ಸಮುದ್ರದಲ್ಲೇ ಹೋಗಿತ್ತಾ ಪ್ರಾಣ? ಸಿಂಗರ್ ಜುಬೀನ್ ಅಂತಿಮ ಕ್ಷಣದ ವಿಡಿಯೋ ಬಹಿರಂಗ

Published : Sep 20, 2025, 04:06 PM IST
Zubeen Garg

ಸಾರಾಂಶ

ಸಮುದ್ರದಲ್ಲೇ ಹೋಗಿತ್ತಾ ಪ್ರಾಣ? ಸಿಂಗರ್ ಜುಬೀನ್ ಅಂತಿಮ ಕ್ಷಣದ ವಿಡಿಯೋ ಬಹಿರಂಗ, ಲೈಫ್ ಜಾಕೆಟ್ ಜೊತೆಗೆ ಹಾರಿದ ಬೆನ್ನಲ್ಲೇ ಜುಬೀನ್ ಅಸ್ವಸ್ಥಗೊಂಡಿದ್ದಾರೆ. ಜುಬೀನ್ ಅಂತಿಮ ಕ್ಷಣದ ವಿಡಿಯೋ ಇದೀಗ ಲಭ್ಯವಾಗಿದೆ. ಇದರ ಬೆನ್ನಲ್ಲೇ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿಂಗಾಪುರ (ಸೆ.20) ಬಾಲಿವುಡ್ ಗಾಯಕ, ಅಸ್ಸಾಂ ಸೆಲೆಬ್ರೆಟಿ ಜುಬೀನ್ ಗರ್ಗ್ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟ ಘಟನೆ ಆಘಾತಕ್ಕೆ ಕಾರಣಾಗಿದೆ. ಪ್ರಧಾನಿ ಮೋದಿ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಸಿಂಗಾಪುರದಲ್ಲಿ ಮ್ಯೂಸಿಕ್ ಕಾರ್ಯಕ್ರಮ ನೀಡಲು ತೆರಳಿದ್ದ ಜುಬೀನ್ ಗರ್ಗ್ ವಿರಾಮದ ವೇಳೆಯಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸ್ಕೂಬಾ ಡೈವಿಂಗ್ ನಡುವೆ ಜುಬೀನ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದೀಗ ಜುಬೀನ್ ಗರ್ಗ್ ಅಂತಿಮ ಕ್ಷಣದ ವಿಡಿಯೋ ಬಹಿರಂಗವಾಗಿದೆ. ಈ ವಿಡಿಯೋ ಆಧರಿಸಿ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜುಬೀನ್ ಗರ್ಗ್ ಸಮುದ್ರದಲ್ಲಿ ಅಂತಿಮ ಕ್ಷಣದ ವಿಡಿಯೋ

ಈ ವಿಡಿಯೋದಲ್ಲಿ ಜುಬೀನ್ ಗರ್ಗ್ ಅಂತಿಮ ಕ್ಷಣದ ದೃಶ್ಯಗಳಿವೆ. ಯಾಚ್ ಮೂಲಕ ಜುಬೀನ್ ಗರ್ಗ್ ಹಾಗು ಸಿಬ್ಬಂದಿಗಳು ಸಮುದ್ರದಲ್ಲಿ ಸಂಚರಿಸಿದ್ದಾರೆ. ಕೆಲ ದೂರದಲ್ಲಿ ಸಿಬ್ಬಂದಿಗಳು ಹಾಗೂ ಇತರರು ಸಮುದ್ರದಲ್ಲಿ ಈಜಾಡುತ್ತಿರುವ ದೃಶ್ಯವಿದೆ. ಲೈಫ್ ಜಾಕೆಟ್ ಧರಿಸಿದ್ದ ಜುಬೀನ್ ಯಾಚ್‌ನಿಂದ ಸಮುದ್ರಕ್ಕೆ ಹಾರಿದ್ದಾರೆ. ಬಳಿಕ ಕೆಲವೇ ಸೆಕೆಂಡ್‌ನಲ್ಲಿ ಅಸ್ವಸ್ಥಗೊಂಡಿದ್ದಾರೆ. ಹಾರಿದ ಬಳಿಕ ಜುಬೀನ್ ಗರ್ಗ್ ಸಕ್ರಿಯವಾಗಿರಲಿಲ್ಲ. ಸಿಬ್ಬಂದಿಗಳು ಜುಬೀನ್ ಗರ್ಗ್ ನೆರವು ನೀಡಿದ್ದಾರೆ. ಬಳಿಕ ಕೆಲ ಸೆಕೆಂಡ್ ಈಜಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಲೈಫ್ ಜಾಕೆಟ್‌ನಿಂದ ನೀರಿನಲ್ಲೇ ಹಾಗೇ ಮಲಗಿದ್ದಾರೆ. ಅಷ್ಟರಲ್ಲೇ ಜುಬೀನ್ ಗರ್ಗ್ ಅಸ್ವಸ್ಥಗೊಂಡಿರುವುದು ಖಚಿತಗೊಂಡಿದೆ. ಇತ್ತ ಜುಬೀನ್ ಗರ್ಗ್ ಮತ್ತೆ ಯಾಚ್‌ನತ್ತ ದಾರದ ಸಹಾಯದಿಂದ ಮರಳಿ ಬರುವ ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗಿಲ್ಲ. ಈ ವೇಳೆ ಸಿಬ್ಬಂದಿಗಳಿಗೆ ಜುಬೀನ್ ಗರ್ಗ್‌ನತ್ತ ಧಾವಿಸಿದ್ದಾರೆ.

Singer Mangli: ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ವಿವಾದ: 'ಕಣ್ಣೇ ಅದಿರಿಂದಿ' ಖ್ಯಾತಿಯ ಗಾಯಕಿ ವಿರುದ್ಧ ಎಫ್‌ಐಆರ್!

ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ

ತಕ್ಷಣವೇ ಸಿಂಗಾಪೂರ ಪೊಲೀಸರು ಜುಬೀನ್ ಗರ್ಗ್ ರಕ್ಷಿಸಿ ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಜುಬೀನ್ ಗರ್ಗ್ ಆರೋಗ್ಯ ಚೇತರಿಸಿಕೊಳ್ಳಲಿಲ್ಲ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜುಬೀನ್ ಗರ್ಗ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಸಿಂಗಾಪುರದಲ್ಲಿ ಮೃತಪಟ್ಟ ಪ್ರಕರಣ ಕುರಿತು ಅಸ್ಸಾಂ ಪೊಲೀಸ್ ತನಿಖೆ

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಲವು ಎಫ್ಐಆರ್ ದಾಖಲಾಗಿದೆ. ಕಾರ್ಯಕ್ರಮ ಆಯೋಜಕರು, ಜುಬೀನ್ ಗರ್ಗ್ ಮ್ಯಾನೇಜರ್ ಹಾಗೂ ಜುಬೀನ್ ಕೊನೆಯ ಕ್ಷಣದಲ್ಲಿ ಯಾರೆಲ್ಲೂ ಜೊತೆಗಿದ್ದರೋ ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

 

 

ಘಟನೆ ನಡೆದ ಹಿಂದಿನ ದಿನ ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು ಅನ್ನೋ ವರದಿಗಳಿವೆ. ಹೆಚ್ಚಿನ ಮಾಹಿತಿಯನ್ನು ಸಿಂಗಾಪುರ ಪೊಲೀಸರಿಂದ ಪಡೆಯಲಾಗುತ್ತದೆ. ಅಸ್ಸಾಂ ಪೊಲೀಸರು ಈ ಪ್ರಕರಣದ ಸಮಗ್ರ ತನಿಖೆ ನಡೆಸಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಜುಬೀನ್ ಗರ್ಗ್ ಸಾವಿನ ಕುರಿತು ಹಲವು ವರದಿಗಳು ಬರುತ್ತಿದೆ. ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದಾರೆ, ಲೈಫ್ ಜಾಕೆಟ್ ಇಲ್ಲದೆ ಮೃತಪಟ್ಟಿದ್ದಾರೆ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಈ ಸಾವಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ನಾದಬ್ರಹ್ಮ ಅಂದ್ರೇನು? ಹಂಸಲೇಖರಿಂದ ಅನ್ಯಾಯ, ಗಾಯಕನ ಗಂಭೀರ ಆರೋಪ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?