36 ವರ್ಷದ ಬಳಿಕ ಏಕ್​, ದೋ, ತೀನ್​... ಎಂದ ಮಾಧುರಿ: ಅಮೆರಿಕದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ನಟಿ!

By Suchethana D  |  First Published Aug 10, 2024, 3:12 PM IST

ಅಮೆರಿಕದ ಪ್ರವಾಸದಲ್ಲಿರುವ ನಟಿ ಮಾಧುರಿ ದೀಕ್ಷಿತ್​ 36 ವರ್ಷಗಳ ಬಳಿಕ ತೇಜಾಬ್​ ಚಿತ್ರದ ಏಕ್​,ದೋ, ತೀನ್​ ಹಾಡಿಗೆ ಡಾನ್ಸ್​ ಮಾಡಿದಾಗ ಹೇಗಿತ್ತು? 
 


1988ರಲ್ಲಿ ಬಿಡುಗಡೆಯಾದ ತೇಜಾಬ್​ ಚಿತ್ರದಲ್ಲಿನ ಏಕ್​, ದೋ, ತೀನ್​, ಚಾರ್​ ಹಾಡು ಇಂದಿಗೂ ಹಚ್ಚ ಹಸಿರು. ಈ ಹಾಡನ್ನು ಈಗಲೂ ಹಲವರು ಹೇಳುತ್ತಿದ್ದಾರೆ. ಮಾಧುರಿ ದೀಕ್ಷಿತ್​ ಎಂದರೆ ಅವರ ಜೊತೆ ಈ ಹಾಡು ಕೂಡ ಥಳಕು ಹಾಕಿಕೊಳ್ಳುವಷ್ಟರ ಮಟ್ಟಿಗೆ ಈ ಹಾಡು ಫೇಮಸ್​ ಆಗಿದೆ. ಈ ಚಿತ್ರ ಬಿಡುಗಡೆಯಾಗಿ 36 ವರ್ಷಗಳಾಗಿವೆ. ಆಗ ಮಾಧುರಿ ಅವರಿಗೆ 21 ವರ್ಷ ವಯಸ್ಸು. ಈಗ 57 ವರ್ಷ ವಯಸ್ಸು. ಆದರೆ ವಯಸ್ಸು ಇಷ್ಟಾದರೂ ನಟಿಯ ವರ್ಚಸ್ಸು ಕಡಿಮೆಯಾಗಿಲ್ಲ. ಇನ್ನೂ 20-30ರ ಹರೆಯದ ಯುವತಿಯಂತೆಯೇ ನಟಿ ಕಂಗೊಳಿಸುತ್ತಾರೆ. ಸ್ಲಿಮ್​, ಫಿಟ್​ ಆಗಿದ್ದಾರೆ. ಇದೀಗ ನಟಿ ಅಮೆರಿಕದ ಪ್ರವಾಸದಲ್ಲಿದ್ದು, ಅಲ್ಲಿ ಏಕ್​, ದೋ, ತೀನ್​, ಚಾರ್​ ಹಾಡಿಗೆ ವೇದಿಕೆ ಮೇಲೆ ಸ್ಟೆಪ್​ ಹಾಕುವ ಮೂಲಕ ಅಲ್ಲಿಯ ಅಭಿಮಾನಿಗಳ ಹುಚ್ಚೆಬ್ಬಿಸಿದ್ದಾರೆ. 

Tap to resize

Latest Videos

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ತಮ್ಮ ಚೆಂದದ ನಗುವಿನಿಂದಲೇ ತಮ್ಮ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯಾಚುರಲ್ ನಟನೆ, ಸಖತ್ ಡ್ಯಾನ್ಸ್ ಮೂಲಕ ಮಾಧುರಿ ಅಭಿಮಾನಿಗಳನ್ನು ಸಹ ಕುಣಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಚೆಲುವೆಗೆ ಆ ಕಾಲದಲ್ಲಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದರು. ಇವರು  12ನೇ ಕ್ಲಾಸ್ ಪರೀಕ್ಷೆ ಮುಗಿದ ನಂತರ ರಜೆಯಲ್ಲಿ ಏನೆಲ್ಲಾ ಹೊಸ ಕೆಲಸಗಳನ್ನು ಮಾಡಬಹುದು ಎಂದು ಯೋಚಿಸುತ್ತಿದ್ದರು. ರಾಜಶ್ರೀ ಪ್ರೊಡಕ್ಷನ್ಸ್ ತಮ್ಮ ‘ಅಬೋಧ್’ ಚಿತ್ರಕ್ಕಾಗಿ ಹೊಚ್ಚ ಹೊಸ ಹೊಸ ಮುಖವನ್ನು ಹುಡುಕುತ್ತಿದ್ದರು. ಆಗ ಕಣ್ಣಿಗೆ ಬಿದ್ದುದು ಮಾಧುರಿ. ಸಿನಿಮಾ ಆಫರ್ ಕೇಳಿದ ತಕ್ಷಣ ಮಾಧುರಿ ಕುಟುಂಬ ತಿರಸ್ಕರಿಸಿತ್ತಂತೆ. ಅದಾದ ನಂತರ ಹೇಗೋ ಮಾಧುರಿಯ ಮನವೊಲಿಸಿ ರಾಜಶ್ರೀ ಪ್ರೊಡಕ್ಷನ್ಸ್ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ನಟಿಗೆ ಕೆಲವು ಹಿಂದಿ ಡೈಲಾಗ್ ಕೊಟ್ರು. ಆಗ ಮಾಧುರಿಗೆ ಸ್ಕ್ರೀನ್ ಟೆಸ್ಟ್ ಮಾಡಿದ್ರು. ಸ್ಕ್ರೀನ್ ಟೆಸ್ಟ್ ನಂತರ ಅವರಿಗೆ ‘ಅಬೋಧ್’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಅಷ್ಟಕ್ಕೂ ಮಾಧುರಿ ದೀಕ್ಷಿತ್​ ಅವರು,  ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.  ‘ತೇಜಾಬ್’, ‘ಹಮ್ ಆಪ್ಕೆ ಹೈ ಕೌನ್..!’, ‘ದೇವದಾಸ್’ ಮತ್ತು ಇತರ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಟಿ, ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನದ 40 ಸೂಪರ್ ಯಶಸ್ವಿ ವರ್ಷಗಳನ್ನು ಪೂರೈಸುತ್ತಿದ್ದಾರೆ. ರಿಟರ್ನ್ ಗಿಫ್ಟ್ ಆಗಿ, ಅವರು ಅಮೆರಿಕದಲ್ಲಿ  ತಮ್ಮ ಅಭಿಮಾನಿಗಳೊಂದಿಗೆ ವಿಶೇಷ ಸಂದರ್ಭವನ್ನು ಆಚರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ.  ನಾನು ನನ್ನ ಅಭಿಮಾನಿಗಳನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಮತ್ತು US ನಲ್ಲಿ ಓದುತ್ತಿರುವ ನನ್ನ ಮಗನನ್ನು ನೋಡಬೇಕಿದೆ.  ಹಾಗಾಗಿ ಇದು ನನಗೆ ಬಿಡುವಿಲ್ಲದ ಸಮಯವಾಗಿರುತ್ತದೆ. ನನ್ನ ಬಹಳಷ್ಟು ಸ್ನೇಹಿತರನ್ನು ಭೇಟಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ, ಆದರೆ ನಾನು ಯಾರಿಗೆ ಸಾಧ್ಯವೋ, ಅವರನ್ನೆಲ್ಲಾ  ಭೇಟಿಯಾಗುತ್ತೇನೆ  ಎಂದು ಮಾಧುರಿ ಪ್ರವಾಸಕ್ಕೂ ಹೋಗುವ ಮುನ್ನ ಹೇಳಿದ್ದರು. 

ಅಮೆರಿಕದಲ್ಲಿ ತೇಜಾಬ್​ ಚಿತ್ರ ಹಾಡಿಗೂ ಡಾನ್ಸ್​ ಮಾಡಿರುವ ನಟಿ, ಕೊನೆಗೆ ದೇವದಾಸ್​ ಚಿತ್ರದ ಡೈಲಾಗ್​ ರಿಕ್ರಿಯೇಟ್​ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿದ ನಟಿ,  ಅಭಿಮಾನಿಗಳನ್ನು ಭೇಟಿಯಾಗುವುದು ಯಾವಾಗಲೂ ಅದ್ಭುತವಾಗಿದೆ, ಏಕೆಂದರೆ ಅವರ ಬೇಷರತ್ತಾದ ಪ್ರೀತಿ ಮತ್ತು ಬೆಂಬಲದೊಂದಿಗೆ ಅವರು ನಿಮ್ಮನ್ನು ಮಾಡುತ್ತಾರೆ. ಅಭಿಮಾನಿಗಳಿಂದಾಗಿಯೇ ಒಬ್ಬರು ಸ್ಟಾರ್​ ನಟ-ನಟಿಯಾಗಲು ಸಾಧ್ಯ ಎಂದಿದ್ದಾರೆ ಮಾಧುರಿ.  ಅಂದಹಾಗೆ, 'ಫಾರೆವರ್ ಕ್ವೀನ್ ಆಫ್ ಬಾಲಿವುಡ್ - ಮಾಧುರಿ ದೀಕ್ಷಿತ್' ಎಂಬ ಹೆಸರಿನಲ್ಲಿ  ಶ್ರೇಯಾ ಗುಪ್ತಾ ಮತ್ತು ಅತೀಕ್ ಶೇಖ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರವಾಸವು ಆಗಸ್ಟ್ 8 ರಿಂದ ಆರಂಭಗೊಂಡಿದ್ದು 11 ರವರೆಗೆ ನಡೆಯಲಿದೆ. ಪ್ರವಾಸದ ಭಾಗವಾಗಿ, ಮಾಧುರಿ ನ್ಯೂಯಾರ್ಕ್, ಡಲ್ಲಾಸ್, ನ್ಯೂಜೆರ್ಸಿ ಮತ್ತು ಅಟ್ಲಾಂಟಾಗೆ ಭೇಟಿ ನೀಡಲಿದ್ದಾರೆ. 

click me!