
ಮುಂಬೈ(ಜೂ.20): ಹನುಮಾನ್ ದೇವರೇ ಅಲ್ಲ. ಇದು ವಿವಾದಿತ ಆದಿಪುರುಷ್ ಚಿತ್ರದ ಸಂಭಾಷಣೆಕಾರ ಮನೋಜ್ ಮುನ್ತಾಶಿರ್ ನೀಡಿದ ಹೇಳಿಕೆ. ಇದೀಗ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದಿಪುರುಷ್ ಚಿತ್ರ ಹಿಂದೂ ಧಾರ್ಮಿಕ ನಂಬಿಕೆ, ಭಕ್ತಿಯನ್ನೇ ಅಣಕಿಸುತ್ತಿದೆ. ಶ್ರೀರಾಮ, ಹನುಮಾನ್, ಸೀತಾಮಾತೆಗೆ ಅಪಮಾನ ಮಾಡಲಾಗಿದೆ ಅನ್ನೋ ಆರೋಪ, ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಆದಿಪುರುಷ್ ಚಿತ್ರದ ಸಂಭಾಷಣೆಕಾರ ಮನೋಜ್ ಮುನ್ತಾಶೀರ್ ನೀಡಿದ ಹೇಳಿಕೆ ಮತ್ತೊಂದು ಸುತ್ತಿನ ಪ್ರತಿಭಟನೆಗೆ ಕಾರಣವಾಗಿದೆ. ಹಿಂದೂಗಳ ಆರಾದ್ಯ ದೈವ ಶ್ರೀ ಹನುಮಾನ್ ದೇವರೇ ಅಲ್ಲ ಎಂದು ಮನೋಜ್ ಮುನ್ತಾಶೀರ್ ಹೇಳಿದ್ದಾರೆ.
ಆದಿಪುರುಷ ಚಿತ್ರ ರಾಮಾಯಣವನ್ನೇ ಅಣಕಿಸಿದೆ. ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದೆ. ಸನಾತನ ಧರ್ಮಕ್ಕೆ ಅಪಮಾನ ಮಾಡಿದೆ ಅನ್ನೋ ಆರೋಪ ಒಂದಡೆಯಾದರೆ, ಮತ್ತೊಂದೆಡೆ ಇದರ ಸಂಭಾಷಣೆ ಕೊಳಕು ಮಟ್ಟದ್ದಾಗಿದೆ. ಟಪೋರಿ ಭಾಷೆ ಬಳಸಿ ಶ್ರೀರಾಮ, ಹನುಮಾನ್,ಸೀತಾಮಾತೆಗೆ ಅವಮಾನ ಮಾಡಿದ್ದಾರೆ ಆರೋಪ. ಇದರ ಬೆನ್ನಲ್ಲೇ ಮನೋಜ್ ಮುನ್ತಾಶೀರ್, ಹನುಮಾನ್ ದೇವರೇ ಅಲ್ಲ ಎಂಬ ಹೇಳಿಕೆ ನೀಡಿದ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.
ಆದಿಪುರುಷ್ ಚಿತ್ರಕ್ಕೆ ಹೆಚ್ಚಿದ ಸಂಕಷ್ಟ; ನಿಷೇಧಕ್ಕಾಗಿ ಪ್ರಧಾನಿ ಮೋದಿಗೆ ಸಿನಿ ವರ್ಕರ್ಸ್ ಸಂಘ ಪತ್ರ!
ಹನುಮಾನ್ ದೇವರಲ್ಲ. ನಾವು ಭಜರಂಗಬಲಿಯನ್ನು ದೇವರು ಮಾಡಿದ್ದೇವೆ ಅಷ್ಟೆ. ಹನುಮಾನ್ ಓರ್ವ ಭಕ್ತ. ರಾಮನ ಮೇಲಿನ ಭಕ್ತಿಯಿಂದ ನಾವು ದೇವರ ಸ್ಥಾನ ನೀಡಿದ್ದೇವೆ ಎಂದು ಮನೋಜ್ ಮುನ್ತಾಶೀರ್ ಹೇಳಿದ್ದಾರೆ. ಹನುಮಾನ್ ನಮಗೆ ದೇವರು. ನಮ್ಮ ಆರಾದ್ಯ ದೇವರು. ಕೊಳಕು ಸಂಭಾಷಣೆ ಬರೆದು ನಮ್ಮ ದೇವರನ್ನೇ ಅಪಮಾನಿಸಿದ ವ್ಯಕ್ತಿಯಿಂದ ನಮಗೆ ಪಾಠ ಬೇಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಂಭಾಷಣೆ ವಿರುದ್ಧ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಮನೋಜ್ ಮುನ್ತಾಶಿರ್ ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳಿಗೆ ನೋವಾಗಿದೆ ಕಾರಣಕ್ಕೆ ಸಂಭಾಷಣೆಗೆ ಕತ್ತರಿ ಹಾಕಲು ನಿರ್ಧರಿಸಿದ್ದೇವೆ. ಆದರೆ ಸಂಭಾಷಣೆ ತಪ್ಪಾಗಿಲ್ಲ ಎಂದು ಸಮರ್ಥಿಸಿದ್ದರು. ಸಂಭಾಷಣೆ ಸಮರ್ಥಿಸಿಕೊಳ್ಳಲು ನನಗೆ ನೂರು ಕಾರಣವಿರಬಹುದು. ಆದರೆ ಅದು ಅಭಿಮಾನಿಗಳ ನೋವು ದೂರಮಾಡದು. ಪ್ರೇಕ್ಷಕರ ಅಭಿಮತಕ್ಕಿಂತ ನನಗೆ ಯಾವುದೂ ದೊಡ್ಡದಲ್ಲ. ಹೀಗಾಗಿ ಅಭಿಮಾನಿಗಳ ಆಕ್ಷೇಪಕ್ಕೆ ಕಾರಣವಾದ ಕೆಲ ಸಂಭಾಷಣೆಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ ವಾರದಿಂದಲೇ ಈ ಬದಲಾವಣೆ ಚಿತ್ರದಲ್ಲಿ ಕಾಣಸಲಿದೆ’ ಎಂದು ಹೇಳಿದ್ದರು.
ವಿವಾದಗಳ ಗೂಡಾಗಿದೆ ಪ್ರಭಾಸ್ ನಟನೆಯ ಆದಿಪುರುಷ್!: ಇನ್ಮುಂದೆ ಬಾಲಿವುಡ್ ಸಿನಿಮಾಗೆ ಹೊಸ ರೂಲ್ಸ್
ಸಿನಿಮಾ ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರು. ಆದಾಯ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿತ್ತು. ಆದರೆ ಇದೀಗ ಈ ಚಿತ್ರದ ಗಳಿಕೆ 16ಕೋಟಿಗೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆದಿಪುರುಷ್ ಚಿತ್ರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿರುವುದ ಸ್ಪಷ್ಟವಾಗಿದೆ. ರಾಮಾಯಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಅನಿಮೇಶನ್ ಸಿನಿಮಾ ಜೂ.16ರಂದು ಬಿಡುಗಡೆಯಾಗಿದ್ದು, ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.