ಮಲೈಕಾ ಮತ್ತು ಅರ್ಜುನ್ ಕಪೂರ್ ಬೇರ್ಪಟ್ಟಿರುವುದಾಗಿ ಕೆಲವು ದಿನಗಳಿಂದ ಕೇಳಿಬರುತ್ತಿರುವ ವದಂತಿಗೆ ತೆರೆ ಎಳೆದಿರುವ ಜೋಡಿ ಒಟ್ಟಾಗಿ ಲಂಚ್ ಡೇಟಿಂಗ್ನಲ್ಲಿ ಕಾಣಿಸಿಕೊಂಡಿದೆ.
ಕಳೆದ ಕೆಲವು ದಿನಗಳಿಂದ ಜಾಲತಾಣದಲ್ಲಿ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಅವರ ಸೆಪರೇಷನ್ನ್ನದ್ದೇ ಸುದ್ದಿ. ಇವರಿಬ್ಬರೂ ಬೇರೆಬೇರೆಯಾಗಿದ್ದಾರೆ ಎನ್ನುವ ವಿಷಯ ದೊಡ್ಡಮಟ್ಟಿನ ಚರ್ಚೆಗೆ ಗ್ರಾಸವಾಗಿತ್ತು. ಹಾಟೆಸ್ಟ್ ಜೋಡಿ ಎಂದೇ ಕರೆಸಿಕೊಳ್ಳುತ್ತಿದ್ದ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್ಕೇರ್ ಎನ್ನದೇ ಜೀವನ ನಡೆಸುತ್ತಿದ್ದಾರೆ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ ಟ್ರಿಪ್ಗೆ ಹೋಗುತ್ತಿದ್ದ ಅರ್ಜುನ್ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ.
ಇದು ಒಂದೆಡೆಯಾದರೆ, ಇತ್ತ ಕೆಲವು ದಿನಗಳಿಂದ ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ಥಳುಕು ಹಾಕಿಕೊಂಡಿದೆ. ಕುಶಾ ಜೊತೆ ಅರ್ಜುನ್ ಕಪೂರ್ (Arjun Kapoor) ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಯಸ್ಸಿನಲ್ಲಿ ಅತಿ ದೊಡ್ಡವರಾಗಿರುವ ಮಲೈಕಾ ಜೊತೆ ಹಲವಾರು ವರ್ಷಗಳಿಂದ ಡೇಟಿಂಗ್ ಮಾಡಿ ದೇಶ-ವಿದೇಶ ಸುತ್ತಿದ ಅರ್ಜುನ್ ಕಪೂರ್‌ಗೆ ಈಗ ಜ್ಞಾನೋದಯ ಆಯ್ತಾ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ. ಈಗ ಚಿಕ್ಕ ವಯಸ್ಸಿನ ಕುಶಿ ಜೊತೆ ಹೆಸರು ಕೇಳಿಬರುತ್ತಿದ್ದಂತೆಯೇ ಅವರಿಬ್ಬರ ಸುದ್ದಿ ಸಕತ್ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರ ಹೆಸರು ಥಳಕು ಹಾಕಲು ಕಾರಣ ಏನೆಂದರೆ, ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಲ್ಲಿ ಮಲೈಕಾ ಅರೋರಾ ಬಂದಿರಲಿಲ್ಲ. ಅಷ್ಟೇ ಅಲ್ಲದೇ, ಅರ್ಜುನ ಕಪೂರ್ ಸೋಲೋ ಟ್ರಿಪ್ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಈ ರೂಮರ್ಸ್ ಹರಡಲಾಗುತ್ತಿದೆ.
ಅರ್ಜುನ್ ಕಪೂರ್‌ಗೆ ಮಲೈಕಾ ಸಹವಾಸ ಸಾಕಾಯ್ತಾ? ನಟಿ ಕುಶಾ ಜೊತೆ ಏನಿದು ವಿಷ್ಯ?
ಇದೂ ಸಾಲದು ಎಂಬಂತೆ ನಿನ್ನೆಯಷ್ಟೇ ಮಲೈಕಾ ಅವರು, ಅರ್ಜುನ್ ಕಪೂರ್ ಅವರನ್ನು ಹೊರತುಪಡಿಸಿ ಕಪೂರ್ ಫ್ಯಾಮಿಲಿಯ ಕೆಲವೊಂದು ಸದಸ್ಯರನ್ನು ಸೋಷಿಯಲ್ ಮೀಡಿಯಾದಿಂದ ಅನ್ಫಾಲೋ ಮಾಡಿದ್ದರು. ಇದು ಕೂಡ ಸಾಕಷ್ಟು ಗಾಳಿ ಸುದ್ದಿ ಹರಡುವುದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕುತೂಹಲ ಎನ್ನುವಂತೆ ಇವರಿಬ್ಬರೂ ಹೋಟೆಲ್ಗೆ ಡೇಟಿಂಗ್ಗೆ ಹೋಗಿದ್ದು, ಅದರಿಂದ ಹೊರಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಮೂಲಕ ಕೆಲ ದಿನಗಳಿಂದ ಹರಿದಾಡುತ್ತಿರುವ ಗಾಸಿಪ್ಗೆ ಜೋಡಿ ಬ್ರೇಕ್ ಹಾಕಿದೆ. ತಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಜೋಡಿ ಮಾತಿನ ಮೂಲಕವಲ್ಲದೇ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟಿದೆ. ಇದು ಡ್ರಾಮಾ ಇದ್ದರೂ ಇರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಈ ಜೋಡಿ ಬೇರೆಯಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಇನ್ನು ಕೆಲವರು.
ಅರ್ಜುನ್ ಕಪೂರ್ ಫ್ಯಾನ್ಸ್ ಅಂತೂ ಕೊನೆಗೂ ನಿಮ್ಗೆ ಬುದ್ಧಿ ಬಂದು ಆಂಟಿಯನ್ನು ಬಿಟ್ಟು ಹುಡುಗಿ ಹಿಂದೆ ಹೋದ್ರಿ ಎಂದುಕೊಂಡ್ರೆ ಆಂಟಿಯನ್ನು ಬಿಡಲು ರೆಡಿನೇ ಇಲ್ವಾ ಅಂತ ಕಾಲೆಳೆಯುತ್ತಿದ್ದಾರೆ. ಅದೇ ಇನ್ನೊಂದೆಡೆ, ಕುಶಾ ಕಪಿಲಾ (Kusha Kapila) ಅವರು ತಮ್ಮ ಮತ್ತು ಅರ್ಜುನ್ ಕಪೂರ್ ಸಂಬಂಧದ ಕುರಿತು ಗಾಳಿ ಸುದ್ದಿ ಹರಡುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು. ಸುದ್ದಿಯಿಂದ ಅಸಮಾಧಾನ ಹಾಗೂ ಆಕ್ರೋಶಗೊಂಡಿರುವ ನಟಿ, ಈ ರೀತಿಯ ಸುದ್ದಿ ಹರಡಲು ನಾಚಿಕೆ ಆಗಲ್ವಾ ಎಂದು ಕೇಳುತ್ತಿದ್ದಾರೆ. ದಿನನಿತ್ಯವೂ ಅಸಹ್ಯ ಸುದ್ದಿಗಳನ್ನು ಕೇಳಿ ಕೇಳಿ ನನಗೂ ಸಾಕಾಗಿ ಹೋಗಿದೆ. ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆಯನ್ನು ನನ್ನ ಮುಂದೆ ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯವಾಗಿ ಚರ್ಚಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿರುವ ಕುಶಾ, ನನ್ನ ಅಮ್ಮ ಏನಾದರೂ ಈ ಸುದ್ದಿಗಳನ್ನು ನೋಡಿದರೆ ಅಷ್ಟೇ. ಅವರಿಗೆ ಎಷ್ಟು ನೋವಾಗುತ್ತದೆ ಎಂದಿದ್ದಾರೆ. ದಯವಿಟ್ಟು ಇಂಥ ರೂಮರ್ಸ್ ಹರಡುವುದನ್ನು ನಿಲ್ಲಿಸಿ ಎಂದಿದ್ದಾರೆ.
ಮಲೈಕಾ- ಅರ್ಜುನ್ ನೈಟ್ ಔಟ್: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!