ಮೇಕಪ್​ಮ್ಯಾನ್​ ಮಾಡಿದ ಅವಮಾನ ನೆನೆದ ಸಚಿವೆ ಸ್ಮೃತಿ ಇರಾನಿ

Published : Mar 27, 2023, 02:58 PM IST
ಮೇಕಪ್​ಮ್ಯಾನ್​ ಮಾಡಿದ ಅವಮಾನ ನೆನೆದ ಸಚಿವೆ ಸ್ಮೃತಿ ಇರಾನಿ

ಸಾರಾಂಶ

ಸಚಿವೆ ಸ್ಮೃತಿ ಇರಾನಿಯವರು ತಾವು ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಮಯದಲ್ಲಿನ ನೋವಿನ ದಿನಗಳನ್ನು ಹೇಳಿಕೊಂಡಿದ್ದಾರೆ. ಅವರು ಹೇಳಿದ್ದೇನು?   

ನಟಿ ಕಮ್ ರಾಜಕಾರಣಿ ಸ್ಮೃತಿ ಇರಾನಿ (Smriti Irani) ಅವರು ಕಳೆದ ವಾರವಷ್ಟೇ  47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಬದುಕಿನ ಹಲವು ರೋಚಕ ಘಟನೆಗಳು ಒಂದೊಂದಾಗಿ ಹೊರಕ್ಕೆ ಬರುತ್ತಿವೆ.  ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಸುಮಾರು ಎಂಟು ವರ್ಷಗಳವರೆಗೆ ಅಭಿನಯಿಸಿ ಮನೆ ಮಾತಾಗಿದ್ದ ಸ್ಮೃತಿ ಅವರು ಇಂದು ಇಡೀ ದೇಶವೇ ಹೆಮ್ಮೆ ಪಡುವಂಥ ರಾಜಕಾರಣಿಯಾಗಿ ಬೆಳೆದಿದ್ದಾರೆ.   ಜೀ ಟಿವಿಯ 'ರಾಮಾಯಣ' ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಸೀತೆ ಪಾತ್ರದಲ್ಲಿ ನಟಿಸಿದ್ದರು. ವಿರುದ್ಧ್, ಮೇರೆ ಅಪ್ನೆ, ತೀನ್ ಬಹುರಾಯಿಯಾನ್ ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ನಿರೂಪಕಿಯಾಗಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡವರು,  ಒಂದಷ್ಟು ನಾಟಕಗಳಲ್ಲಿಯೂ ನಟಿಸಿದ್ದಾರೆ. ಬಿಜೆಪಿಯ ಮಹಿಳಾ ಘಟಕದಲ್ಲಿ ಕೆಲಸ ಮಾಡಿದ ಅವರು ನಂತರ ಗುಜರಾತಿನಿಂದ ರಾಜ್ಯಸಭೆಗೆ (Rajya Sabha) ಆಯ್ಕೆಯಾದರು.  2014 ರಿಂದ 2016ರ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು. ಪ್ರಸ್ತುತ ಕೇಂದ್ರ ಸರ್ಕಾರದ  ಜವಳಿ ಖಾತೆ ಸಚಿವರಾಗಿದ್ದಾರೆ. 

ಈಗ ಅವರು ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿ (Serial) ಸಂದರ್ಭದಲ್ಲಿ ತಮಗೆ ಗರ್ಭಪಾತವಾಗಿ ರಕ್ತಸ್ರಾವವಾಗುತ್ತಿದ್ದರೂ, ಶೂಟಿಂಗ್​ಗೆ ಬರಲು ಸಾಧ್ಯವಿಲ್ಲ ಎಂದಾಗ ಅಲ್ಲಿದ್ದ ಕೆಲ ಕಲಾವಿದರ ತಮ್ಮನ್ನು ಎಷ್ಟು ಕೆಟ್ಟಿದ್ದಾಗಿ ನಡೆಸಿಕೊಂಡರು, ನಾನು ಸುಳ್ಳು ಹೇಳುತ್ತಿದ್ದೇನೆ ಎಂದಿರುವ ವಿಷಯವನ್ನು ಅವರು ತಿಳಿಸಿದ್ದರು. 'ನನ್ನ ಮನೆಗೆ EMI ಗಳನ್ನು ಪಾವತಿಸಲು ನನಗೆ ಹಣದ ಅಗತ್ಯವಿದ್ದುದರಿಂದ ನಾನು ಮತ್ತೆ ಕೆಲಸಕ್ಕೆ ಹೋಗಿದ್ದೆ ಎಂದು ಅವರಿಗೆ ತಿಳಿದಿರಲಿಲ್ಲ. ಮರುದಿನ, ಇದು ಸುಳ್ಳು ಅಲ್ಲ ಎಂದು ಹೇಳಲು ನಾನು ಏಕ್ತಾಗೆ ನನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಬೇಕಾಗಿ ಬಂದಿತು ಎಂದು ಹೇಳಿದರು.

ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ

ಇದೀಗ ಅವರು ಇಂಥದ್ದೇ ನೋವಿನ ದಿನದ ಕುರಿತು ಹೇಳಿದ್ದಾರೆ. ಧಾರಾವಾಹಿಯ ಶೂಟಿಂಗ್​ ಸಮಯದಲ್ಲಿ  ಮೇಕಪ್‌ ಮ್ಯಾನ್ ಒಬ್ಬರು ತಮ್ಮನ್ನು ಅವಮಾನಿಸಿದ್ದ ವಿಷಯವನ್ನು ಸ್ಮೃತಿ ಇರಾನಿ ನೆನಪಿಸಿಕೊಂಡಿದ್ದಾರೆ. 'ಅದು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೊದ ಮೊದಲು ಆಗಿತ್ತು.  ಆರಂಭದ  ವರ್ಷದಲ್ಲಿ ದಿನವೊಂದಕ್ಕೆ 1,800 ರೂಪಾಯಿ ಕೊಡುತ್ತಿದ್ದರು. ನನ್ನ ಬಳಿ ಕಾರು ಇರಲಿಲ್ಲ, ನಾನು ಆಟೋ ರಿಕ್ಷಾದಲ್ಲೇ ಧಾರಾವಾಹಿ ಶೂಟಿಂಗ್ ಸೆಟ್‌ಗೆ ಓಡಾಡುತ್ತಿದ್ದೆ. ಆ ಸಮಯದಲ್ಲಿ ನನ್ನ ಮೇಕಪ್​ ಮ್ಯಾನ್​ (Make Up man) ಮಾಡಿದ ಅವಮಾನ ನನ್ನ ಜೀವನದಲ್ಲಿಯೇ  ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ಸ್ಮೃತಿ.
 
ನಾನು ಆಟೋದಲ್ಲಿ ಬರುವುದನ್ನು ನೋಡಿದ ಮೇಕಪ್​ ಮ್ಯಾನ್​, ನಿಮಗೆ  ನಾಚಿಗೆ ಆಗಲ್ವಾ? ನು ಪ್ರತಿದಿನ ಕಾರಿನಲ್ಲಿ ಬರ್ತಿದ್ದೀನಿ, ನೀವೂ ನೋಡಿದರೆ  ಆಟೋದಲ್ಲಿ ಬರ್ತೀರಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಸ್ವಂತವಾಗಿ ಯಾವುದಾದರೂ ಗಾಡಿ ತಗೋಬಾರದಾ ಎಂದು ಕೇಳಿದರು. ಆಗ ನನಗೆ ತುಂಬಾ ಅವಮಾನ ಆಯಿತು. ಆದರೆ ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸೀರಿಯಲ್​ ಸೆಟ್​ಗೆ ಹೋದಾಗಲೆಲ್ಲವೂ ಅನುಮಾನವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಅದೇ ಇನ್ನೊಂದೆಡೆ, ಸೀರಿಯಲ್ ಸೆಟ್‌ನಲ್ಲಿ ಯಾವುದೇ ಕೂಲ್ ಡ್ರಿಂಕ್ಸ್, ತಿಂಡಿ ತೆಗೆದುಕೊಳ್ಳಲು ನನಗೆ ಬಿಡುತ್ತಿರಲಿಲ್ಲ. ಆ ತಿಂಡಿ ಅಲ್ಲಿರುವ ವಸ್ತುಗಳ ಮೇಲೆ ಬಿದ್ದರೆ ಕ್ಲೀನ್ ಮಾಡೋದು ಯಾರು ಎಂಬ ಸಮಸ್ಯೆ ಇತ್ತು. ಅದಕ್ಕಾಗಿಯೇ  ಟೀ ಬೇಕು ಎನಿಸಿದರೆ ಸೆಟ್‌ನಿಂದ ಹೊರಗೆ ಬಂದು ಟೀ ಅಂಗಡಿಯಲ್ಲಿ (Tea Stall) ಟೀ ಕುಡಿಯಬೇಕಿತ್ತು ಎಂದು ಅಂದಿನ ಸ್ಥಿತಿಯನ್ನು ನೆನಪಿಸಿಕೊಂಡಿದ್ದಾರೆ.

ಗರ್ಭಪಾತವಾಗಿದ್ದರೂ ಬಿಟ್ಟಿಲ್ಲ ಕೆಲಸಕ್ಕೆ ಕರೆದ್ರು, ಸಾಕ್ಷಿ ತೋರಿಸಬೇಕಾಯಿತು; ನಟಿ, ಸಚಿವೆ ಸ್ಮೃತಿ ಇರಾನಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?