ಎರಡನೇ ಗಂಡನ ಕಿರುಕುಳ, ಹಳೇ ಗಂಡನ ಪಾದವೇ ಗತಿ ಅಂತ ಮರಳುತ್ತಾರಾ ಈ ಕಿರುತೆರೆ ನಟಿ?

By Roopa Hegde  |  First Published Aug 10, 2024, 3:27 PM IST

ಹೊಸ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ ಎರಡನೇ ಮದುವೆಯಾಗಿದ್ದ ನಟಿಗೆ ಪ್ರೀತಿ ಧಕ್ಕಲಿಲ್ಲ. ಈಗ ಮಾಜಿ ಪತಿ ತಿರುಗಿ ನೋಡ್ತಿಲ್ಲ. ಏನ್ ಮಾಡ್ಬೇಕು ಗೊತ್ತಾಗದೆ ಗೊಂದಲದಲ್ಲಿದ್ದಾಳೆ ಈ ಬೆಡಗಿ. 
 


ಅರ್ವನ್ ಬಿಟ್, ಇರ್ವನ್ ಬಿಟ್, ಮತ್ತ್ಯಾರು ಅಂದಾಗ ಮಾಜಿಗಳೇ ನೆನಪಾಗ್ತಾರೆ. ಸಂಗಾತಿ ಬೋರ್ ಆದ ಅಂತ ಹೊಸ ಬಾಯ್ ಫ್ರೆಂಡ್ (Boy Friend) ಹುಡುಕಿಕೊಂಡ ಅನೇಕ ಹುಡುಗಿಯರಿಗೆ ಈ ಸತ್ಯ ಗೊತ್ತು. ಹೊಸದಕ್ಕಿಂತ ಹಳೆಯದೇ ಎಷ್ಟೋ ಬೆಟರ್ ಇತ್ತು ಅಂದ್ಕೊಂಡವರು ಪಶ್ಚಾತ್ತಾಪ ಪಡಬೇಕೇ ವಿನಾ ಮತ್ತೆ ಅದನ್ನು ಪಡೆಯೋದು ಕಷ್ಟ. ಇಷ್ಟೆಲ್ಲ ಯಾಕೆ ಹೇಳ್ತಿದ್ದೇವೆ ಅಂದ್ರೆ ಈಗ ಕಿರುತೆರೆ ನಟಿಯೊಬ್ಬಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಗಂಡನಿಗೆ ಡಿವೋರ್ಸ್ ನೀಡಿ ಇನ್ನೊಬ್ಬರನ್ನು ಮದುವೆಯಾದವರಿಗೆ ಒಂದು ವರ್ಷ ಬದುಕೋದು ಕಷ್ಟವಾಗಿದೆ. ಆರು ತಿಂಗಳಲ್ಲೇ ಅವ್ರನ್ನು ಬಿಟ್ಟು ಓಡ್ಬಂದ ಆಕ್ಟರ್ ಈಗ ಮಾಜಿ ತನ್ನತ್ತ ತಿರುಗಿ ನೋಡ್ತಿಲ್ಲ ಅಂದಿದ್ದಾರೆ.

ನಾವು ಹೇಳ್ತಿರೋದು ಕಿರುತೆರೆ (Television) ನಟಿ ದಿಲ್ಜಿತ್ ಕೌರ್ (Diljit Kaur) ಬಗ್ಗೆ. ದಿಲ್ಚಿತ್ ಗೆ ಈಗ ಮಾಜಿಯೂ ಇಲ್ಲ, ಹಾಲಿಯೂ ಇಲ್ಲ ಎನ್ನುವ ಸ್ಥಿತಿ ಇದ್ದು, ಮಗು, ಸಂಸಾರ ನೋಡ್ಕೊಳ್ಳೋಕೆ ಕಷ್ಟಪಡುವಂತಾಗಿದೆ. ನಟಿ (Actress) ದಿಲ್ಜಿತ್ ಕೌರ್, ಶಾಲಿನ್ ಭಾನೋಟ್ ಮದುವೆ ಆಗಿದ್ರು. ಕೆಲ ವರ್ಷದ ನಂತ್ರ ವಿಚ್ಛೇದನ ಪಡೆದಿದ್ದ ದಿಲ್ಜಿತ್ ಕೌರ್, ಮಾರ್ಚ್ 2023ರಲ್ಲಿ ಕೀನ್ಯಾದ ಉದ್ಯಮಿ ನಿಖಿಲ್ ಪಟೇಲ್ ಅವರನ್ನು ಮದುವೆ ಆಗಿದ್ರು. ಕೀನ್ಯಾಕ್ಕೆ ಹೋಗಿ ಆರು ತಿಂಗಳೂ ದಿಲ್ಜಿತ್ ಕೌರ್ ಗೆ ಸಂಸಾರ ನಡೆಸಲು ಆಗ್ಲಿಲ್ಲ. ಹಾಗಾಗಿಯೇ ಆರೇ ತಿಂಗಳಲ್ಲಿ ಭಾರತಕ್ಕೆ ವಾಪಸ್ ಬಂದ್ರು.

Tap to resize

Latest Videos

undefined

ನಟಿ ಚೈತ್ರಾ ಆಚಾರ್‌ಗೆ ಇಂಥ ಹುಡುಗನೇ ಬೇಕಂತೆ! ಗುಂಡಿಗೆ ಇದ್ದೋರು ಕಾಳ್ ಹಾಕ್ಬಹುದು ಟ್ರೈ ಮಾಡಿ!

ಸಾಮಾಜಿಕ ಜಾಲತಾಣದಲ್ಲಿ (Social Media) ದಿಲ್ಜಿತ್ ಕೌರ್ ಅನೇಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಅವರನ್ನು ಹತ್ತಿರದಿಂದ ನೋಡಿದ ಅಭಿಮಾನಿಯೊಬ್ಬರು, ದಿಲ್ಜಿತ್ ಕೌರ್ ಅವರಿಗೆ ಶಾಲೀನ್ ಭಾನೋಟ್ ಬಳಿ ವಾಫಸ್ ಹೋಗ್ವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ದಿಲ್ಜಿತ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಮಾಜಿ ಗಂಡ ನನ್ನನ್ನು ಸಂಪರ್ಕಿಸ್ತಿಲ್ಲ : ಅಭಿಮಾನಿ ಸಲಹೆಗೆ ಪ್ರತಿಕ್ರಿಯೆ ನೀಡಿದ ದಿಲ್ಜಿತ್ ಕೌರ್, ಶಾಲೀನ್ ಭಾನೋಟ್ ನನ್ನ ಬಗ್ಗೆಯಾಗ್ಲಿ, ಮಗ ಜೇಡನ್ ಬಗ್ಗೆಯಾಗ್ಲಿ ಆಸಕ್ತಿ ತೋರುತ್ತಿಲ್ಲ ಎಂದಿದ್ದಾರೆ. ಅವರು ಮೆಸ್ಸೇಜ್ ಮಾಡಿಲ್ಲ, ಸಂಪರ್ಕಿಸಿಲ್ಲ. ತನ್ನ ಮಗನಿಗೆ ಏನಾಗ್ತಿದೆ ಎಂಬುದನ್ನು ತಿಳಿದುಕೊಳ್ಳುವ ಆಸೆ ಅವರಿಗಿಲ್ಲ. ಅವರು ತುಂಬಾ ಬ್ಯುಸಿ ಎಂದು ದಿಲ್ಜಿತ್ ಕೌರ್, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯ ಸಲಹೆಗೆ ಉತ್ತರ ನೀಡಿದ್ದಾರೆ.

ಪತಿ – ಪತ್ನಿ ಮಧ್ಯೆ ನಡೆಯತ್ತಲೇ ಇದೆ ವಾದ – ವಿವಾದ : ದಿಲ್ಜಿತ್ ಕೌರ್ ಹಾಗೂ ನಿಖಿಲ್ ಮಧ್ಯೆ ವಾದ – ವಿವಾದ ನಡೆಯುತ್ಲೇ ಇದೆ. ನಿಖಲ್ ಮೇಲೆ ವಿವಾಹೇತರ ಸಂಬಂಧದ ಆರೋಪವನ್ನು ದಿಲ್ಜಿತ್ ಕೌರ್ ಹಾಕಿದ್ದರು. ಇದಾದ್ಮೇಲೆ ನಿಖಿಲ್ ಕೂಡ ಆರೋಪ ಮಾಡಿದ್ದರು. ನಮ್ಮಿಬ್ಬರ ಮಧ್ಯೆ ಕಾನೂನು ಮಾನ್ಯತೆ ಪಡೆದಿಲ್ಲ. ಕೇವಲ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಕೀನ್ಯಾದ ಮನೆಗೆ ದಿಲ್ಜಿತ್ ಹೊಂದಿಕೊಳ್ಳಲು ಸಾಧ್ಯವಾಗ್ಲಿಲ್ಲ. ಭಾರತಕ್ಕೆ ಹೋಗುವ ನಿರ್ಧಾರ ಮಾಡಿದ್ರು. ಇದ್ರಿಂದ ಸಂಬಂಧ ಮತ್ತಷ್ಟು ಹಳಸ್ತು ಎಂದು ನಿಖಿಲ್ ಹೇಳಿದ್ದರು.

ಏನ್ರೀ ನಿಮ್ಗೆ ಸ್ವಂತ ಬುದ್ಧಿ ಇಲ್ವಾ? ಮಹಿಳೆ ಕೋಪಕ್ಕೆ ಬ್ರಹ್ಮಗಂಟು ನಾಯಕ ಚಿರಾಗ್​ ಕಕ್ಕಾಬಿಕ್ಕಿ!

ಇವರಿಬ್ಬರ ಗಲಾಟೆಯಲ್ಲಿ ಮಧ್ಯ ಪ್ರವೇಶ ಮಾಡಿದ್ದ ದಿಲ್ಜಿತ್ ಕೌರ್ ಪಿಆರ್ ಮ್ಯಾನೇಜರ್, ನಿಖಿಲ್ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ನಿಖಿಲ್, ದಿಲ್ಜಿತ್ ಮಗನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕೇವಲ ಪ್ರಸಿದ್ಧಿಪಡೆಯಲು ಅವರು ದಿಲ್ಜಿತ್ ಜೊತೆ ಮದುವೆ ಆಗುವ ನಿರ್ಧಾರ ತೆಗೆದುಕೊಂಡಿದ್ದರು. ನಿಖಿಲ್ ದುರಹಂಕಾರಿ ಎಂದು ಪಿಆರ್ ಹೇಳಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದ ಅಭಿಮಾನಿಗಳು ದಿಲ್ಜಿತ್ ಕೌರ್ ಪರ ನಿಂತಿದ್ದಾರೆ. ಮತ್ತೆ ಮಾಜಿ ಪತಿ ಬಳಿ ಹೋಗುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಶಾಲೀನ್ ಭಾನೋಟ್ ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

click me!