ಟ್ರೆಂಡ್ ಅನ್ನೋ ಹೆಸರಿನಲ್ಲಿ ಸ್ಟೈಲ್ ಮಾಡಲು ಹೋಗಿ ಟ್ರೋಲ್ ಆದ ನಿಯಾ ಶರ್ಮಾ. ವಿಡಿಯೋ ನೋಡಿ ಕೆಟ್ಟ ಕಾಮೆಂಟ್ ಮಾಡಿದ ನೆಟ್ಟಿಗರು....
ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಧರಿಸುವ ಉಡುಪುಗಳು ನಿಜಕ್ಕೂ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ನಾವು ಅವರಂತೆ ಧರಿಸಬೇಕು ಎಂದು ಫಾಲೋವರ್ಸ್ ಮತ್ತು ಅಭಿಮಾನಿಗಳು ಹೇಳುವುದು ಸಾಮಾನ್ಯ. ಆದರೆ ಮನೆಯಲ್ಲಿ ಧರಿಸುವ ಉಡುಪಿನಲ್ಲಿ ರಸ್ತೆಗೆ ಬಂದರೆ ಏನು ಮಾಡಬೇಕು? ಹಾಟ್ ಹಾಟ್ ಆಗಿರುವ ಬ್ರಾಲೆಟ್‌ನ ನಟಿ ನಿಯಾ ಶರ್ಮಾ ಖಾಸಗಿ ಕಾರ್ಯಕ್ರಮಕ್ಕೆ ಧರಿಸಿ ಟ್ರೋಲ್ ಆಗಿದ್ದಾರೆ.
ಹಿಂದಿ ಕಿರುತೆರೆ ಜನಪ್ರಿಯ ನಟಿ ನಿಯಾ ಶರ್ಮಾ, ಭಾನುವಾರ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಆಗ ನಿಯಾ ಧರಿಸಿದ್ದ ಬಿಳಿ ಬಣ್ಣದ ಬ್ರಾಲೆಟ್ ಮತ್ತು ಟ್ರ್ಯಾಕ್ ಪ್ಯಾಂಟ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಬ್ರಾಗೆ ಬಿಳಿ ಹೂವುಗಳ ಡಿಸೈನ್ ಇದ್ದರೂ ಫ್ಯಾಷನ್ ಎನ್ನುವ ಪಟ್ಟ ಕೊಟ್ಟರೂ, ವಿಶೇಷ ಅತಿಥಿಗಳು ಧರಿಸುವ ಉಡುಪು ಅಲ್ಲ ಅನ್ನೋದು ನೆಟ್ಟಿಗರ ವಾದ. 'ಏನ್ ಮೇಡಂ ಮನೆಯಲ್ಲಿ ಒಂದು ಚೆನ್ನಾಗಿರುವ ಡ್ರೆಸ್ ಇಲ್ವಾ? ಇಷ್ಟೋಂದು ಕೆಟ್ಟದಾಗಿ ಬಂದಿದ್ದೀರಾ...ಅಸಹ್ಯ' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಗಂಡು ದಿಕ್ಕಿಲ್ಲದ ಸಂಸಾರವನ್ನು ನಾನೇ ನೋಡಿಕೊಂಡೆ; 'ಶಾಸ್ತ್ರಿ' ನಟಿ ಮಾನ್ಯ ಭಾವುಕ
ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ನಿಯಾ ಶರ್ಮಾ ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ ಚಿತ್ರದಲ್ಲಿ ಮಾನ್ವಿ ಔಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಇನ್ನು ಜೀ ವಾಹಿನಿಯಲ್ಲಿ ರಾಜಾ, ಕಲರ್ಸ್ ವಾಹಿನಿಯಲ್ಲಿ ಇಷ್ಕ್ ಮೇ ಮಾರ್ಜಾವಾನ್, ನಾಗಿಣಿ 4 ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಇನ್ನು ಖತ್ರೋನ್ ಕೆ ಖಿಲಾಡಿ 8ರಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು. ಮೇಡ್ ಇನ್ ಇಂಡಿಯಾದಲ್ಲಿ ಭಾಗವಹಿಸಿ ವಿಜೇತರಾಗಿ ಹೊರ ಹೊಮ್ಮಿದ್ದರು.