ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!

By Suchethana D  |  First Published Sep 18, 2024, 2:19 PM IST

ಒಬ್ಬ ಹುಡುಗಿ ಆಮೀರ್​ ಖಾನ್​ ಬಳಿ ಬಂದು ನಿಮ್ಮ ಜೊತೆ ನಾನು ಮಲಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಳಂತೆ! ಈ ವಿಷಯವನ್ನು ಪತ್ನಿ ಕಿರಣ್​ ರಾವ್​ ಎದುರೇ ನಟ ಹೇಳಿದಾಗ ರಿಯಾಕ್ಷನ್​ ಹೇಗಿತ್ತು ನೋಡಿ...
 


ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್​​ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ  ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.  ಕೆಲವು ಬಾಲಿವುಡ್ ನಟರಂತೆ   ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು  ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ  ಇಬ್ಬರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್​ ರಾವ್​ ಅವರಿಂದ ಆಜಾದ್​ ರಾವ್​ ಖಾನ್​ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ.  ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ  ಡಿಸೆಂಬರ್​ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್​ ಅವರ ಮದುವೆ ಸಮಾರಂಭಕ್ಕೆ ಕಿರಣ್​ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.

ಇದೀಗ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದು ಆಮೀರ್​ ಇನ್ನೂ ಕಿರಣ್​ ಅವರಿಗೆ ಡಿವೋರ್ಸ್​ ಕೊಟ್ಟಿರದ ಸಮಯ. ಆಗ ವಿವಾದಿತ ಟಾಕ್​ ಷೋ, ಕಾಫಿ ವಿತ್​ ಕರಣ್​ ಜೋಹರ್​ನಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಕರಣ್​ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಆಮೀರ್​ ಅವರು ಒಬ್ಬ ಹುಡುಗಿ ನೇರವಾಗಿ ತಮ್ಮ ಬಳಿಗೆ ಬಂದು ನನ್ನ ಜೊತೆ ಮಗಲುತ್ತಿಯಾ ಎಂದು ಕೇಳಿದ್ಲಂತೆ. ಇದನ್ನು ಕೇಳಿ ಕಿರಣ್​ ರಾವ್​​ಗೆ ಶಾಕ್​ ಆಯ್ತು. ಇದನ್ನು ನೀವು ನನಗೆ ಹೇಳೇ ಇರಲಿಲ್ಲಾ ಎಂದರು. ನಿನಗೆ ಹೇಳಿದ್ದೆ, ನೆನಪಿಲ್ಲ ಎಂದು ಆಮೀರ್​ ಉತ್ತರ ಕೊಟ್ಟರು. ಬಳಿಕ, ಕರಣ್​ ಅವರು ಆಗ ನೀವು ಏನು ಹೇಳಿದ್ರಿ ಎಂದು ಪ್ರಶ್ನಿಸಿದ್ದರು. ನಾನು ಆಗ ಬೇಡ ಎಂದೇ ಹೇಳಿದೆ. ಆದರೆ ವಿಷಯ ಅದಲ್ಲ, ಆ ಹುಡುಗಿಯ ಧೈರ್ಯಕ್ಕೆ ನಾನು ಈಗಲೂ ಮೆಚ್ಚುತ್ತೇನೆ. ನೇರವಾಗಿ ಬಂದು ಇಂಥ ಬೋಲ್ಡ್​ ಪ್ರಶ್ನೆ ಕೇಳುವುದು ಎಂದರೆ ಸುಲಭವಲ್ಲ ಎಂದರು. ಇದರ ವಿಡಿಯೋ ವೈರಲ್​  ಆಗುತ್ತಿದ್ದಂತೆಯೇ ನಿಜ ಹೇಳಿ, ಆ ಹುಡುಗಿ ಹೇಳಿದಂತೆ ನೀವು ಕೇಳಲಿಲ್ವಾ ಎಂದು ನಟನ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು. ಈ ಷೋ ಮುಗಿದು ಮನೆಗೆ ಹೋದ್ಮೇಲೆ ಆಮೀರ್​ ಖಾನ್​ ಗತಿ ಏನಾಯ್ತೋ ಎಂದು ಗೊತ್ತಾಗಲಿಲ್ಲ ಎಂದ್ರೆ, ಮತ್ತೆ ಕೆಲವರು ಬಹುಶಃ ಈ ಷೋ ಬಳಿಕವೇ ಕಿರಣ್​ ಆಮೀರ್​ಗೆ ಡಿವೋರ್ಸ್​ ಕೊಡಲು ಮುಂದಾಗಿರಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಆಮೀರ್​ ಖಾನ್​ ಮಾತಿಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. 

Tap to resize

Latest Videos

ಹೆಣ್ಣೆಂದು ತಿಳಿದು ಆ ರಾಜಕಾರಣಿ ಸಂಬಂಧ ಬೆಳೆಸಿದ್ರು, ಆಮೇಲೆ... ಕಾಂಗ್ರೆಸ್​ ಮುಖಂಡೆ ಚರಿತಾ ನೋವಿನ ನುಡಿ...

ಇನ್ನು ಈ ಜೋಡಿ ಕುರಿತು ಹೇಳುವುದಾದರೆ,  Laapataa ಎಂಬ ಚಿತ್ರದಲ್ಲಿ ಆಮೀರ್​ ಖಾನ್​ ಮತ್ತು ಕಿರಣ್​ ಅವರು ಒಟ್ಟಿಗೇ ಕೆಲಸ ಮಾಡಿದ್ದಾರೆ.   ಕಳೆದ ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆಯಾಗಿ ಹಲವು ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.  ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಕೂಡ ಪ್ರದರ್ಶನಗೊಂಡಿದೆ.  15 ವರ್ಷಗಳ ದಾಂಪತ್ಯದ ಬಳಿಕ  ಆಮೀರ್ ಮತ್ತು ಕಿರಣ್ ಬೇರೆ ಬೇರೆಯಾದವರು. ಡಿವೋರ್ಸ್​ ಬಳಿಕ ಮತ್ತೆ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡುತ್ತಿರುವುದನ್ನು ಕಂಡ ಹಲವರು ಹುಬ್ಬೇರಿಸಿದ್ದೂ ಆಗಿದೆ.  ಆದ್ದರಿಂದ ವಿಚ್ಛೇದನದ ಬಳಿಕ ಒಟ್ಟಿಗೆ ಅದ್ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆ ಆಮೀರ್​ ಖಾನ್​ ಅವರಿಗೆ ಎದುರಾಗುತ್ತಿದ್ದಂತೆಯೇ, ಆಮೀರ್​ ಸ್ವಲ್ಪ ಗರಂ ಆದರು. ಪಾಪರಾಜಿಗಳು ಈ ಪ್ರಶ್ನೆ ಕೇಳಿದಾಗ ಸ್ವಲ್ಪ ಸಿಟ್ಟುಕೊಂಡರೂ ಸುಧಾರಿಸಿಕೊಂಡ ಆಮೀರ್​ ಖಾನ್​, ಯಾಕೆ ಪತಿ-ಪತ್ನಿ ದೂರದೂರವಾದ ಮೇಲೆ ಒಟ್ಟಿಗೇ ಕೆಲಸ ಮಾಡಬಾರದು ಎಂದು ಯಾವುದಾದ್ರೂ ಡಾಕ್ಟರ್​ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದರು. 

ಆಮೀರ್​ ಖಾನ್ ಮೊದಲ ಪತ್ನಿ ರೀನಾ ದತ್ತ ಅವರಿಗೆ ಡಿವೋರ್ಸ್​ ಕೊಡಲು ಕಿರಣ್​ ರಾವ್​ ಅವರೇ ಕಾರಣ ಎನ್ನುವ ಸುದ್ದಿ ಆಗಲೂ ಹರಡಿತ್ತು, ಈಗಲೇ ಇದರ ಸುದ್ದಿಯಾಗುತ್ತಲೇ ಇದೆ. ಲಗಾನ್ ಬಿಡುಗಡೆಯಾದ ಒಂದು ವರ್ಷದ ನಂತರ 2002 ರಲ್ಲಿ ಆಮೀರ್​​ ಮತ್ತು ರೀನಾ ತಮ್ಮ ಮದುವೆಯನ್ನು ಕೊನೆಗೊಳಿಸಿದರು. ಕುತೂಹಲಕಾರಿಯಾಗಿ, ಕಿರಣ್ ಲಗಾನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು, ಇದು ಅವರ ಪತ್ನಿ ರೀನಾ ದತ್ತಾದಿಂದ ನಟನ ವಿಚ್ಛೇದನಕ್ಕೆ ಅಮೀರ್‌ನೊಂದಿಗಿನ ಪ್ರಣಯ ಸಂಬಂಧದ ಕಾರಣ ಎಂದು ಅನೇಕರು ನಂಬಲು ಕಾರಣವಾಯಿತು. ಇದಕ್ಕೆ ಈಗ ಕಿರಣ್​ ರಾವ್​ ಸ್ಪಷ್ಟನೆ ನೀಡಿದ್ದರು.  ಆಮೀರ್​ ಖಾನ್​ ಅವರು ರೀನಾ ದತ್ತ ಅವರಿಗೆ ಡಿವೋರ್ಸ್​ ಕೊಟ್ಟ ಬಳಿಕವಷ್ಟೇ ನಾವಿಬ್ಬರೂ ಡೇಟಿಂಗ್​ ಪ್ರಾರಂಭಿಸಿದ್ದು ಎಂದು ಸ್ಪಷ್ಟಪಡಿಸಿದ್ದರು.  

ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...
 

click me!