ಅಬ್ಬಾ..! ಬರೋಬ್ಬರಿ 3 ಕೋಟಿ ರೂಪಾಯಿ ಬ್ಯಾಗ್ ಹಿಡಿದು ಬಂದ ಖ್ಯಾತ ನಟಿ: ಏನಿದೆ ಅದರಲ್ಲಿ?

Published : Jul 30, 2023, 05:14 PM IST
ಅಬ್ಬಾ..! ಬರೋಬ್ಬರಿ 3 ಕೋಟಿ ರೂಪಾಯಿ ಬ್ಯಾಗ್ ಹಿಡಿದು ಬಂದ ಖ್ಯಾತ ನಟಿ: ಏನಿದೆ ಅದರಲ್ಲಿ?

ಸಾರಾಂಶ

ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಬ್ಯಾಗ್ ಹಿಡಿದು ಖ್ಯಾತ ನಟಿ  ಕಿಮ್​ ಕರ್ದಾಶಿಯನ್​ ಅಚ್ಚರಿ ಮೂಡಿಸಿದ್ದಾರೆ. ಫುಟ್​ಬಾಲ್​ ಪಂದ್ಯ ನೋಡಲು ಕೋಟಿ  ಬೆಲೆಯ ಬ್ಯಾಗ್ ಹಿಡಿದು ಬಂದಿದ್ದರು. 

ಅಮೆರಿಕದ ಖ್ಯಾತ ನಟಿ, ಮಾಡೆಲ್​, ಉದ್ಯಮಿ ಕಿಮ್​ ಕರ್ದಾಶಿಯನ್​ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ ಕಿಮ್ ಹೆಚ್ಚು ಗಮನ ಸೆಳೆದಿರುವುದು ಫ್ಯಾಷನ್​ ಹಾಗೂ ಬಾಯ್‌ಫ್ರೆಂಡ್​ ವಿಚಾರಕ್ಕೆ.  ಸದಾ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಳ್ಳುವ ಕಿಮ್​ ಕರ್ದಾಶಿಯನ್​ ಏನು ಧರಿಸುತ್ತಾರೆ? ಅವರ ಕಲೆಕ್ಷನ್​ ಏನು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಇದೆ. ಫ್ಯಾಷನ್​ ವಿಚಾರದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಇರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಕಿಮ್ ಕರ್ದಾಶಿಯನ್​ ದುಬಾರಿ ಬ್ಯಾಗ್ ಹಿಡಿದು ಸುದ್ದಿಯಾಗಿದ್ದಾರೆ. ವಿಶೇಷ ಎಂದರೆ ಈ ಬ್ಯಾಗ್ ಪ್ರಪಂಚದ ಅತಿ ದುಬಾರಿ ಹ್ಯಾಂಡ್​ಬ್ಯಾಗ್​  ಆಗಿದೆಯಂತೆ. ಇದರ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿಗೂ ಹೆಚ್ಚು.

ಇತ್ತೀಚೆಗೆ ಕಿಮ್​ ಕರ್ದಾಶಿಯನ್​ ಜಪಾನ್​ಗೆ ತೆರಳಿದ್ದರು. ಫುಟ್​ಬಾಲ್​ ಪಂದ್ಯ ನೋಡಲು ಬಂದಿದ್ದ ಕಿಮ್​ ಒಂದು ಬ್ಯಾಗ್​ ಹಿಡಿದುಕೊಂಡಿದ್ದರು. ಸಿಲ್ವರ್ ಬಣ್ಣದ ಬ್ಯಾಗ್​ನ ಫೋಟೋ ವೈರಲ್​ ಆಗಿದೆ. ಅದರ ಬೆಲೆ ಬರೋಬ್ಬರಿ 3 ಕೋಟಿ 12 ಲಕ್ಷದ 61 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಕೇಳಿ ನೆಟ್ಟಿಗರು ಹೌಹಾರಿದ್ದಾರೆ. ಆ ಚಿಕ್ಕ ಬ್ಯಾಗ್‌ಗೆ ಅಷ್ಟು ಕೊಟ್ಟಿದ್ದಾರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ನಟಿಯ ಶ್ರೀಮಂತಿಕೆ ನೋಡಿ ಜನರು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಇದು ಎಂಥ ಬ್ಯಾಗ್​? ಇದರಲ್ಲಿ ಅಂಥ ವಿಶೇಷತೆ ಏನಿದೆ ಎಂದು ಇಂಟರ್​ನೆಟ್​ನಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಹೊಟ್ಟೆ ದಪ್ಪ ಆಗದಂತೆ ಸರ್ಜರಿ ಮಾಡಿಸಿಕೊಂಡ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್

ಅಂದಹಾಗೆ ಇದು ಪ್ರತಿಷ್ಠಿತ ಹರ್ಮೆಸ್​ ಕಂಪನಿಯ ಬ್ಯಾಗ್​. ಇದರಲ್ಲಿ ಬಂಗಾರ ಮತ್ತು ವಜ್ರದಿಂದ ಮಾಡಿದ ವಿನ್ಯಾಸ ಇದೆ. ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಈ ಬ್ಯಾಗ್‌ನ ಮಾಲಿಕರಾಗಿದ್ದಾರೆ. ಅಂಥ ಎಕ್ಸ್​ಕ್ಲೂಸೀವ್​ ಗ್ರಾಹಕರಿಗಾಗಿ ಮಾತ್ರ ಇದನ್ನು ತಯಾರಿಸಲಾಗಿದೆ. ಈ ಹ್ಯಾಂಡ್​ಬ್ಯಾಗ್​ ಹೊಂದಿರುವುದೇ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಹಾಗಾಗಿ ಕೆಲವು ಸೆಲೆಬ್ರಿಟಿಗಳು ಇದನ್ನು ಖರೀದಿಸಿದ್ದಾರೆ. ಈಗಾಗಲೇ ಎಲ್ಲಾ ಬ್ಯಾಗ್​ಗಳು ಸೋಲ್ಡ್​ ಔಟ್​ ಆಗಿವೆ. ಬೇಕು ಎಂದರೂ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.

ಕಿಮ್ ಕಾರ್ಡಶಿಯಾನ್ ಮನೇಲಿ ದೆವ್ವ, ನಾನಾದರೂ ಆ ಆತ್ಮ ಆಗಬಾರದಿತ್ತಾ ಅಂತಿದ್ದಾರೆ ಫ್ಯಾನ್ಸ್!

ಸೆಲೆಬ್ರಿಟಿಗಳು ಯಾವಾಗಲೂ ವಿಶೇಷವಾದುದ್ದನ್ನು, ಅತ್ಯಂತ ದುಬಾರಿ ಮಸ್ತುಗಳನ್ನು ಹೊಂದಲು ಇಷ್ಟಪಡುತ್ತಾರೆ. ತಮ್ಮ ಬಳಿಯೇ ವಿಶೇಷವಾಗಿ ಇರಬೇಕು ಎನ್ನುವುದು ಅವರ ಆಸೆ. ಕಿಮ್​ ಕರ್ದಾಶಿಯನ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 363 ಮಿಲಿಯನ್​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕಿಮ್ ಬ್ಯಾಗ್ ಈಗ ಅಭಿಮಾನಿಗಳನ್ನು ಅಚ್ಚರಿ ಪಡಿಸಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?