೈನ್ಮೆಂಟ್ AAZ ಫಿಲ್ಮಂಸ್ ಸಹಯೋಗದಡಿ ಬಡೇ ಮಿಯಾ ಚೋಟೆ ಮೀಯಾ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಏಪ್ರಿಲ್ 2024 ಈದ್ ಈದ್ ಸಂದರ್ಭದಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ಉಪೇಂದ್ರ 'ಯುಐ' ಸಿನಿಮಾದಲ್ಲಿ ಸನ್ನಿ ಲಿಯೋನ್ ಕುಣಿಯುತ್ತಿಲ್ಲ, ನಟಿಸುತ್ತಿದ್ದಾರೆ; ಯಾಕೆ ಅಂತಿದಾರೆ ಏನ್ ಹೇಳೋದು!