ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ: ಅ.1ರಂದು ವಿಶ್ವಾದ್ಯಂತ ಭರ್ಜರಿ ಪ್ರೀಮಿಯರ್ ಶೋ

Published : Sep 19, 2025, 06:19 AM IST
Kantara Chapter 01

ಸಾರಾಂಶ

ಕಾಂತಾರ ಸಿನಿಮಾವನ್ನು ಸುವರ್ಣ ವಾಹಿನಿಯವರು ಖರೀದಿಸಿದ್ದು, ಅವರಿಂದ ನಿರಾಕ್ಷೇಪಣಾ ಪತ್ರ ಪಡೆದು ಖರೀದಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹಾಗಾಗಿ ಓಟಿಟಿ ಮತ್ತು ಸ್ಯಾಟಲೈಟ್‌ ಹಕ್ಕು ಮಾರಾಟದಿಂದಲೇ ಚಿತ್ರತಂಡ ಬಜೆಟ್‌ನ ಬಹುಪಾಲು ಗಳಿಸಿಕೊಂಡಿದೆ ಎನ್ನಲಾಗಿದೆ.

ಕಾಂತಾರ ಸಿನಿಮಾವನ್ನು ಸುವರ್ಣ ವಾಹಿನಿಯವರು ಖರೀದಿಸಿದ್ದು, ಅವರಿಂದ ನಿರಾಕ್ಷೇಪಣಾ ಪತ್ರ ಪಡೆದು ಖರೀದಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹಾಗಾಗಿ ಓಟಿಟಿ ಮತ್ತು ಸ್ಯಾಟಲೈಟ್‌ ಹಕ್ಕು ಮಾರಾಟದಿಂದಲೇ ಚಿತ್ರತಂಡ ಬಜೆಟ್‌ನ ಬಹುಪಾಲು ಗಳಿಸಿಕೊಂಡಿದೆ ಎನ್ನಲಾಗಿದೆ.

1. ಕಾಂತಾರ 1 ಬಿಡುಗಡೆಗೆ ಮೊದಲೇ 200 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿಕೊಂಡಿದೆ. ಓಟಿಟಿ ಹಕ್ಕನ್ನು ಅಮೆಜಾನ್‌ ಪ್ರೈಮ್‌ 120 ಕೋಟಿ ರೂಪಾಯಿ ನೀಡಿ ಪಡೆದುಕೊಂಡಿದ್ದು, ಜೀಟಿವಿಯವರು 80 ಕೋಟಿ ರೂಪಾಯಿ ನೀಡಿ ಎಲ್ಲಾ ಭಾರತೀಯ ಭಾಷೆಯ ಸ್ಯಾಟಲೈಟ್‌ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಕಾಂತಾರ ಸಿನಿಮಾವನ್ನು ಸುವರ್ಣ ವಾಹಿನಿಯವರು ಖರೀದಿಸಿದ್ದು, ಅವರಿಂದ ನಿರಾಕ್ಷೇಪಣಾ ಪತ್ರ ಪಡೆದು ಖರೀದಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹಾಗಾಗಿ ಓಟಿಟಿ ಮತ್ತು ಸ್ಯಾಟಲೈಟ್‌ ಹಕ್ಕು ಮಾರಾಟದಿಂದಲೇ ಚಿತ್ರತಂಡ ಬಜೆಟ್‌ನ ಬಹುಪಾಲು ಗಳಿಸಿಕೊಂಡಿದೆ ಎನ್ನಲಾಗಿದೆ.

2. ಜೊತೆಗೆ ಆಡಿಯೋ ಹಕ್ಕು ಕೂಡ ದೊಡ್ಡ ಸಂಸ್ಥೆಗೆ ಮಾರಾಟವಾಗಿದ್ದು, 30 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

3. ಅಕ್ಟೋಬರ್‌ 1ರಂದು ಸಂಜೆ ವಿಶ್ವಾದ್ಯಂತ ಎಲ್ಲಾ ಕಡೆ ಪ್ರೀಮಿಯರ್‌ ಶೋ ಆಯೋಜಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

4. ಸಿನಿಮಾದ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿದೆ. ಬಹುತೇಕ ಚಿತ್ರತಂಡ ಅಜನೀಶ್‌ ಲೋಕನಾಥ್‌ ಸ್ಟುಡಿಯೋದಲ್ಲಿಯೇ ಬೀಡುಬಿಟ್ಟಿದೆ ಎನ್ನಲಾಗುತ್ತಿದೆ. ಎಲ್ಲಾ ಭಾಷೆಯ ತಂತ್ರಜ್ಞರು ಬೆಂಗಳೂರಿನ ಸ್ಟುಡಿಯೋದಲ್ಲಿಯೇ ಕುಳಿತು ಆಯಾ ಭಾಷೆಯ ಆವೃತ್ತಿಗೆ ದುಡಿಯುತ್ತಿದ್ದಾರೆ.

5. ಈ ವಾರವಷ್ಟೇ ಸೆನ್ಸಾರ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೆಲವೇ ದಿನಗಳಲ್ಲಿ ಸೆನ್ಸಾರ್‌ ಆಗುವ ಸಾಧ್ಯತೆ ಇದೆ.

6. ಮೊದಲ ವಾರದಲ್ಲಿ ಐದು ಪ್ರಮುಖ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಲ್ಲಿ ಮಾತ್ರವೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಮರುವಾರದಿಂದ ವಿದೇಶಿ ಭಾಷೆಗಳೂ ಸೇರಿದಂತೆ ಒಟ್ಟು ಸುಮಾರು 30 ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

7. ಸಿನಿಮಾ ತಂಡ ಪ್ರಚಾರದ ಕುರಿತು ಅಷ್ಟೇನೂ ಆಸಕ್ತಿ ತೋರಿಸುತ್ತಿಲ್ಲ. ಪ್ರಚಾರಕ್ಕೆ ದೊಡ್ಡ ಮಟ್ಟದ ಖರ್ಚು ಮಾಡುವ ಇರಾದೆಯೂ ಇದ್ದಂತಿಲ್ಲ. ಬದಲಿಗೆ ಪೈರಸಿ ತಡೆಯಲು ತಂಡ ಆಸಕ್ತಿ ತೋರಿದೆ. ಎಲ್ಲಾ ದೊಡ್ಡ ದೊಡ್ಡ ಪೈರಸಿ ತಡೆ ತಂಡಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುತ್ತಿದೆ.

8. ರಿಷಬ್ ಶೆಟ್ಟಿ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲಾ ಕಡೆ ಹೋಗಿ ಸಂದರ್ಶನ ಕೊಡುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕಂತೂ ಅವರು ಅಂತಿಮ ಹಂತದ ಕೆಲಸಗಳಲ್ಲಿ ಭಾರಿ ಬ್ಯುಸಿ ಇದ್ದಾರೆ.

9. ಎಲ್ಲಾ ಕಡೆ ಈ ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ. ಸಿನಿಮಾ ತುಣುಕು ವೀಕ್ಷಿಸಿದವರೆಲ್ಲಾ ಅದ್ದೂರಿಯಾಗಿ ಎನ್ನುತ್ತಿದ್ದಾರೆ. ಹಾಲಿವುಡ್‌ನ ಸಾಹಸ ನಿರ್ದೇಶಕ ಟೋಡರ್‌ ಲ್ಯಾಜರೋವ್ ಅವರಂತೂ, ‘ಈ ಸಿನಿಮಾದ ಒನ್‌ಲೈನ್‌ ಕೇಳಿದ ಕೂಡಲೇ ಇದಕ್ಕೆ ಸಾಹಸ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಈ ಚಿತ್ರಕ್ಕಾಗಿ ಒಪ್ಪಿಕೊಂಡ ಎರಡು ಸಿನಿಮಾದಿಂದ ಹಿಂದೆ ಸರಿದಿದ್ದೇನೆ. ನನ್ನ ಪ್ರಕಾರ ರಿಲೀಸ್‌ ಆಗುವ ಮೊದಲೇ ಬ್ಲಾಕ್‌ ಬಸ್ಟರ್‌ ಹಿಟ್‌ ಆಗುತ್ತಿರುವ ಸಿನಿಮಾ ಕಾಂತಾರ ಚಾಪ್ಟರ್‌ 1’ ಎಂದು ಹೇಳಿದ್ದಾರೆ.

ಇಂದಿನಿಂದ ಚಾಲನೆ

10. ಈ ಕುರಿತು ಪ್ರತಿಕ್ರಿಯೆ ಕೇಳಿದ್ದಕ್ಕೆ, ಹೊಂಬಾಳೆ ಫಿಲಂಸ್‌ನ ಚಲುವೇ ಗೌಡ ಅವರು, ‘ಟ್ರೇಲರ್‌ ಬಿಡುಗಡೆ ಸೇರಿದಂತೆ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ವಿವರ ಇಂದು ಹೊರಬೀಳುತ್ತಿದೆ. ಅಧಿಕೃತವಾದ ಪ್ರಚಾರ ಕೆಲಸಕ್ಕೆ ಇಂದಿನಿಂದ ಚಾಲನೆ ಸಿಗಲಿದೆ’ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mangli Remuneration: ಸ್ಟಾರ್ ಗಾಯಕರನ್ನೂ ಮೀರಿಸ್ತಾರೆ: ಒಂದು ಹಾಡಿಗೆ ಮಂಗ್ಲಿ ಪಡೆಯೋ ಸಂಭಾವನೆ ಎಷ್ಟು?
Shocking News: 7 ತಿಂಗಳ ಗರ್ಭಿಣಿ ಕಿಯಾರಾಗೆ ಹೀಗ್ ಮಾಡ್ಬಿಟ್ಟ ಆ ಮಹಾ ಪಾಪಿ; ಈ ರಹಸ್ಯ ಹೇಳಿದ ಬಾಡಿಗಾರ್ಡ್!