
ಸೆಲೆಬ್ರಿಟಿಗಳು ಯಾವಾಗ ಜಿಮ್ (Gym) ಗೆ ಹೋಗ್ತಾರೆ, ಎಷ್ಟು ಗಂಟೆಗೆ ವಾಪಸ್ ಬರ್ತಾರೆ ಅನ್ನೋದು ಪಾಪರಾಜಿಗಳಿಗಿಂತ ಭಿಕ್ಷುಕರಿಗೆ ಚೆನ್ನಾಗಿ ತಿಳಿದಿರುತ್ತೆ. ಹಾಗಾಗೇ ಸೆಲೆಬ್ರಿಟಿ ಜಿಮ್ ಮುಂದೆ ಭಿಕ್ಷುಕರು ಇದ್ದೇ ಇರ್ತಾರೆ. ಪಾಪರಾಜಿಗಳು ಕ್ಯಾಮರಾ ಆನ್ ಮಾಡೋ ಮೊದ್ಲೆ ಅವರು ಕೈ ಒಡ್ಡಿರ್ತಾರೆ. ಭಿಕ್ಷೆ ಬೇಡೋದು ಸಾಮಾಜಿಕ ಅಪರಾಧವಾದ್ರೂ ನಮ್ಮ ದೇಶದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆ ಏನಿಲ್ಲ. ದೇವಸ್ಥಾನ, ಸಿಗ್ನಲ್, ಪಾರ್ಕಿಂಗ್ ಪ್ಲೇಸ್ ನಲ್ಲಿ ಭಿಕ್ಷೆ ಬೇಡ್ತಾ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ ಜನರಿದ್ದಾರೆ. ಕೆಲವರು ಅನಿವಾರ್ಯಕ್ಕೆ ಭಿಕ್ಷೆ ಬೇಡಿದ್ರೆ ಮತ್ತೆ ಕೆಲವರು ಹಣ ಮಾಡೋಕೆ ಭಿಕ್ಷೆ ಬೇಡ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ಮಾಜಿ ಪತ್ನಿ ನತಾಶಾ ಸ್ಟಾಂಕೋವಿಚ್ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನತಾಶಾ ಸ್ಟಾಂಕೋವಿಚ್ (Natasha Stankovic) ಹಿಂದೆ ಭಿಕ್ಷುಕಿ ಬರ್ತಿದ್ದಾಳೆ. ಅವಳಿಗೆ ನತಾಶಾ ಸ್ಟಾಂಕೋವಿಕ್ ಕೊಟ್ಟವ ವಸ್ತು ಸದ್ಯ ಚರ್ಚೆಯಲ್ಲಿದೆ.
ಭಿಕ್ಷುಕಿಗೆ ನತಾಶಾ ಸ್ಟಾಂಕೋವಿಚ್ ಕೊಟ್ಟಿದ್ದೇನು? : ನತಾಶಾ ಸ್ಟಾಂಕೋವಿಚ್, ಜಿಮ್ ಮುಗಿಸಿ ಹೊರಗೆ ಬರ್ತಿದ್ದಂತೆ ಭಿಕ್ಷುಕಿ ಅವರ ಹಿಂದೆ ಬಿದ್ದಿದ್ದಾಳೆ. ಏನಾದ್ರೂ ತಿನ್ನೋಕೆ ಕೊಡಿ ಅಂತ ಭಿಕ್ಷುಕಿ ಹೇಳೋದನ್ನು ನೀವು ಕೇಳ್ಬಹುದು. ನತಾಶಾ, ಇರು ಎನ್ನುತ್ಲೇ ಕಾರನ್ನು ಹತ್ತುತ್ತಾರೆ. ಕಾರ್ ವಿಂಡೋ ಕೆಳಗಿದ್ದ ನೀರಿನ ಬಾಟಲಿಯನ್ನು ಭಿಕ್ಷುಕಿಗೆ ನೀಡ್ತಾರೆ. ನತಾಶಾ ಸ್ಟಾಂಕೋವಿಚ್, ಏನೋ ನೀಡ್ತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಮತ್ತೊಬ್ಬ ಹುಡುಗಿ ಕೂಡ ಅಲ್ಲಿಗೆ ಬರ್ತಾಳೆ. ನತಾಶಾ ಸ್ಟಾಂಕೋವಿಚ್ ನೀಡಿದ ನೀರಿನ ಬಾಟಲಿ ತೆಗೆದುಕೊಂಡ ಭಿಕ್ಷುಕಿ, ಊಟಕ್ಕೆ ನೀಡಿ ಅಂತ ಮತ್ತೆ ಮತ್ತೆ ಕೈ ಒಡ್ಡುತ್ತಿರೋದನ್ನು ನೋಡ್ಬಹುದು. ಕಾರಿನ ಬಾಗಿಲು ಹಾಕಿದ್ರೂ ವಿಂಡೋ ಬಿಡದೆ ಕಾಡ್ತಿದ್ದಾಳೆ. ಆದ್ರೆ ನತಾಶಾ ಸ್ಟಾಂಕೋವಿಚ್ ಏನೂ ನೀಡ್ದೆ ಅಲ್ಲಿಂದ ಹೋಗ್ತಾರೆ.
ಹಣೆಯಲ್ಲಿ ಕೆಂಪು ಕುಂಕುಮ, ಕೈಯಲ್ಲಿ ರುದ್ರಾಕ್ಷಿ, ಕೆಂಪುದಾರ; Actor Aamir Khan ಈ ಅವತಾರ ಗೌರಿ ಕೃಪೆಯೇ?
ನೆಟ್ಟಿಗರ ಪ್ರತಿಕ್ರಿಯೆ ಏನು? : ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜಿಮ್ ನಂತ್ರ ಮಿಂಚುತ್ತಿರುವ ನತಾಶಾ ಸ್ಟಾಂಕೋವಿಚ್ ಅಂತ ಶೀರ್ಷಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ನತಾಶಾ ಸ್ಟಾಂಕೋವಿಚ್ ಮತ್ತು ಭಿಕ್ಷುಕಿ ಮಧ್ಯೆ ನಡೆಯುವ ಮಾತನ್ನು ಟೆಕ್ಸ್ಟ್ ಮೂಲಕ ತಿಳಿಸಿದ್ದಾರೆ. ಇದನ್ನು ನೋಡಿದ ಬಳಕೆದಾರರಿಂದ ಮಿಶ್ರಪ್ರತಿಕ್ರಿಯೆ ಬಂದಿದೆ. ನತಾಶಾ ಸ್ಟಾಂಕೋವಿಕ್ ಕೆಲ್ಸವನ್ನು ಅನೇಕರು ಶ್ಲಾಘಿಸಿದ್ದಾರೆ. ನತಾಶಾ ಸ್ಟಾಂಕೋವಿಚ್ ಜಿಮ್ ನಿಂದ ಹೊರಗೆ ಬರ್ತಿದ್ದಾರೆ. ಅವ್ರ ಕೈನಲ್ಲಿ ಆಹಾರ ಏನಿರುತ್ತೆ. ಜಿಮ್, ಹೆಲ್ತ್ ಬಗ್ಗೆ ಕಾಳಜಿ ಇರುವವರು ಕಾರ್ ನಲ್ಲಿ ನೀರಿನ ಬಾಟಲಿ ಇಟ್ಟುಕೊಂಡಿರ್ತಾರೆ. ಅದನ್ನೇ ನೀಡಿದ್ದಾರೆ. ಅದ್ರಲ್ಲಿ ತಪ್ಪೇನು ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು, ಭಿಕ್ಷುಕಿ ಇನ್ನೂ ಯುವತಿ. ಕೆಲ್ಸ ಮಾಡಿ ಹಣ ಸಂಪಾದನೆ ಮಾಡ್ಬಹುದು. ಇಂಥವರಿಗೆ ಹಣ ನೀಡಿ ಪ್ರಯೋಜನ ಇಲ್ಲ. ಬೇರೆಯವರಿಂದ ಬೇಡಿ ತಿನ್ನೋ ಬದಲು ಕೆಲ್ಸ ಮಾಡು ಅಂತ ಭಿಕ್ಷುಕಿಗೆ ಸಲಹೆ ನೀಡಿದ್ದಾರೆ. ಈಗಿನ ದಿನಗಳಲ್ಲಿ ಜನ ಕ್ಯಾಶ್ ಇಟ್ಕೊಳ್ಳೋದಿಲ್ಲ. ನತಾಶಾ ಸ್ಟಾಂಕೋವಿಚ್ ಕೈನಲ್ಲೂ ಕ್ಯಾಶ್ ಇರ್ಲಿಕ್ಕಿಲ್ಲ. ಹಾಗಾಗಿ ಏನೂ ಸಹಾಯ ಆಗ್ಲಿ ಅಂತ ನೀರು ನೀಡಿದ್ದಾರೆ ಅನ್ನೋದು ನೆಟ್ಟಿಗರ ವಾದ.
ನೈಸಾ ದೇವಗನ್ ಹಿಂದೆ ಬಿದ್ದ ಕರಣ್ ಜೋಹರ್.. ಮತ್ತೆ ಮತ್ತೆ ಅದೇ ತಪ್ಪು ಮಾಡೋದ್ಯಾಕೆ ಈ ನಿರ್ಮಾಪಕ?
ಮತ್ತೆ ಕೆಲವರು ನತಾಶಾ ಸ್ಟಾಂಕೋವಿಚ್ ಕ್ರಮವನ್ನು ಖಂಡಿಸಿದ್ದಾರೆ. ಅವರು ಆಹಾರ ಕೇಳಿದ್ರೆ ಇವ್ರು ನೀರುಕೊಟ್ಟಿದ್ದಾರೆ. ಇದೇ ಶ್ರೀಮಂತ್ರು ಮತ್ತು ಬಡವರಿಗಿರುವ ವ್ಯತ್ಯಾಸ. ಇಂಥವರು ಸಿಗ್ತಾರೆ ಎನ್ನುವ ಕಾರಣಕ್ಕಾದ್ರೂ ಹಣವನ್ನು ಕೈನಲ್ಲಿ ಇಟ್ಕೊಂಡು ಬಂದಿರ್ಬೇಕು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ನತಾಶಾ ಸ್ಟಾಂಕೋವಿಚ್ ಮಾಡಿದ್ದು ಎಷ್ಟು ಸರಿ? ನೀವೇನು ಹೇಳ್ತಿರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.