ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿ, ಸಾವನ್ನು ಜಯಿಸಲು ಆಸ್ಪತ್ರೆಗೆ ದಾಖಲಾದ ನಟಿ ಹಿನಾ ಖಾನ್!

By Suchethana D  |  First Published Sep 18, 2024, 12:53 PM IST

3ನೇ ಹಂತದ ಸ್ತನ ಕ್ಯಾನ್ಸರ್ ಬೆನ್ನಲ್ಲೇ ​ ಮ್ಯೂಕೋಸಿಟಿಸ್‌ ಸಮಸ್ಯೆಯಿಂದ ಬಳಲುತ್ತಿದ್ದರೂ ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿದ್ದಾರೆ ನಟಿ ಹಿನಾ ಖಾನ್​. ಪುನಃ ಆಸ್ಪತ್ರೆಗೆ ದಾಖಲಾದ ನಟಿಗೆ ಶ್ಲಾಘನೆಗಳ ಮಹಾಪೂರ ಹರಿದುಬರುತ್ತಿದೆ. 
 


ಕಿರುತೆರೆ ನಟಿ ಹಿನಾ ಖಾನ್​ ಕ್ಯಾನ್ಸರ್​ ಜೊತೆ  ಹೋರಾಟ ಮಾಡುತ್ತಿದ್ದಾರೆ. ಮೂರನೆಯ ಹಂತದ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ನಡುವೆಯೇ, ಮ್ಯೂಕೋಸಿಟಿಸ್‌ ಎಂಬ ಮಹಾಮಾರಿಯೂ ಅವರ ದೇಹ ಸೇರಿದೆ. ಕ್ಯಾನ್ಸರ್​ನಿಂದ  ಹೊರಬರಲು ನಿರ್ಧರಿಸಿದ್ದೇನೆ ಎಂದು  36 ವರ್ಷದ ಹಿನಾ ಖಾನ್​ ಹೇಳಿದ್ದರು. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದೊಂದು ಸವಾಲಿನ ರೋಗದ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನಾನು ಬಲಶಾಲಿ, ದೃಢನಿಶ್ಚಯ ಹೊಂದಿದ್ದೇನೆ. ಈ ರೋಗವನ್ನು ಜಯಿಸಲು ನಿಜವಾಗಿಯೂ ಬದ್ಧನಾಗಿದ್ದೇನೆ. ನನ್ನ ಚಿಕಿತ್ಸೆಯು ಈಗಾಗಲೇ ಪ್ರಾರಂಭವಾಗಿದೆ ಮತ್ತು ಇದರಿಂದ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಬರಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಬರೆದುಕೊಂಡಿದ್ದರು. ಇದು ಪಬ್ಲಿಸಿಟಿಯ ಸ್ಟಂಟ್​ ಎಂದವರೂ ಇದ್ದಾರೆ. ಆದರೆ ಈಕೆಯ ನೋವಿಗೆ ಹಲವರು ಸ್ಪಂದಿಸಿದ್ದಾರೆ.  ಆಕೆಯ ಧೈರ್ಯದ ಮಾತುಗಳಿಗೆ ಅನೇಕ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಕ್ಯಾನ್ಸರ್​ ಸಮಯದಲ್ಲಿ ನೀಡಲಾಗುವ ಕಿಮೋ ಥೆರಪಿ ಹಲವು ಸಂದರ್ಭಗಳಲ್ಲಿ ಇದು ಅಡ್ಡ ಪರಿಣಾಮ ಬೀರುತ್ತದೆ. ಅದೇ ರೀತಿ ಹಿನಾ ಖಾನ್​ ಅವರಿಗೂ ಆಗಿದೆ. ಈ ಕುರಿತು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿಕೊಂಡಿರುವ ನಟಿ,  ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ  ಮ್ಯೂಕೋಸಿಟಿಸ್‌ನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ!  ನಟಿ ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್​ಡೇಟ್ ನೀಡುತ್ತಿದ್ದಾರೆ. ಈಗ ಮ್ಯೂಕೋಸಿಟಿಸ್‌ ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

Tap to resize

Latest Videos

undefined

ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್​ ಸಿಂಗ್

ಇವೆಲ್ಲವುಗಳ ನಡುವೆಯೇ ಹಿನಾ ಖಾನ್​ ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಮದುಮಗಳಂತೆ ರೆಡಿಯಾಗಿರುವ ನಟಿ, ತಮಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವಂತೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಸಾವನ್ನು ಜಯಿಸುವ ಬಲವಾದ ನಂಬಿಕೆಯೊಂದೇ ಇಂಥ ಮಹಾಮಾರಿಯನ್ನೂ ಹಿಮ್ಮೆಟ್ಟಿಸಲು ಸಾಧ್ಯ ಎನ್ನುವ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾನ್ಸರ್​ನಂಥ ರೋಗ ಮೈ ಹೊಕ್ಕಾಗ ಧೃತಿಗೆಡದೇ ಚಿಕಿತ್ಸೆಗೆ ಸ್ಪಂದಿಸಿದರೆ, ಸಾವು ಸಮೀಪ ಸುಳಿಯುವುದಿಲ್ಲ. ಮನೋಬಲದಿಂದ ಏನುಬೇಕಾದರೂ ಮಾಡಲು ಸಾಧ್ಯ ಎಂದಿರುವ ನೆಟ್ಟಿಗರು, ಇದಕ್ಕೆ ಹಿನಾ ಖಾನ್​ ಅವರೇ ಸಾಕ್ಷಿ ಎಂದಿದ್ದಾರೆ.

ಅಂದಹಾಗೆ, ಹಿಂದಿ ದೂರದರ್ಶನ ಉದ್ಯಮದಲ್ಲಿ ಜನಪ್ರಿಯ ಹೆಸರಾಗಿದ್ದಾರೆ ಹಿನಾ ಖಾನ್. ಬಿಗ್​ಬಾಸ್​ನಿಂದ ಫೇಮಸ್​ ಆಗಿರೋ ಇವರು ಕೆಲವು ಬಾಲಿವುಡ್​ ಚಿತ್ರಗಳಲ್ಲಿಯೂ ನಟಿಸಿದ್ದಾರೆ.  ಖತ್ರೋನ್ ಕೆ ಖಿಲಾಡಿ ಸೀಸನ್ 8, ನಾಗಿನ್ 5 ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದರಲ್ಲದೆ  ಹ್ಯಾಕ್, ಸ್ಮಾರ್ಟ್‌ಫೋನ್, ಲೈನ್‌ಗಳು, ವಿಶ್‌ಲಿಸ್ಟ್ ಮತ್ತು ಅನ್‌ಲಾಕ್  ಎಂಬ ಸಿನೆಮಾಗಳು ಮತ್ತು ಡ್ಯಾಮೇಜ್ಡ್ 2 ನ ಎರಡನೇ ಸೀಸನ್‌ ವೆಬ್-ಸರಣಿಯಲ್ಲಿ ಕೂಡ  ನಟಿಸಿದ್ದಾರೆ. ಪ್ರಖ್ಯಾತ ಸೀರಿಯಲ್​ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ಅಕ್ಷರಾ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತುಂಬಾ ಪ್ರಸಿದ್ಧರಾದರು. ನಟಿ ಕಸೌಟಿ ಜಿಂದಗಿ ಕೇ 2 ನಲ್ಲಿ ಕೂಡ ನಟಿಸಿದ್ದರು. ಆದರೆ ಇದೀಗ ನಟಿಯ ಬಾಳಿನಲ್ಲಿ ಬಿರುಗಾಳಿ ಎದ್ದಿದೆ. ಇತ್ತೀಚೆಗಷ್ಟೇ ನಟಿ ತಮಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಹಿರಂಗ ಪಡಿಸಿದ್ದರು.

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

click me!