ಒಂದು ಕಾಲದ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ಈಗ ಮಾಡ್ತಿರೋ ಕೆಲ್ಸ ನೋಡಿ!

Published : Aug 28, 2023, 12:19 PM IST
ಒಂದು ಕಾಲದ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ಈಗ ಮಾಡ್ತಿರೋ ಕೆಲ್ಸ ನೋಡಿ!

ಸಾರಾಂಶ

ಒಂದು ಕಾಲದಲ್ಲಿ ಸೊಂಟ ಬಳುಕಿಸಿ, ಮಾದಕ ಮೈಮಾಟದಿಂದ ಪಡ್ಡೆಗಳ ನಿದ್ದೆ ಕೆಡಿಸಿದ್ದ ಡಿಸ್ಕೋ ಶಾಂತಿ ಈಗ ಮಾಡ್ತಿರೋ ಕೆಲಸ ಏನ್ ಗೊತ್ತಾ?  

'ಆಕಾರದಲ್ಲಿ ಗುಲಾಬಿ ರಂಗಿದೆ, ಈ ಕಣ್ಣಿನಲ್ಲಿ ಶರಾಬು ಗುಂಗಿದೆ'

ಅಂಜದ ಗಂಡು ಸಿನಿಮಾದಲ್ಲಿ ವಿಲನ್ ವಜ್ರಮುನಿ ಎದುರು ಮಾದಕವಾಗಿ ಕುಣಿಯೋ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ನೆನೆದರೆ ಆ ಕಾಲದವರ ಮುಖ ಈಗಲೂ ಕೆಂಪಾಗುತ್ತೆ. ಅಂಥಾ ಮಾದಕ ಡ್ಯಾನ್ಸ್ ಡಿಸ್ಕೋ ಶಾಂತಿ ಅವರದು. ಅನೇಕ ಕನ್ನಡ ಸಿನಿಮಾಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಆಗಿ ಫೇಮಸ್ ಆದ ಡಿಸ್ಕೋ ಶಾಂತಿ ಕನ್ನಡದ ಜೊತೆಗೆ ತಮಿಳು, ತೆಲುಗು ಮಲಯಾಳಂ, ತೆಲುಗು, ಒಡಿಯಾ ಮೊದಲಾದ ಭಾಷೆಗಳಲ್ಲಿ ಕ್ಯಾಬರೆ ನಟಿಯಾಗಿ ಗುರುತಿಸಿಕೊಂಡವರು. ಇಂಥಾ ನಟಿಯರ ಲೈಫು ಕರಾಳವಾಗಿರುತ್ತೆ, ಅವರ ಬದುಕಿನಲ್ಲಿ ನೋವೇ ತುಂಬಿರುತ್ತೆ ಅಂತೆಲ್ಲ ಅಂದುಕೊಂಡಿರ್ತೀವಿ. ಆದರೆ ಡಿಸ್ಕೊ ಶಾಂತಿ ಇದಕ್ಕೆ ಅಪವಾದ. ಈಗ ಅವರ ಫೋಟೋವನ್ನು ನೀವು ನೋಡಿದರೆ ಒಬ್ಬ ಸಂನ್ಯಾಸಿಯಂತೆ ಕಾಣುತ್ತಾರೆ. ಅಷ್ಟು ಪ್ರಶಾಂತ ಭಾವ, ನಿರ್ಮಲತೆ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಅಷ್ಟಕ್ಕೂ ಈ ಹೆಣ್ಣುಮಗಳ ಬದುಕಲ್ಲಿ ನೋವೇ ಇರಲಿಲ್ಲವಾ? ಈ ನಟಿ ಈಗ ಏನು ಮಾಡ್ತಿದ್ದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ.

ಶಾಂತ ಕುಮಾರಿ! ಹೀಗಂದರೆ ಯಾರಿಗೂ ಅರ್ಥ ಆಗಲ್ಲ. ಅದೇ 'ಡಿಸ್ಕೋ ಶಾಂತಿ' ಒಂದು ಏಜ್‌ಗ್ರೂಪ್‌ನವರ ಎದೆಬಡಿತ ಹೆಚ್ಚಾಗುತ್ತದೆ. ಇಂತಿಪ್ಪ ಡಿಸ್ಕೊ ಶಾಂತಿ ಜನಿಸಿದ್ದು 1965ರ ಆಗಸ್ಟ್ 28ರಂದು. ಈಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದೀ ಮತ್ತು ಒಡಿಯಾ ಭಾಷೆಗಳ ಸುಮಾರು 900 ಚಿತ್ರಗಳಲ್ಲಿ ಐಟಮ್ ನಂಬರ್ ಎನ್ನುವ ಹಾಡುಗಳಿಗೆ ನರ್ತಿಸಿದವವರು. ಇಂಥವರನ್ನ ಯಾರು ಮದುವೆ ಆಗ್ತಾರೆ ಅನ್ನೋ ಹಾಗಿಲ್ಲ. 1996ರಲ್ಲಿ ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿಯನ್ನು ಮದುವೆಯಾದರು. ಆಮೇಲೆ ಶಾಂತಿ ಅವರಿಗೆ ಈ ಕ್ಯಾಬರೆ ಡ್ಯಾನ್ಸ್ ಬೇಡವೆನಿಸಿತು. ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟರು. ಈ ದಂಪತಿಗೆ ಎರಡು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಳು. ಆದರೆ ಮಗಳು ಅಕ್ಷರಾ ಹುಟ್ಟಿ ನಾಲ್ಕು ತಿಂಗಳಿಗೆ ತೀರಿಕೊಂಡಳು. ಇವಳ ನೆನಪಿನಲ್ಲಿ ಶಾಂತಿ ಅವರ ಕುಟುಂಬ ಅಕ್ಷರಾ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಹಳ್ಳಿಗಳಿಗೆ ಶುದ್ಧ ನೀರು ಮತ್ತು ಶಾಲೆಗೆ ಬೇಕಾದ ಸೌಕರ್ಯ ನೀಡುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಶ್ವಾಸಕೋಶ ತೊಂದರೆಗೊಳಗಾದ ಶ್ರೀಹರಿ ನಟಿಸುತ್ತಿರವ ಸೆಟ್ನಲ್ಲೇ 2013ರಲ್ಲಿ ನಿಧನರಾದರು.

ಕೆಜಿಎಫ್​-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್​ ಕಹಾನಿ ಗದರ್-2: ಕಲೆಕ್ಷನ್​ ಎಷ್ಟು ಗೊತ್ತಾ?

ಗಂಡನನ್ನು ಕಳೆದುಕೊಂಡ ಮೇಲೆ ಶಾಂತಿ ಸಿಕ್ಕಾಪಟ್ಟೆ ಮದ್ಯವ್ಯಸನಿಯಾಗಿದ್ದರು. ತದನಂತರದಲ್ಲಿ ಮಕ್ಕಳಿಗಾಗಿ ಕುಡಿಯುವನ್ನು ಬಿಟ್ಟರಂತೆ.

ಹೈದ್ರಾಬಾದ್ ಸಮೀಪ ಮೆಡ್ಚಲ್ ಎಂಬ ಜಿಲ್ಲಾಕೇಂದ್ರವಿದೆ. ತೆಲಂಗಾಣ ರಾಜ್ಯಕ್ಕೆ ಸೇರುವ ಈ ಕೇಂದ್ರದ ಸುತ್ತಮುತ್ತ ಅನೇಕ ಹಳ್ಳಿಗಳಿವೆ. ಅಲ್ಲಿನ ನಾಲ್ಕು ಹಳ್ಳಿಗಳನ್ನು (Village) ಡಿಸ್ಕೋ ಶಾಂತಿ ಕುಟುಂಬ ದತ್ತು ಪಡೆದಿದೆ.

ಡಿಸ್ಕೋ ಶಾಂತಿ ಮಕ್ಕಳ ಹೆಸರು ಮೇಘಶ್ಯಾಂ ಮತ್ತು ಶಶಾಂಕ್. ಮೇಘಶ್ಯಾಂ ಸಿನಿಮಾದಲ್ಲಿ (movies)  ನಟಿಸುತ್ತಿದ್ದಾರೆ.

ಒಟ್ಟಾರೆ ಕ್ಯಾಬರೆ ನರ್ತಕಿ ಅಂದಕೂಡಲೇ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಆದರೆ ಡಿಸ್ಕೋ ಶಾಂತಿಯಂಥಾ ಅನೇಕರು ಅದನ್ನೊಂದು ಕಲಾ ಪ್ರಕಾರ ಎಂದೇ ತಿಳಿದು ಆ ಡ್ಯಾನ್ಸ್‌ನಲ್ಲಿ (dance) ತಮ್ಮನ್ನು ತೊಡಗಿಸಿಕೊಂಡಿದ್ದರು. ಅದು ಅವರಿಗೆ ದುಡಿಮೆಯೂ ಆಗಿತ್ತು. ಈಗೀಗ ಸುಪ್ರಸಿದ್ಧ ನಾಯಕಿಯರೂ ಐಟಂ ನಂಬರ್‌ಗಳಲ್ಲಿ (item number) ಮೈ ಕುಣಿಸುತ್ತಾರೆ. ಅದೊಂದು ಡ್ಯಾನ್ಸ್‌ ಫಾರ್ಮ್ ಆಗಿದೆ. ಆದರೆ ಹಿಂದೆ ಇಂಥಾ ಡ್ಯಾನ್ಸ್ ಮಾಡುವ ನರ್ತಕಿಯರನ್ನು ಬೇರೆ ಥರ ನಡೆಸಿಕೊಳ್ಳಲಾಗಿತ್ತು. ಅಂಥಾ ಸಮಸ್ಯೆಗಳಿಂದ ಹೊರಬಂದು ಸಾಮಾನ್ಯರಂತೆ ಸಾಂಸಾರಿಕ ಬದುಕು ಕಂಡ ಶಾಂತಿ ತನ್ನನ್ನು ಹೀಗೆಳೆದ ಸಮಾಜಕ್ಕೇ ತನ್ನಿಂದಾದ ಸಹಾಯ ಮಾಡುತ್ತಿದ್ದಾರೆ. ಇದೇ ಅಲ್ವಾ ಮಾನವೀಯತೆ ಅಂದ್ರೆ..

ಪವನ್​ ಕಲ್ಯಾಣ್​, ಸಮಂತಾ, ಜಿರಂಜೀವಿ ಪುತ್ರಿಗೆ ಇನ್ನೆಷ್ಟು ಮದ್ವೆ? ಜ್ಯೋತಿಷಿ ವೇಣು ಸ್ವಾಮಿ ರಿವೀಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರಲ್ಲಿ ಸಿನಿಮಾ ಇಲ್ಲದಿದ್ದರೂ ಪ್ರಭಾಸ್ ಕ್ರೇಜ್ ಟಾಪ್: 4000 ಕೋಟಿ ಬ್ಯುಸಿನೆಸ್ ಮಾಡುತ್ತಿರುವ ರೆಬೆಲ್ ಸ್ಟಾರ್!
ಅವಕಾಶ ಕಳೆದುಕೊಳ್ಳುವ ಭಯ ನನ್ನನ್ನು ಕಾಡಿತ್ತು: ಸೋಲಿನ ಭೀತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ