ರಶ್ಮಿಕಾ ಮಂದಣ್ಣಗೆ ಉಂಡೆನಾಮ ತಿಕ್ಕಿದ ಆರೋಪ: ಕೊನೆಗೂ ಮೌನ ಮುರಿದ ಮ್ಯಾನೇಜರ್

Published : Jun 23, 2023, 10:56 AM IST
ರಶ್ಮಿಕಾ ಮಂದಣ್ಣಗೆ ಉಂಡೆನಾಮ ತಿಕ್ಕಿದ ಆರೋಪ: ಕೊನೆಗೂ ಮೌನ ಮುರಿದ ಮ್ಯಾನೇಜರ್

ಸಾರಾಂಶ

ರಶ್ಮಿಕಾ ಮಂದಣ್ಣ ಅವರಿಗೆ ಲಕ್ಷ ಲಕ್ಷ ಹಣ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದ ಮ್ಯಾನೇಜರ್ ಕೊನೆಗೂ ಮೌನ ಮುರಿದಿದ್ದಾರೆ. ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ಮ್ಯಾನೇಜರ್‌ನಿಂದೆ ಮಹಾ ಮೋಸ ಆಗಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದೆ. ರಶ್ಮಿಕಾ ಅವರ ಲಕ್ಷ ಲಕ್ಷ ಹಣವನ್ನು ಅವರ ಮ್ಯಾನೇಜರ್ ಲಪಟಾಯಿಸಿದ್ದಾರೆ ಹಾಗಾಗಿ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ ಎನ್ನಲಾಗಿತ್ತು. ಈ ಗಂಭೀರ ಆರೋಪಗಳ ಬಗ್ಗೆ ಕೊನೆಗೂ ರಶ್ಮಿಕಾ ಮ್ಯಾನೇಜರ್ ಮೌನ ಮುರಿದಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ತಾನಾಗಿಯೇ ಹೊರ ಹೋಗಿದ್ದು ಎಂದು ಮ್ಯಾನೇಜರ್ ಹೇಳಿದ್ದಾರೆ. ಇಬ್ಬರ ನಡುವೆ ಯಾವುದೇ ವಿಭಿನ್ನಾಭಿಪ್ರಾಯವಿಲ್ಲ ಎಂದು ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ರಶ್ಮಿಕಾ ಮಂದಣ್ಣ ಮತ್ತು ಅವರ ಮ್ಯಾನೇಜರ್ ಇಬ್ಬರೂ ದೀರ್ಘವಾದ ಹೇಳಿಕೆ ಬಿಡುಗಡೆ ಮಾಡಿ, ಇದೆಲ್ಲ ಸುಳ್ಳು ಸುದ್ದಿ ಯಾವುದೇ ಮೋಸ ಆಗಿಲ್ಲ ಎಂದಿದ್ದಾರೆ. 'ನಮ್ಮ ನಡುವೆ ಯಾವುದೇ ನಕಾರಾತ್ಮಕತೆ ಇಲ್ಲ. ನಾವು ಸೌಹಾರ್ದಯುತವಾಗಿಯೇ ಬೇರೆಯಾಗಲು ನಿರ್ಧರಿಸಿದ್ದೇವೆ. ಸದ್ಯ ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ನಾವು ಸಂಪೂರ್ಣ ವೃತ್ತಿಪರರು ಮತ್ತು ಇನ್ನು ಮುಂದೆ ಸ್ವತಂತ್ರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ' ಎಂದು ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಗುರುವಾರ ತಡವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ; ರಶ್ಮಿಕಾ ಅಲ್ಲ!

ರಶ್ಮಿಕಾ ಅವರ ಮ್ಯಾನೇಜರ್ 80 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.  'ರಶ್ಮಿಕಾ ಅವರ ಮ್ಯಾನೇಜರ್ 80  ಲಕ್ಷ ರೂಪಾಯಿ ವಂಚಿಸಿದ್ದಾರೆ. ಆದರೆ ಈ ಬಗ್ಗೆ  ರಶ್ಮಿಕಾ ಯುವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ತನ್ನ ಮ್ಯಾನೇಜರ್ ಅನ್ನು ಕೆಲಸದಿಂದ ವಜಾ ಮಾಡುವ ಮೂಲಕ ತಾನೆ ನಿಭಾಯಿಸಿದ್ದಾರೆ' ಎಂದು ಆಪ್ತ ಮೂಲಗಲು ಮಾಹಿತಿ ನೀಡಿದ್ದವು. ಆದರೀಗ ಇಬ್ಬರೂ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಎಲ್ಲಾ ವದಂತಿಗೆ ತೆರೆ ಎಳಿದ್ದಾರೆ.

ಮ್ಯಾನೇಜರ್​ನಿಂದಲೇ ಮೋಸ ಹೋದ ರಶ್ಮಿಕಾ ಮಂದಣ್ಣ? ಫ್ಯಾನ್ಸ್​ ಶಾಕ್​!

ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಅಂತ ಎರಡೂ ಕಡೆ ರಶ್ಮಿಕಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾ ಜೊತೆಗೆ ರೇನ್‌ಬೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಈ ಎರಡು ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಇನ್ನೂ ಬಾಲಿವುಡ್‌ನಲ್ಲಿ ಅನಿಮಲ್ ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ ವಿಕ್ಕಿ ಕೌಶಲ್ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಅನಿಮಲ್ ಸಿನಿಮಾ ಮುಗಿಸಿದ ಸಂತಸವನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ರಣಬೀರ್ ಕಪೂರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ರಣಬೀರ್ ಅವರನ್ನು ಹಾಡಿಹೊಗಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!