ಸಿಂಗರ್ ಅರ್ಜಿತ್ ಸಿಂಗ್ ಹಾಡು ಹಾಡುತ್ತಲೆ ಭಾವುಕಳಾದ ಅಭಿಮಾನಿಗೆ ಕಣ್ಣೀರು ಒರೆಸು ನಗಲು ಸೂಚಿಸಿದ ಘಟನೆ ನಡೆದಿದೆ. ಹಾಡುತ್ತಿದ್ದಂತೆ ಅಭಿಮಾನಿಯ ಸಂತೈಸಿದ ಅರ್ಜಿತ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಲಂಡನ್(ಸೆ.18) ಗಾಯಕ ಅರ್ಜಿತ್ ಸಿಂಗ್ ಹಾಡಿಗೆ ಮನಸೋಲದವರು ಯಾರಿದ್ದಾರೆ? ಅದ್ಭು ಕಂಠಸಿರಿಯ ಗಾಯಕನ ಹಾಡುಗಳು ಎಂತವರ ಮನಸ್ಸನ್ನೂ ಕರಗಿಸುತ್ತದೆ. ಹೀಗೆ ಲಂಡನ್‌ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅರ್ಜಿತ್ ಸಿಂಗ್ ಹಾಡಿನ ಮೂಲಕ ಮೋಡಿ ಮಾಡಿದ್ದರೆ, ಇತ್ತ ಅಭಿಮಾನಿಯೊಬ್ಬಳು ಭಾವುಕಳಾಗಿದ್ದಳು. ವೇದಿಕೆಯ ಕೆಳಭಾಗದಲ್ಲಿ ನಿಂತಿದ್ದ ಅಭಿಮಾನಿ ಕಣ್ಣೀರಾಗಿದ್ದಾರೆ. ಇದನ್ನು ಗಮನಿಸಿದ ಅರ್ಜಿತ್ ಸಿಂಗ್, ಹಾಡುತ್ತಿದ್ದಂತೆ ಕೈ ಸನ್ನೆ ಮೂಲಕ ಕಣ್ಣೀರು ಒರೆಸು ನಗುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ವೇದಿಕೆಯಿಂದಲೇ ಅಭಿಮಾನಿಯ ಸಂತೈಸಿದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅರ್ಜಿತ್ ಸಿಂಗ್ ಹೃದಯಸ್ಪರ್ಶಿ ನಡೆಗೆ ಇದೀಗ ದೇಶ ವಿದೇಶಗಳಲ್ಲಿ ಮೆಚ್ಚುಗೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅರ್ಜಿತ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವತಿ ತಾನು ಭಾವುಕಳಾಗಿದ್ದೇಕೆ ಹಾಗೂ ದೇವರೇ ಅರ್ಜಿತ್ ಸಿಂಗ್ ಮೂಲಕ ನನ್ನಲ್ಲಿ ಮಾತನಾಡುತ್ತಿದ್ದಾನೆ ಎಂದೆನಿಸಿತು ಎಂದು ಬರೆದುಕೊಂಡಿದ್ದಾಳೆ. ಇಷ್ಟೇ ಅಲ್ಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸೈನ್ಸ್ ಬಿಟ್ಟು ಆರ್ಟ್ಸ್ ಓದಿದ್ಯಾಕೆ ಖ್ಯಾತ ಗಾಯಕ; ಮುಖ್ಯವಾದ ಘಟನೆ ಹಂಚಿಕೊಂಡ್ರು ಅರಿಜಿತ್ ಸಿಂಗ್!
ಆರತಿ ಖೇತರ್‌ಪಾಲ್ ಅನ್ನೋ ಅಭಿಮಾನಿ ಅರ್ಜಿತ್ ಸಿಂಗ್ ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅರ್ಜಿತ್ ಸಿಂಗ್ ಹಾಡಿದ ಹಾಡು ಈಕೆಯನ್ನು ಭಾವುಕಳನ್ನಾಗಿ ಮಾಡಿತ್ತು. ಮಾಜಿ ಗೆಳೆಯನ ಮಾತುಗಳು, ಆಶ್ವಾಸನೆ, ನಂಬಿಕೆ ದ್ರೋಹ, ಸುಳ್ಳು ವಂಚನೆ ಕೊನೆಗೆ ಸಂಬಂಧದಲ್ಲಿ ಬಿರುಕು ಎಲ್ಲವನ್ನೂ ನೆನೆದು ಭಾವುಕಳಾಗಿದ್ದಳು. ಅಭಿಮಾನಿ ಭಾವುಕಳಾಗಿ ಕಣ್ಣೀರಾಗುತ್ತಿದ್ದಂತೆ ಗಮನಿಸಿದ ಅರ್ಜಿತ್ ಸಿಂಗ್ ನೇರವಾಗಿ ಅಭಿಮಾನಿಯ ನಿಂತಿದ್ದ ವೇದಿಕೆಯ ಮುಂಭಾಗಕ್ಕೆ ಬಂದು ಅಲ್ಲೆ ಕುಳಿತು ಅಭಿಮಾನಿಗಾಗಿ ಹಾಡಿದ್ದಾರೆ. ಕಣ್ಣೀರು ಒರೆಸಿ ಬಿಡು, ಮುಖುದಲ್ಲಿ ನಗುವಿರಲಿ. ಹಳೇಯ ವಿಚಾರ ಮರೆತು ಖುಷಿಯಾಗಿರುವು ಎಂದು ಹಾಡಿದ್ದಾರೆ. ಇದೇ ವೇಳೆ ಕೈ ಸನ್ನೇ ಮೂಲಕವೂ ಅಭಿಮಾನಿಗ ಸೂಚಿಸಿದ್ದಾರೆ. ವೇದಿಕೆಯಿಂದಲೇ ಅರ್ಜಿತ್ ಸಿಂಗ್ ಅಭಿಮಾನಿಯ ಸಂತೈಸಿದ್ದಾರೆ.
ಘಟನೆ ಕುರಿತು ವಿವರಿಸಿರುವ ಆರತಿ, ನನಗೆ ದೇವರೆ ಅರ್ಜಿತ್ ಸಿಂಗ್ ರೂಪದಲ್ಲಿ ಬಂದು ನನ್ನಲ್ಲಿ ಮಾತಾನಾಡುವಂತೆ, ಸಂತೈಸುವಂತೆ ಆಗಿತ್ತು. ಹಲವರು ನಿಮ್ಮ ಬಾಳಲ್ಲಿ ನಡೆದಿರುವ ಘಟನೆಗಳಿಗೆ ಹೋಲಿಸಿದರೆ ಅರ್ಥವಾಗಬಹುದು. ಇನ್ನುಳಿದವರಿಗೆ ಆಗಲ್ಲ. ಇಂದಿನ ಸಂಗೀತ ಕಾರ್ಯಕ್ರಮ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಬರೆದಿದೆ ಎಂದು ಆರತಿ ಹೇಳಿಕೊಂಡಿದ್ದಾರೆ. ದೇವರು ನಮಗೆ ಹಲವು ರೂಪದಲ್ಲಿ ಸೂಚನೆ ಸಂಜ್ಞೆಗಳನ್ನು ನೀಡುತ್ತಾನೆ. ಆದರೆ ನಾವು ತಾಳ್ಮೆಯಿಂದ ಗಮನಿಸಬೇಕು ಎಷ್ಟೇ. ಇದಕ್ಕಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಅಭಿಮಾನಿಯನ್ನು ಸಂತೈಸಿ ಬಾಳಿನಲ್ಲಿ ಹೊರ ಹುರುಪು, ಆತ್ಮವಿಶ್ವಾಸ ತುಂಬಿದ ಅರ್ಜಿತ್ ಸಿಂಗ್ ನಡೆಗೆ ಅಭಿನಂದನೆಗಳು ವ್ಯಕ್ತವಾಗಿದೆ. ಜೀವಮಾನದಲ್ಲಿ ಒಮ್ಮೆಯಾದರೂ ಅರ್ಜಿತ್ ಸಿಂಗ್ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಒಂದೇ ಕಾರ್ಯಕ್ರಮದಲ್ಲಿ ಅರ್ಜಿತ್ ಸಿಂಗ್ ನಿಮ್ಮನ್ನು ನಗಿಸುತ್ತಾರೆ, ಅಳಿಸುತ್ತಾರೆ, ಭಾವುಕನ್ನಾಗಿ ಮಾಡುತ್ತಾರೆ, ಹಳೇ ನೆನಪಿಗೆ ಕೊಂಡೊಯ್ಯುತ್ತಾರೆ, ಹೃದಯಕ್ಕೆ ಹತ್ತಿರವಾಗುತ್ತಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ ಗಳಿಸಿದ್ದು ಇದೇ ಅಲ್ವಾ?
ಇದೇ ವೇಳೆ ಹಲವರು ಸಂಗೀತ ಕಾರ್ಯಕ್ರಮದಲ್ಲಿ ಅರ್ಜಿತ್ ಸಿಂಗ್ ನಡೆದುಕೊಳ್ಳುವ ರೀತಿ ಸೇರಿದಂತೆ ಹಲವು ಘಟನೆಗಳನ್ನು ವಿವರಿಸಿದ್ದಾರೆ. ದಿಗ್ಗಜ ಗಾಯಕ ಅರ್ಜಿತ್ ಸಿಂಗ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದಿದ್ದಾರೆ.