ಸೂಪರ್ ಹಿಟ್ ಹಾಡುಗಳಿಗೆ ಪೇಮೆಂಟ್ ಇಲ್ಲ : ಶಾಕಿಂಗ್ ವಿಷ್ಯ ಹೇಳಿದ ಸುನಿಧಿ ಚೌಹಾಣ್

By Roopa Hegde  |  First Published Aug 5, 2024, 11:50 AM IST

ಭಾರತದ ಅಧ್ಬುತ ಗಾಯಕಿ ಸುನಿಧಿ ಚೌಹಾಣ್ ಎಲ್ಲ ಭಾಷೆಯಲ್ಲೂ ಹಾಡಿ ಸೈ ಎನ್ನಿಸಿಕೊಂಡಿದ್ದಾರೆ. ತಮ್ಮ ಧ್ವನಿ ಮೂಲಕವೇ ಇಡೀ ಪ್ರಪಂಚದ ಗಮನ ಸೆಳೆದಿರುವ ಗಾಯಕಿ, ಸಂದರ್ಶನದಲ್ಲಿ ಅಚ್ಚರಿ ಸಂಗತಿಯನ್ನು ಹೊರ ಹಾಕಿದ್ದಾರೆ.
 


ತಮ್ಮ ಸುಮಧುರ ಕಂಠದಿಂದಲೇ (Famous Indina Singer sunidhi Chauhan) ಕೋಟ್ಯಾಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ಗಾಯಕಿ ಸುನಿಧಿ ಚೌಹಾಣ್.  ಬಾಲಿವುಡ್‌ ಸೇರಿದಂತೆ ಎಲ್ಲ ಭಾಷೆಯ ಹಾಡಿಗೆ ಧ್ವನಿ ನೀಡಿ ಸೈ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ನ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿರುವ ಸುನಿಧಿ ಚೌಹಾಣ್ ಲಕ್ಷದಲ್ಲಿ ಸಂಭಾವನೆ ಪಡೆಯುತ್ತಾರೆ ಅಂತ ನಾವೆಲ್ಲ ಅಂದುಕೊಂಡಿದ್ದೇವೆ. ಆದ್ರೆ ವಾಸ್ತವವೇ ಬೇರೆ ಇದೆ. ಸುನಿಧಿ, ಸಂದರ್ಶನವೊಂದರಲ್ಲಿ ಆಘಾತಕಾರಿ ವಿಷ್ಯವನ್ನು ಹೇಳಿದ್ದಾರೆ. ಅವರ ಕೆಲ ಹಿಟ್ ಹಾಡುಗಳಿಗೆ ಈಗ್ಲೂ ಸಂಭಾವನೆ ಪಡೆದಿಲ್ಲ. 

ರಾಜ್ ಶಾಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ 40 ವರ್ಷದ ಸುನಿಧಿ ಚೌಹಾಣ್ (Sunidhi Chauhan), ಈ ವಿಷ್ಯವನ್ನು ಹೇಳಿದ್ದಾರೆ. ಹಾಡುಗಾರರಿಗೆ ನಿರ್ಮಾಪಕ (Producer) ರು ಸಂಭಾವನೆ ನೀಡುವುದಿಲ್ಲವೇ ಎಂದು ಕೇಳಿದಾಗ, ಸುನಿಧಿ ಎಲ್ಲರೂ ಸಂಭಾವನೆ (Salary ) ನೀಡುವುದಿಲ್ಲ ಎಂದಲ್ಲ. ದೊಡ್ಡ ಹಾಡುಗಾರರಿಗೆ ಅವರು ಸಂಭಾವನೆ ನೀಡ್ಲೇಬೇಕು. ಸಂಬಳ ನೀಡಿದ್ರೆ ನಾನು ಹಾಡ್ತೇನೆ ಅಂತ ಅವರು ಡಿಮಾಂಡ್ ಮಾಡಬಹುದು. ಆದ್ರೆ ನನಗೆ ಹಾಡು ಮುಖ್ಯ, ಸಂಭಾವನೆ ಅಲ್ಲ ಎಂದು ಅವರು ಭಾವಿಸಿದ್ರೆ ಅದು ಅವರ ಆಯ್ಕೆ ಎಂದಿದ್ದಾರೆ. 

Tap to resize

Latest Videos

ಸೀರೆಯ ಸೆರಗು ಕೆಳಕ್ಕೆ ಬಿದ್ದ ತಕ್ಷಣ ಓಡೋಡಿ ಬರೋ ಸಿಬ್ಬಂದಿ! ಶ್ವೇತಾ ತಿವಾರಿ ವಿಡಿಯೋ ಸಕತ್​ ಟ್ರೋಲ್​

ಇನ್ನು ಸಂಭಾವನೆ (Renumeration) ನೀಡ್ತೇವೆ ಎಂದು ಸುಳ್ಳು ಭರವಸೆ ನೀಡಿದ ಘಟನೆ   ನಡೆಯುತ್ತದೆಯೇಎನ್ನುವ ಪ್ರಶ್ನೆಗೆ ಸುನಿಧಿ ಚೌಹಾಣ್, ಹೌದು, ಅದು ಆಗುತ್ತದೆ. ಆದ್ರೆ ನಾನು ಇಲ್ಲಿ ಹೇಳಲಾರೆ, ನನಗೆ ಹಾಗಾಗಿಲ್ಲ ಎಂದು ಸುನಿಧಿ ಚೌಹಾಣ್ ಹೇಳಿದ್ದಾರೆ.  

ನಾನು ಅನೇಕ ಚಿತ್ರಗಳಿಗೆ ಹಣ ಪಡೆದಿಲ್ಲ.  ನನಗೆ ಹಣ ಸಿಕ್ಕಿಲ್ಲ ಅಂದ್ರೆ ಅವರು ನನಗೆ ಸಂಭಾವನೆ ನೀಡಿಲ್ಲ ಎಂದಲ್ಲ. ನಾನು ಅವರಿಂದ ಪಡೆದಿಲ್ಲ. ಒಂದು ಹಾಡಿಗೆ ಹಣ ತೆಗೆದುಕೊಳ್ಳಲು ನನಗೆ ಮನಸ್ಸಾಗೋದಿಲ್ಲ ಎಂದು ಸುನಿಧಿ ಚೌಹಾಣ್ ಹೇಳಿದ್ದಾರೆ. 

ನಿರ್ಮಾಪಕರಿಂದ ಹಣ ತೆಗೆದುಕೊಳ್ಳಬಾರದು ಎನ್ನುವ ಸಮಯದಲ್ಲಿ ಅದನ್ನು ತಪ್ಪಿಸಲು ಯಾವ ತಂತ್ರವನ್ನು ಅಳವಡಿಸಿಕೊಳ್ತೇನೆ ಎಂಬುದನ್ನು ಸುನಿಧಿ ಚೌಹಾಣ್ ಹೇಳಿದ್ದಾರೆ. ನನಗೆ ಸಹಾಯ ಮಾಡಬೇಕೆಂದು ಅನ್ನಿಸಿದ್ದಿದೆ. ಆದ್ರೆ ನಾನು ಸಹಾಯ ಮಾಡ್ತೇನೆ ಎಂಬುದು ಅವರಿಗೆ ತಿಳಿಯಬಾರದು. ಹಾಗಾಗಿ ನಾನು ಮೊದಲು ಪೇಮೆಂಟ್ ಹೇಳ್ತೇನೆ. ಅವರ ಕೆಲಸ ಮಾಡ್ತೇನೆ. ಅವರ ಸಿನಿಮಾಕ್ಕೆ ಹಾಡ್ತೇನೆ. ಆ ನಂತ್ರ ನನಗೆ ಪೇಮೆಂಟ್ ಬೇಡ ಎನ್ನುತ್ತೇನೆ. ನಾನು ಅವರ ಇಗೋ ಹರ್ಟ್ ಮಾಡಲು ಬಯಸುವುದಿಲ್ಲ. ಎಲ್ಲರೂ ನಮ್ಮಂತೆ ಆಲೋಚನೆ ಮಾಡುವುದಿಲ್ಲ. ನಮ್ಮ ಮನಸ್ಥಿತಿ ಏನು, ನಾವು ಏನು ಆಲೋಚನೆ ಮಾಡ್ತೇವೆ ಎಂಬುದನ್ನು ಅವರು ತಿಳಿದಿರೋದಿಲ್ಲ. ಅಂಥ ಸಮಯದಲ್ಲಿ ಈ ತಂತ್ರಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ ಎಂದು ಸುನಿಧಿ ಚೌಹಾಣ್ ಹೇಳ್ತಾರೆ.

ಸಂದರ್ಶನದಲ್ಲಿ ಸುನಿಧಿ ಚೌಹಾಣ್ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಡಾನ್ಸ್ ಮಾಡ್ತಾ ಹಾಡನ್ನು ಪ್ರಾಕ್ಟೀಸ್ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ನಾನು ಕುತ್ತಿಗೆಯನ್ನು ಬಾಗಿಸಿದಾಗ್ಲೂ ನನ್ನ ಧ್ವನಿ ಚೇಂಜ್ ಆಗ್ಬಾರದು. ಹಾಗಾಗಿ ನಾನು ಡಾನ್ಸ್ ಮಾಡ್ತಾ ಹಾಡಲು ಕಲಿತಿದ್ದೇನೆ ಎಂದಿದ್ದಾರೆ.

ಸೀರಿಯಲ್​ ಶೂಟಿಂಗ್​ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ

ಇನ್ನು ಭಾರತದಲ್ಲಿ ಫೀಮೇಲ್ ಪಾಪ್ ಸ್ಟಾರ್ಸ್ ಕಡಿಮೆ ಎನ್ನುವ ವಿಷ್ಯದ ಬಗ್ಗೆ ಮಾತನಾಡಿದ ಸುನಿಧಿ, ಭಾರತದಲ್ಲಿ ಕ್ರಿಕೆಟ್ ಹಾಗೂ ಸಿನಿಮಾಕ್ಕೆ ಹೆಚ್ಚು ಆದ್ಯತೆ ಇದೆ ಎಂದಿದ್ದಾರೆ. ಇಲ್ಲಿ ವೇಷ – ಭೂಷಣವನ್ನು ಹೆಚ್ಚು ಗಮನಿಸ್ತಾರೆ. ನನ್ನ ಬಗ್ಗೆಯೂ ಜನ ಹೀಗೆ ಮಾತನಾಡ್ತಿದ್ದರು. ಆಕೆ ಏನ್ ಧರಿಸಿದ್ದಾಳೆ ಎಂದೇ ಮಾತು ಶುರುವಾಗಿತ್ತು. ಆದ್ರೆ ನಿಧಾನವಾಗಿ ಭಾರತೀಯರ ಆಲೋಚನೆ ಕೂಡ ಬದಲಾಗ್ತಿದೆ ಎಂದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಆಟೋ ಟ್ಯೂನ್ ಬಳಸುವುದಿಲ್ಲ ಎಂದು ಸುನಿಧಿ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Raj Shamani (@rajshamani)

click me!