I Love You ಹೇಳ್ಬೇಡಿ, ಅದರ ಬದ್ಲು... ನಟಿ ಸಾನ್ಯಾ ಅಯ್ಯರ್​ ಹೇಳಿದ್ದೇನು?

Published : Jun 23, 2023, 11:58 AM IST
I Love You ಹೇಳ್ಬೇಡಿ, ಅದರ ಬದ್ಲು... ನಟಿ ಸಾನ್ಯಾ ಅಯ್ಯರ್​ ಹೇಳಿದ್ದೇನು?

ಸಾರಾಂಶ

ಪುಟ್ಟ ಗೌರಿ ಮದುವೆ ಮತ್ತು ಬಿಗ್​ಬಾಸ್​ ಮೂಲಕ ಫೇಮಸ್​ ಆಗಿರೋ ನಟಿ ಸಾನ್ಯಾ ಅಯ್ಯರ್ ಅವರ ಹೊಸ ಇನ್ಸ್​ಟಾ ಪೋಸ್ಟ್​ ಸಕತ್​ ಸುದ್ದಿ ಮಾಡ್ತಿದೆ. ಇದಕ್ಕೆ ಕಾರಣ ಏನು?  

ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್ ಇದೀಗ ಹೊಸ ವಿಡಿಯೋ ಒಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದು,  ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರೂಪೇಶ್ ಶೆಟ್ಟಿ ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದ ಸಾನ್ಯಾ ಅಯ್ಯರ್​ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ  ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್​ನಲ್ಲಿ ಕಾಣಿಸಿಕೊಂಡು ಫೇಮಸ್​ ಆದರು. ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್​ ಆಗಿದ್ದು  ಬಿಗ್ ಬಾಸ್ 9 ಸೀಸನ್ ಮೂಲಕ. ಭಾಗವಹಿಸಿದ್ದರು. ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು.

ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟಿವ್ ಆಗಿರುವ ನಟಿ ಸಾನ್ಯಾ, ಇದೀಗ ರೀಲ್ಸ್​ ಒಂದನ್ನು ಮಾಡಿ ಫ್ಯಾನ್ಸ್​ ಹೃದಯ ಗೆದ್ದಿದ್ದಾರೆ, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ! ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿರೋ ಸಾನ್ಯಾ ಈಗ ಲವ್​ ಬಗ್ಗೆ ಒಂದು ಸಂದೇಶ ನೀಡಿದ್ದು, ಇದಕ್ಕೆ ಸಕತ್​ ರೆಸ್ಪಾನ್ಸ್​ ಬರುತ್ತಿದೆ.  ಇದೀಗ ಪುನೀತ್ ರಾಜ್​ಕುಮಾರ್ ಚಿತ್ರದ ಸಾಂಗ್​ಗೆ ರೀಲ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದಾರೆ. 

ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್

ಯೋಗರಾಜ್ ಭಟ್ಟರ ನಿದೇರ್ಶನದ ವಿ.ಹರಿಕೃಷ್ಣ ಅವರ ಸಂಗೀತದ  ‘ಪರಮಾತ್ಮ’ ಚಿತ್ರದ  'ಹೆಸರು ಪೂರ್ತಿ ಹೇಳದೇ'  ಹಾಡಿಗೆ ಸಾನ್ಯಾ ರೀಲ್ಸ್​ ಮಾಡಿದ್ದದಾರೆ. ಪುನೀತ್ ರಾಜ್​ಕುಮಾರ್ ನಟನೆಯ ಸಿನಿಮಾದ ಹಾಡು ಈಗಲೂ ಜನರ ಫೇವರಿಟ್​. ಸುಂದರವಾಗಿ ಸೀರೆ ಉಟ್ಟುಕೊಂಡಿರುವ ಸಾನ್ಯಾ ನನಗೆ ‘ಐ ಲವ್​ ಯೂ ಹೇಳಬೇಡಿ ಅದರ ಬದಲು ಈ ಹಾಡನ್ನು ಹೇಳಿ’ ಎನ್ನುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಈಚೆಗೆ ಸಾನ್ಯಾ (Saanya Iyer),  ಹೊಸ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದರು. ಅದರಲ್ಲಿ ಹೊಸ  ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಉದ್ದನೆಯ ಕೆಂಪು ಕೂದಲನ್ನು ಕತ್ತರಿಸಿ ಶಾರ್ಟ್ ಹೇರ್ ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಈ ವಿಡೀಯೋವನ್ನು ಸಾನ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ದರು. ಇದಕ್ಕೆ ಮಿಕ್ಸ್​ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಾದ ಬಳಿಕ ಇತ್ತೀಚೆಗೆ ಬೋಲ್ಡ್​ ಫೋಟೋ ಶೂಟ್ (Bold Photo Shoot)​ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇದರಲ್ಲಿ ಸಕತ್​ ಹಾಟ್​ ಆಗಿ ಕಾಣಿಸುತ್ತಿದ್ದರು. ಆ ಫೋಟೋಗೆ ಸಕತ್​ ರೆಸ್ಪಾನ್ಸ್​ ಬಂದಿತ್ತು. ಹಲವಾರು ಮಂದಿ ಐ ಲವ್​ ಯು ಅಂತ ಮೆಸೇಜ್​ ಹಾಕಿದ್ರು. ಅದಕ್ಕೇ ನಟಿ ಈಗ ಐ ಲವ್​ ಯೂ ಹೇಳ್ಬೇಡಿ, ಬೇಕಿದ್ರೆ ಹೀಗೆ ಹೇಳಿ ಅಂತ ಕ್ಯಾಪ್ಷನ್​ ಕೊಟ್ಟು 'ಹೆಸರು ಪೂರ್ತಿ ಹೇಳದೇ' ಹಾಡಿಗೆ ಲಿಪ್​ ಸಿಂಕ್​ ಮಾಡಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?