ಶಾಹಿದ್ ಕಪೂರ್ ಸಹೋದರನ ನಿರ್ಲಕ್ಷಿಸಿದ ನಾಗ ಚೈತನ್ಯ ಗರ್ಲ್‌ಫ್ರೆಂಡ್; ರ್ಯಾಂಪ್ ವಾಕ್ ವಿಡಿಯೋ ವೈರಲ್

Published : Jul 30, 2023, 06:31 PM IST
ಶಾಹಿದ್ ಕಪೂರ್ ಸಹೋದರನ ನಿರ್ಲಕ್ಷಿಸಿದ ನಾಗ ಚೈತನ್ಯ ಗರ್ಲ್‌ಫ್ರೆಂಡ್; ರ್ಯಾಂಪ್ ವಾಕ್ ವಿಡಿಯೋ ವೈರಲ್

ಸಾರಾಂಶ

ರ್ಯಾಂಪ್ ವಾಕ್ ಮಾಡುವಾಗ ಶಾಹಿದ್ ಕಪೂರ್ ಸಹೋದರನ್ನೂ ನಿರ್ಲಕ್ಷಿಸಿದ ನಾಗ ಚೈತನ್ಯ ಗರ್ಲ್‌ಫ್ರೆಂಡ್ ಶೋಭಿತಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  

ಬಹುಭಾಷಾ ನಟಿ, ತೆಲುಗು ಸ್ಟಾರ್ ನಾಗಚೈತನ್ಯ ಗರ್ಲ್‌ಫ್ರೆಂಡ್ ಎಂದೇ ಗುರುತಿಸಿಕೊಂಡಿರುವ ನಟಿ ಶೋಭಿತಾ ಧೂಳಿಪಾಲ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಶೋಭಿತಾ ಮುಂಬೈನಲ್ಲಿ ನಡೆದ ಫ್ಯಾಷನ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಇಂಡಿಯಾ ಕೌಚರ್ ವೀಕ್ 2023  

ಇಂಡಿಯಾ ಕೌಚರ್ ವೀಕ್ 2023 ರಲ್ಲಿ ಸೋಭಿತಾ ಧೂಳಿಪಾಲ ರ್ಯಾಂಪ್ ವಾಕ್ ಮಾಡಿದ್ದಾರೆ. ಶೋಭಿತಾ ಜೊತೆಗೆ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಕೂಡ ಭಾಗಿಯಾಗಿದ್ದರು. ಇಬ್ಬರೂ ಫ್ಯಾಷನ್ ಡಿಸೈನರ್‌ಗಳಾದ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಡಿಸೈನ್ ಮಾಡಿದ್ದ ಡ್ರೆಸ್ ಧರಿಸಿ ವಾಕ್ ಮಾಡಿದ್ದಾರೆ. ಅಂದಹಾಗೆ ಇಬ್ಬರೂ ಶೋಸ್ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಫ್ಯಾಶನ್ ಡಿಸೈನರ್ ಜೋಡಿಯ ಹೊಸ ಕಲೆಕ್ಷನ್ ಉಡುಪನ್ನು ಧರಿಸಿ ರಾಂಪ್‌ನಲ್ಲಿ ನಡೆದು ಅಭಿಮಾನಿಗಳನ್ನು ಬೆರಗುಗೊಳಿಸುತ್ತದೆ. 

ಅಂದಹಾಗೆ ಇಬ್ಬರ ಡ್ರೆಸ್ ಜೊತೆಗೆ ವಿಡಿಯೋ ಶೋಭಿತಾ ನಿರ್ಲಕ್ಷ್ಯ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಶೋಭಿತಾ ಜೊತೆಗೆ ಇಶಾಣ್ ಕೂಡ ರ್ಯಾಂಪ್ ಮೇಲೆ ವಾಕ್ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ನಡೆದುಕೊಂಡು ಬಂದರು. ಆದರೆ ಇಶಾನ್ ಪಕ್ಕದಲ್ಲೇ ಇದ್ದ ಶೋಭಿತರನ್ನು ನೋಡಿ ಲುಕ್ ಕೊಟ್ಟರು. ಆದರೆ ಶೋಭಿತಾ ನೋಡಿದರು ನೋಡದ ಹಾಗೆ ನಡೆದುಕೊಂಡು ಹೋದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಶಾನ್‌ನನ್ನು ನಿರ್ಲಕ್ಷ್ಯ ಮಾಡಿದ್ರು ಎನ್ನುವ ಸುದ್ದಿ ವೈರಲ್ ಆಗಿದೆ. 

ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ Sobhita Dhulipala

ಈ ವಿಡಿಯೋ ನೋಡಿದ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ಸೋಭಿತಾ ಇಶಾನ್ ಅವರನ್ನು ನಿರ್ಲಕ್ಷಿಸಿದಂತೆ ನಾನು ನನ್ನ ಜೀವನದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೇನೆ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಶೋಭಿತಾ ಏಕೆ ಕೋಪ ಮಾಡಿಕೊಂಡಿದ್ದಾರೆ' ಎಂದು ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಇಶಾನ್, ಶೋಭಿತಾ ಬಟ್ಟೆ ಮೇಲೆ ಕಾಲಿಟ್ಟಿದ್ದಕ್ಕೆ ಕೋಪ ಮಾಡಿಕೊಂಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

ಸಾವಿನ ಪುಸ್ತಕಗಳನ್ನು ಓದಿರುವೆ, ಬಾಂಬೆಗೆ ಬಂದು ಕೂದಲು ಕತ್ತರಿಸಿದೆ: ನಟಿ ಶೋಭಿತಾ ಧೂಳಿಪಾಲ

ಇನ್ನು ಕೆಲವರು ಇಶಾನ್ ಪರ ಮಾತನಾಡಿದ್ದಾರೆ. ಒಮ್ಮೆಯಾದರು ನೋಡಬಹುದಿತ್ತು. ಇದು ತುಂಬಾ ಅವಮಾನಕರವಾಗಿದೆ ಎಂದು ಹೇಳಿದ್ದಾರೆ. ಇಷ್ಟಾದರೂ ಕಾರ್ಯಕ್ರಮದ ಕೊನೆಯಲ್ಲಿ ಇಬ್ಬರೂ ಫ್ಯಾಷನ್ ಡಿಸೈನರ್‌ಗಳಾದ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಜೊತೆ ನಿಂತು ನಗುತ್ತಾ ಪೋಸ್ ಕ್ಯಾಮರಾಗೆ ಪೋಸ್ ನೀಡಿದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ-ವಿಜಯ್ ಹನಿಮೂನ್ ರೊಮಾನ್ಸ್ ವಿಡಿಯೋ ವೈರಲ್.. ಖಾಸಗಿ ಕ್ಷಣಗಳ ಖುಷಿಯನ್ನೂ ಫ್ಯಾನ್ಸ್‌ಗೆ ಹಂಚಿದ ಜೋಡಿ!
Dhurandhar 2 : ಸಿಖ್ ಸಂಘಟನೆಯಿಂದ 'ಧುರಂಧರ್​ 2' ವಿರುದ್ಧ FIR; ನಟ ಮಾಧವನ್ ಕೊಟ್ಟ ಸ್ಪಷ್ಟನೆ ಏನು?